ಹಲವು ಕಡೆ ಬೇರೆ ಬೇರೆ ರೀತಿಯಲ್ಲಿ ಮಟನ್ ಚಾಪ್ಸ್ ( Mutton Chops) ಮಾಡಿಕೊಳ್ಳುತ್ತಾರಾದರೂ, ಮೈಸೂರಿನ ಮನೆ–ಮನೆಗಳಲ್ಲಿ ತಯಾರಿಸುವ ಮಟನ್ ಚಾಪ್ಸ್ನ (Mysore Style Mutton Chops) ರುಚಿಯೇ ಬೇರೆ. ಮೈಸೂರು ಭಾಗದ ಮಟನ್ ಚಾಪ್ಸ್ ರೆಸಿಪಿ ಮಾಡಿ ತೋರಿಸಿದ್ದಾರೆ ಮುರಳಿ (Murali) ಮತ್ತು ಸುಚಿತ್ರಾ (Suchitra) ದಂಪತಿ. ಎಳೆಯ ಮಟನ್ ಅನ್ನು ಕುಕ್ಕರ್ ಮೂರು ಬಾರಿ ಕೂಗುವವರೆಗೆ ಬೇಯಿಸಿ, ಮಸಾಲೆ ಹಾಕಿ ಫ್ರೈ ಮಾಡಿದರೆ ಮಟನ್ ಚಾಪ್ಸ್ ಸಿದ್ಧ. ಕೆಮ್ಮು–ನೆಗಡಿಯಿಂದ ಗುಣಮುಖರಾಗಬೇಕೆಂದರೆ ಈ ರೆಸಿಪಿ ಉತ್ತಮ ಮದ್ದು! ರಾಗಿ ಮುದ್ದೆ (Finger Millet Balls) ಹಾಗೂ ಅನ್ನ (Rice) ಎರಡಕ್ಕೂ ಬೆಸ್ಟ್ ಕಾಂಬಿನೇಶನ್ ಈ ಮಟನ್ ಚಾಪ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.