‘ನೋಡಿ ಡಾಕ್ಟ್ರೇ ನನಗೆ ನಿನ್ನೆಯಿಂದ ಶೀತ, ನೆಗಡಿ. ಆದರೆ ಜ್ವರ ಏನೂ ಇಲ್ಲ. ಆದರೆ ನಾಡಿದ್ದು ಸೆಮಿನಾರ್ ಇದೆ. ತಕ್ಷಣ ಕಡಿಮೆ ಆಗುವ ಹಾಗೆ ಒಳ್ಳೆ ಆ್ಯಂಟಿಬಯಾಟಿಕ್ ಕೊಟ್ಟುಬಿಡಿ’ ಎಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಉಮಾ ಒತ್ತಾಯಿಸಿದರೆ, ಶಿಕ್ಷಕಿ ಸರಳ, ‘ಮೇಡಂ, ನೀವು ಹೋದಬಾರಿ ಜ್ವರಕ್ಕೆ ಮಾತ್ರೆ ಕೊಟ್ಟಾಗ 5 ದಿನಗಳಾದರೂ ಕಡಿಮೆ ಆಗಿರ್ಲಿಲ್ಲ. ಇನ್ನೊಬ್ಬ ಡಾಕ್ಟರ್ ಆ್ಯಂಟಿಬಯಾಟಿಕ್ ಮಾತ್ರೆ ಕೊಟ್ಟ ತಕ್ಷಣ ಎರಡೇ ದಿನಕ್ಕೆ ಕಡಿಮೆ ಆಯ್ತು’ ಎಂದಳು.

‘ನೋಡಿ, ವೈರಸ್ನಿಂದ ಬರುವ ಕಾಯಿಲೆಗೆ ಔಷಧ ತೆಗೆದುಕೊಂಡರೆ ಒಂದು ವಾರದೊಳಗೆ ಹೋಗುತ್ತದೆ’ ಎಂದಾಗ ಅವಳಿಗೆ ಅರ್ಥವಾಗಲಿಲ್ಲ. ಅವಳಿಗೆ ಆ್ಯಂಟಿಬಯಾಟಿಕ್ ರೆಸಿಸ್ಟೆನ್ಸ್ ಅಥವಾ ಪ್ರತಿರೋಧಕತೆಯ ಬಗ್ಗೆ ತಿಳಿಹೇಳಬೇಕಾಯಿತು.

ಏನಿದು ಆ್ಯಂಟಿಬಯಾಟಿಕ್ ಪ್ರತಿರೋಧಕತೆ?
ಆ್ಯಂಟಿಮೈಕ್ರೋಬಿಯಲ್ಸ್ ಎಂದರೆ ಮನುಷ್ಯ ಶರೀರರದಲ್ಲಿ ರೋಗವನ್ನುಂಟು ಮಾಡುವ ಸೂಕ್ಷ್ಮಜೀವಿಗಳು. ಅವು ಬ್ಯಾಕ್ಟೀರಿಯಾ, ಫಂಗಸ್, ವೈರಸ್ ಇತ್ಯಾದಿ ಇರಬಹುದು. ಇವುಗಳಿಂದ ಉಂಟಾಗುವ ರೋಗ ಹತ್ತಿಕ್ಕಲು ಈ ಸೂಕ್ಷ್ಮಜೀವಿಗಳನ್ನು ಕೊಲ್ಲುವ ಅಥವಾ ಬೆಳವಣಿಗೆಯನ್ನು ಕುಂಠಿತಗೊಳಿಸುವ ಔಷಧಿಗಳೇ ಆ್ಯಂಟಿಮೈಕ್ರೋಬಿಯಲ್ ಔಷಧಿಗಳು. ಅದರಲ್ಲಿ ಬ್ಯಾಕ್ಟೀರಿಯಾ ಎಂಬ ಸೂಕ್ಷ್ಮಜೀವಿಯನ್ನು ಕೊಲ್ಲುವ/ಕುಂಠಿತಗೊಳಿಸುವ ಔಷಧಿಗಳು ಆ್ಯಂಟಿಬಯಾಟಿಕ್ಗಳು ಅಥವಾ ಪ್ರತಿಜೀವಕಗಳು. ಟೈಫಾಯಿಡ್, ಕ್ಷಯ, ಕಾಲರಾ, ಮೆದುಳಿನ ಸೋಂಕು, ಇತ್ಯಾದಿಗಳಲ್ಲಿ ಈ ಆ್ಯಂಟಿಬಯಾಟಿಕ್ ಬಳಕೆ ಪ್ರಾಣರಕ್ಷಕವೆನಿಸುತ್ತದೆ.

