ಮಳೆಗಾಲದಲ್ಲಿ ಚಳಿ, ಚಳಿಗಾಲದಲ್ಲಿ ಬೇಸಿಗೆ... ಹೀಗೆ ಋತುಮಾನಗಳಲ್ಲಿನ ಏರುಪೇರು ಕಳೆದ ಕೆಲ ವರ್ಷಗಳಿಂದ ಸಾಮಾನ್ಯ. ಈ ಏರುಪೇರು ನಮ್ಮ ದೇಹಾರೋಗ್ಯ ಹಾಗೂ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಶುಷ್ಕ ಹಾಗೂ ಒಣಚರ್ಮ, ತಲೆ ಹೊಟ್ಟು.. ಇಂತಹ ಸಮಸ್ಯೆಗಳು ಹೆಚ್ಚುತ್ತವೆ. ಇಂಥ ಸಂದರ್ಭದಲ್ಲಿ ಹೆಚ್ಚು ಕಾಳಜಿ ಅಗತ್ಯ.ಈ ನಡುವೆ ಕೊರೊನಾ ಕಾರಣದಿಂದಾಗಿ ಅತಿಯಾದ ಸ್ಯಾನಿಟೈಸರ್ ಬಳಕೆ ಯಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಹಾಗಾದರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹೇಗೆ? ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಅತಿಯಾದ ಸ್ಯಾನಿಟೈಸರ್ ಬಳಕೆಯಿಂದ ತ್ವಚೆ ಶುಷ್ಕವಾಗುವುದು, ಒಣಗುವುದು ಸೇರಿದಂತೆ ಬೇರೆ ಬೇರೆ ಚರ್ಮದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದರ ಪರಿಹಾರಕ್ಕೆ ತೆಂಗಿನ ಎಣ್ಣೆಯ ಅಂಶಗಳಿರುವ ಕ್ರೀಮ್, ಮಾಯಿಶ್ಚರೈಸರ್‌ಗಳನ್ನು ಬಳಸಬೇಕು.

ಬದಲಾದ ಋತುಮಾನದಲ್ಲಿ ಚರ್ಮವನ್ನು ಮಾಯಿಶ್ಚರೈಸ್ ಮಾಡಲು ಮತ್ತು ಒಣ ಚರ್ಮದ ಸಮಸ್ಯೆಯಿಂದ ರಕ್ಷಿಸಲು ವಾರಕ್ಕೆ 3 ರಿಂದ 4 ಬಾರಿ ಹೈಲುರೋನಿಕ್ ಆ್ಯಸಿಡ್‌ನಂತಹ ಅಂಶಗಳನ್ನು ಒಳಗೊಂಡಿರುವ ಹೈಡ್ರೇಟಿಂಗ್ ಮಾಸ್ಕ್‌ಗಳನ್ನು(ಫೇಸ್‌ಮಾಸ್ಕ್) ಹಚ್ಚಬೇಕು. ಹೈಲುರೋನಿಕ್ ಆ್ಯಸಿಡ್ ಚರ್ಮವನ್ನು ಮೃದುವಾಗಿಸಿ ತೇವಾಂಶದ ಮಟ್ಟ ನಿರ್ವಹಿಸುತ್ತದೆ. ಸೂಕ್ಷ್ಮ ರೇಖೆಗಳನ್ನು ಮೃದುವಾಗಿಸುತ್ತದೆ ಮತ್ತು ತೈಲ ಗ್ರಂಥಿಗಳ ಉತ್ಪಾದನೆಯನ್ನು ಸಮತೋಲನಗೊಳಿಸಿ ಚರ್ಮದ ಕಾಂತಿ ಹೆಚ್ಚಿಸುತ್ತದೆ.

ರಾತ್ರಿ ಮಲಗುವ ಮುನ್ನ ತ್ವಚೆಗೆ ಹ್ಯುಮಿಡಿಫೈಯರ್ ಬಳಸಬೇಕು. ಇದು ಚರ್ಮದಲ್ಲಿನ ತೇವಾಂಶ ಆರದಂತೆ ತಡೆಗೋಡೆ ರೀತಿ ವರ್ತಿಸುವುದರಿಂದ, ಚರ್ಮ ಶುಷ್ಕವಾಗಲು ಬಿಡುವುದಿಲ್ಲ.

