ಮಳೆಗಾಲದಲ್ಲಿ ಉಳಿದಿರೊ (ತಂಗಳ) ಅನ್ನ ಉಣ್ಣಲು ಮನಸಬಾರದು, ಹಾಗಂತ ಅದನ್ನು ಕೆಡಿಸಲೂ ಆಗದು. ಆದರೆ ಇದೇ ಅನ್ನ ಉಪಯೋಗಿಸಿಕೊಂಡು ರುಚಿಕರವಾದ ತಾಲಿಪಟ್ಟು ತಯಾರಿಸಿದರೆ, ಮನೆ ಮಂದಿಯಲ್ಲ ನಾಲಿಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ.

ಬೇಕಾಗುವ ಸಾಮಗ್ರಿ:

ಅನ್ನ, ಗೋಧಿ ಹಿಟ್ಟು, ಜೋಳದ ಹಿಟ್ಟು, ಕಡ್ಲೆ ಹಿಟ್ಟು, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಪುದಿನಾ, ಉಪ್ಪು, ಕಾರದಪುಡಿ, ಅರಿಸಿನಪುಡಿ

ಮಾಡುವ ವಿಧಾನ:

ಮೊದಲಿಗೆ ಉಳಿದಿರೊ ಅನ್ನವನ್ನು ಮಿಕ್ಕ್ಸರ್ ಜಾರ್‌ಗೆ ಹಾಕಿ ಅದಕ್ಕೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಶುಂಠಿ, ಒಂದೆರೆಡು ಹಸಿ ಮೆಣಸಿನಕಾಯಿ, ಪುದಿನಾ ಎಲೆ ಹಾಕಿ ರುಬ್ಬಿಕೊಳ್ಳಬೇಕು.

ನಂತರ ಒಂದು ಪಾತ್ರೆಯಲ್ಲಿ ಅನ್ನದ ಮಿಶ್ರಣ ಹಾಕಿ ಅದಕ್ಕೆ ಒಂದು ಕಪ್ ಗೋಧಿ ಹಿಟ್ಟು, ಜೋಳದ ಹಿಟ್ಟು, ಕಡ್ಲೆ ಇಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಕಾರದಪುಡಿ, ಅರಿಸಿನಪುಡಿ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು. 10 ನಿಮಿಷ ಬಿಟ್ಟು ಚಪಾತಿಯಂತೆ ಲಟ್ಟಿಸಿ, ಬೇಯಿಸಬಹುದು ಅಥವಾ ಎಣ್ಣೆ ಕಾಯಲು ಇಟ್ಟು ಅಂಗೈಗೆ ಎಣ್ಣೆ ಹಚ್ಚಿಕೊಂಡು ವಡೆ ರೀತಿ ತಟ್ಟಿ ಎಣ್ಣೆಯಲ್ಲಿ ಕರೆದರೆ, ರುಚಿಕರವಾದ ಅನ್ನದ ತಾಲಿಪಟ್ಟು ಸವಿಯಲು ರೆಡಿ. ಇದನ್ನು ಟೊಮೆಟೊ ಸಾಸ್, ಚಿಲ್ಲಿ ಸಾಸ್‌ನೊಟ್ಟಿಗೆ ಹಚ್ಚಿಕೊಂಡು ತಿನ್ನಬಹುದು.

ಅಕ್ಕಿ ರೊಟ್ಟಿ

ಅಕ್ಕಿ ಹಿಟ್ಟು, ರಾಗಿ ಹಿಟ್ಟು, ಈರುಳ್ಳಿ, ಕ್ಯಾರೆಟ್, ಮೆಂತೆ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು, ಬೆಣ್ಣೆ

ಮಾಡುವ ವಿಧಾನ:

ಪಾತ್ರೆಯೊಂದರಲ್ಲಿ ಒಂದು ಕಪ್ ಅಕ್ಕಿ ಹಿಟ್ಟು, ಒಂದು ಕಪ್ ರಾಗಿ ಹಿಟ್ಟು, ಒಂದು ಕಪ್ ಸಣ್ಣಗೆ ಕತ್ತರಿಸಿದ ಈರುಳ್ಳಿ, ಒಂದು ಕಪ್ ತುರಿದ ಕ್ಯಾರೆಟ್, ಒಂದು ಕಪ್ ಸಣ್ಣಗೆ ಕತ್ತರಿಸಿದ ಮೆಂತೆ ಸೊಪ್ಪು, ಒಂದು ಚಮಚ ಕತ್ತರಿಸಿರುವ ಹಸಿ ಮೆಣಸಿನಕಾಯಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಬೇಕು.

10 ನಿಮಿಷ ಬಿಟ್ಟು ಲಟ್ಟಿಸಿ, ಚಪಾತಿ ಬೇಯಿಸುವ ಹಂಚಿನಲ್ಲಿ ಬೇಯಿಸಿ, ಮೇಲೆ ಬೆಣ್ಣೆ ಸವರಿದರೆ, ರುಚಿಕರವಾದ, ಆರೋಗ್ಯಕರ ರಕ್ಕಿ ರೊಟ್ಟಿ ಸವಿಯಲು ಸಿದ್ಧ. ಇದನ್ನು ಕೊಬ್ಬರಿ ಚಟ್ನಿಯೊಂದಿಗೆ ತಿನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.