1945ರ ನಂತರದಲ್ಲಿ ಪೆನ್ಸಿಲಿನ್ ಬಳಕೆಯಿಂದ ಆರಂಭವಾದ ಆ್ಯಂಟಿಬಯಾಟಿಕ್ ಯುಗ ವೈದ್ಯಕೀಯ ಜಗತ್ತಿನಲ್ಲಿ ಹೊಸ ಸಂಚಲನವನ್ನು ಉಂಟುಮಾಡಿ ಸಾವಿರಾರು ರೋಗಿಗಳ ಪ್ರಾಣ ಉಳಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಮೂಲೆಗಲ್ಲಾಗಿದ್ದು ನಿಜ. ಆದರೆ ದಿನ ಕಳೆದಂತೆ ಹೊಸ ಹೊಸ ಆ್ಯಂಟಿಬಯಾಟಿಕ್ಗಳ ಸಂಶೋಧನೆ ಹಾಗೂ ಔಷಧ ಕ್ಷೇತ್ರದಲ್ಲೂ, ಆಹಾರ ಉತ್ಪಾದನೆಯಲ್ಲೂ (ಉದಾ: ಮೊಟ್ಟೆಗಳ ಉತ್ಪಾದನೆಯಲ್ಲಿ ಕೊಲಿಸ್ಟಿನ್ ಬಳಕೆ) ವ್ಯಾಪಕವಾಗಿ, ನಿಯಮಗಳ ಉಲ್ಲಂಘನೆಯೂ ಆಗಿ ದುರ್ಬಳಕೆ, ತಪ್ಪುಬಳಕೆ ಮತ್ತು ಅತಿಬಳಕೆಯಿಂದ ಇಂದು ಆ್ಯಂಟಿಬಯಾಟಿಕ್ ಪ್ರತಿರೋಧಕ ಗುಣ ಹೆಚ್ಚಾಗುತ್ತಿದೆ.

ಇದರಿಂದಾಗುವ ಪರಿಣಾಮಗಳೇನು?
ಆ್ಯಂಟಿಬಯಾಟಿಕ್ ಔಷಧಿ ಉಪಯೋಗಿಸಬೇಕಾದರೆ ಅದರ ಪ್ರಮಾಣ ಮತ್ತು ಎಷ್ಟು ಅವಧಿಯವರೆಗೆ ಸೇವಿಸಬೇಕು, ನಿರ್ದಿಷ್ಟ ಸೋಂಕಿಗೆ, ನಿರ್ದಿಷ್ಟ ಮಾತ್ರೆಗಳು ಈ ಎಲ್ಲಾ ಅಂಶಗಳನ್ನು ಗುರಿಯಾಗಿಟ್ಟುಕೊಂಡು ಕೊಡಬೇಕಾಗುತ್ತದೆ. ಈ ನಿಯಮಗಳು ಪಾಲನೆಯಾಗದಿದ್ದಾಗ, ದುರ್ಬಳಕೆಯಾದಾಗ ಆ್ಯಂಟಿಬಯಾಟಿಕ್ ಪ್ರತಿರೋಧಕತೆ ಉಂಟಾಗುತ್ತದೆ. ಅಂದರೆ ಬ್ಯಾಕ್ಟೀರಿಯಾಗಳು ಅವುಗಳನ್ನು ಕೊಲ್ಲಬೇಕಾದ ಔಷಧಿಗಳಿಂದ ಕೊಲ್ಲಲ್ಪಡದೆ/ ನಿಯಂತ್ರಿಸಲ್ಪಡದೆ ಕಾಯಿಲೆಗಳನ್ನು ಉಲ್ಬಣಗೊಳಿಸುತ್ತವೆ.