ಪದೇ ಪದೇ ಸ್ಯಾನಿಟೈಸರ್ ಬಳಕೆ ಒಳೆಯದಲ್ಲ. ಸ್ಯಾನಿಟೈಸರ್ ಬಳಸಿದ ಮೇಲೆ ರಾತ್ರಿ ವೇಳೆ ಕೈಗಳಿಗೆ ತೆಂಗಿನೆಣ್ಣೆ ಹಚ್ಚಿಕೊಳ್ಳಬೇಕು. ಲೋಳೆಸರದ ಜೆಲ್ ಕೂಡ ಹಚ್ಚಬಹುದು.

ಉಗುರಿನ ಆರೈಕೆ
ಅತಿಯಾದ ಸ್ಯಾನಿಟೈಸರ್ ಬಳಕೆ ಕೂಡ ಉಗುರಿನ ಹಾನಿಗೆ ಕಾರಣವಾಗಬಹುದು. ಉಗುರನ್ನು ಸದಾ ಒದ್ದೆಯಾಗಿರಲು ಬಿಡಬೇಡಿ ಮತ್ತು ಸ್ವಚ್ಛವಾಗಿರಿಸಿಕೊಳ್ಳಿ.

ಉಗುರಿನ ಸುತ್ತಲಿನ ಚರ್ಮ ಒಡೆಯುವುದು ಮತ್ತು ಬಿರುಕು ಬಿಡುವುದನ್ನು ತಡೆಯಲು ದಿನದಲ್ಲಿ ಮೂರ್ನಾಲ್ಕು ಬಾರಿ ಕ್ರೀಮ್ ಹಚ್ಚಿಕೊಳ್ಳಿ.

ವಾರಕ್ಕೊಮ್ಮೆ ಉಗುರನ್ನು ಬೆಚ್ಚಗಿನ ನೀರಿನಲ್ಲಿ ಕೆಲ ನಿಮಿಷಗಳ ಕಾಲ ನೆನೆಸಿ ನಂತರ ಚೆನ್ನಾಗಿ ಒರೆಸಿ ತೆಂಗಿನ ಎಣ್ಣೆಯ ಅಂಶಗಳಿರುವ ಕ್ರೀಮ್ / ತೈಲವನ್ನು ಹಚ್ಚಬೇಕು. ಇದು ಚರ್ಮದ ಆಳದಲ್ಲಿ ಉಗುರಿನ ಆಕಾರ ತುಂಡಾಗುವುದನ್ನು ತಡೆಯುತ್ತದೆ ಮತ್ತು ಚರ್ಮದಲ್ಲಿನ ತೇವವನ್ನು ಪರಿಣಾಮಕಾರಿಯಾಗಿ ಉಳಿಸಿಕೊಳ್ಳುತ್ತದೆ.

ಉಗುರಿನ ಹೊರಪೊರೆಗಳನ್ನು ಕೀಳದಿರಿ. ಇದರಿಂದ ಉಗುರಿನ ಒಳಭಾಗಕ್ಕೆ ತೊಂದರೆಯಾಗುತ್ತದೆ ಹಾಗೂ ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಗೆ ಇದು ಕಾರಣವಾಗಬಹುದು.

ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ನೇಲ್ ಪೇಂಟ್ ರಿಮೂವರ್ ಬಳಸಬೇಡಿ ಅಥವಾ ಅಸೆಟೋನ್-ಮುಕ್ತ ನೇಲ್ ಪೇಂಟ್ ರಿಮೂವರ್ ಬಳಕೆ ಮಾಡಿ. ಆದರೆ, ನಿಮ್ಮ ಉಗುರಿನ ಪೇಂಟ್ ಅನ್ನು ಮೃದುವಾಗಿ ತೆಗೆಯಿರಿ. ಏಕೆಂದರೆ, ನೇಲ್ ಪೇಂಟ್ ರಿಮೂವರ್‌ನ ಪ್ರಮುಖ ಅಂಶವಾಗಿರುವ ಅಸೆಟೋನ್, ಉಗುರನ್ನು ಶುಷ್ಕವಾಗಿಸುತ್ತದೆ.

ಉಗುರು ಆರೋಗ್ಯವಾಗಿರಲು ಹಾಗೂ ಅದರ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಸಮತೋಲಿತ ಆಹಾರ ಅಗತ್ಯ. ಬಯೋಟಿನ್, ಒಮೇಗಾ 3- ಫ್ಯಾಟಿ ಆ್ಯಸಿಡ್, ಪ್ರೊಟೀನ್, ವಿಟಮಿನ್ ಎ ಮತ್ತು ಝಿಂಕ್ ಹೊಂದಿರುವ ಆಹಾರಗಳು ಉಗುರಿನ ಆರೋಗ್ಯಕ್ಕೆ ಉತ್ತಮವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.