ಇತ್ತೀಚೆಗೆ ಜಗತ್ತಿನಾದ್ಯಂತ ಈ ಆ್ಯಂಟಿಬಯಾಟಿಕ್ ಪ್ರತಿರೋಧಕತೆ ಯಾವ ಮಟ್ಟಕ್ಕೆ ತಲುಪುತ್ತಿದೆ ಎಂದರೆ ನಮ್ಮಿಂದ ಸಾಮಾನ್ಯ ಸೋಂಕುಗಳಿಗೂ ಚಿಕಿತ್ಸೆ ಕೊಡುವ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತಿದೆ. ಇದರಿಂದ ಇಂತಹ ಸಾಮಾನ್ಯ ಸೋಂಕುಗಳಿಂದಲೂ ಮನುಷ್ಯನು ದೀರ್ಘಾವಧಿ ನರಳುವ ಹಾಗಾಗಿ ಸಾವು ಕೂಡ ಉಂಟಾಗಬಹುದು. ಇಂತಹ ದಿನಗಳು ಹತ್ತಿರವಿಲ್ಲದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಮತ್ತು ಇದು ಯಾವಾಗ ಬೇಕಾದರೂ, ಯಾರನ್ನಾದರೂ ಯಾವ ದೇಶದಲ್ಲೂ ಬಾಧಿಸಬಹುದು. ಆದ್ದರಿಂದ 2015ರ ಜಾಗತಿಕ ಆರೋಗ್ಯ ಸಮಾವೇಶದಲ್ಲಿ ಈ ಬಗ್ಗೆ ಕಾರ್ಯಸೂಚಿಯನ್ನು ನಿಗದಿಪಡಿಸಲಾಯಿತು.

ಜನಸಾಮಾನ್ಯರಲ್ಲಿ, ಆರೋಗ್ಯ ಸಿಬ್ಬಂದಿಗಳಲ್ಲಿ ಆ್ಯಂಟಿಬಯಾಟಿಕ್ ಬಳಕೆಗಳ ಬಗ್ಗೆ ಸೂಕ್ತ ಮಾಹಿತಿ, ಸಂವಹನ ಹಾಗೂ ತರಬೇತಿಗಳು ನಡೆದು ಅರಿವನ್ನು ಹೆಚ್ಚಿಸಬೇಕು. ಎಷ್ಟೋ ಜನರು ವೈದ್ಯರ ಸಲಹೆಯಿಲ್ಲದೇ ತಾವೇ ಔಷಧದಂಗಡಿಯಲ್ಲಿ ತೆಗೆದುಕೊಂಡು ಸ್ವಲ್ಪ ಆರಾಮೆನಿಸಿದ ತಕ್ಷಣ ಮಾತ್ರೆಗಳನ್ನು ನಿಲ್ಲಿಸಿಬಿಡುತ್ತಾರೆ. ಇನ್ನು ಕೆಲವರು ಸಣ್ಣ ಜ್ವರಕ್ಕೂ ಹಲವು ಮಾತ್ರೆಗಳನ್ನು ಬರೆದುಕೊಡುತ್ತಾರೆ. ಈ ಮಾತ್ರೆಗಳಲ್ಲಿ ನೋವು ನಿವಾರಕ ಮಾತ್ರೆಗಳು ಯಾವವು, ಆ್ಯಂಟಿಬಯಾಟಿಕ್ ಯಾವುದು ಎಂಬ ವ್ಯತ್ಯಾಸವೂ ಗೊತ್ತಿಲ್ಲದೆ ಮಾತ್ರೆಗಳನ್ನು ಕೊಡುವವರೂ, ಸೇವಿಸುವವರೂ ನಮ್ಮ ನಡುವೆ ಸಾಕಷ್ಟಿದ್ದಾರೆ. ಅಷ್ಟೇ ಅಲ್ಲ, ಸ್ವಲ್ಪ ನೆಗಡಿ, ಶೀತ, ಇನ್ನಿತರ ವೈರಸ್ ಸೋಂಕಿನಿಂದ ಬರುವ ಜ್ವರಗಳಿಗೆ ಅವಸರ ಮಾಡಿ ಆ್ಯಂಟಿಬಯಾಟಿಕ್ ಸೇವಿಸುವ ಮಂದಿಯೂ ಹಲವರಿದ್ದಾರೆ. ಹೆಚ್ಚಿನ ವೈರಸ್ ಕಾಯಿಲೆಗಳಲ್ಲಿ ಆ್ಯಂಟಿಬಯಾಟಿಕ್ನಿಂದ ಏನೂ ಪ್ರಯೋಜನವಾಗುವುದಿಲ್ಲ, ಅವುಗಳ ಬಳಕೆಯೂ ಸೂಕ್ತವಲ್ಲ. ಆದ್ದರಿಂದ ವೈದ್ಯರು, ರೋಗಿಗಳು, ತಾಳ್ಮೆ ಕಳೆದುಕೊಳ್ಳದೆ ಆ್ಯಂಟಿಬಯಾಟಿಕ್ಗಳ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು.

ಹೇಗಿರಬೇಕು?

* ನುರಿತ ತಜ್ಞರ ಸಲಹೆ ಇಲ್ಲದೆ ಆ್ಯಂಟಿಬಯಾಟಿಕ್ಗಳ ಸೇವನೆ ಮಾಡಬಾರದು.

* ಕುಟುಂಬದ ಸದಸ್ಯರಿಂದ ಹಿಡಿದು ಯಾರೊಂದಿಗೂ ಆ್ಯಂಟಿಬಯಾಟಿಕ್ಗಳನ್ನು ಹಂಚಿಕೊಳ್ಳವ ಅಭ್ಯಾಸ ಬೇಡ.

* ಅರ್ಧಂಬರ್ಧ ಆ್ಯಂಟಿಬಯಾಟಿಕ್ಗಳನ್ನು ಉಪಯೋಗಿಸಿ ನಿಲ್ಲಿಸದೇ ತಜ್ಞರ ಸಲಹೆಯಮೇರೆಗೆ ಸರಿಯಾದ ಪ್ರಮಾಣದ ಮಾತ್ರೆಗಳನ್ನು ನಿರ್ದಿಷ್ಟ ಅವಧಿಯವರೆಗೆ ಸೇವಿಸಬೇಕು.

* ಸೋಂಕು ಬರದ ಹಾಗೆ ಮುಂಜಾಗ್ರತೆ ವಹಿಸುವುದು ಆ್ಯಂಟಿಬಯಾಟಿಕ್ ಪ್ರತಿರೋಧಕತೆ ತಪ್ಪಿಸಲು ಉತ್ತಮ ವಿಧಾನ.

* ಕೇವಲ ಸ್ವಚ್ಛವಾಗಿ ಕೈ ತೊಳೆಯುವುದರಿಂದ ಎಷ್ಟೋ ಸೋಂಕುಗಳನ್ನು ನಿವಾರಿಸಬಹುದು.

* ಸೂಕ್ತ ತ್ಯಾಜ್ಯ ವಿಲೇವಾರಿಯಿಂದಲೂ ಸೋಂಕುಗಳನ್ನು ತಡೆಗಟ್ಟಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.