ಸ್ನಾಯು ಸೆಳೆತ, ಮೂಳೆನೋವು, ಸಾಮಾನ್ಯವಾಗಿ ವಯಸ್ಸಾಗಿರುವವರಲ್ಲಿ ಕಂಡು ಬರುವುದು ಸಾಮಾನ್ಯ. ಇದನ್ನು ನಿವಾರಿಸುವಲ್ಲಿ ಪ್ರಚಲಿತವಾಗಿರುವ ಚಿಕಿತ್ಸಾ ವಿಧಾನವೆಂದರೆ ಅದು ಗ್ಯೂ ಷಾ(Gua sha) ಈಶಾನ್ಯ ಏಷ್ಯಾ ಖಂಡದಲ್ಲಿ ಪ್ರಚಲಿತ ಪದ್ಧತಿ. ಈ ಚಿಕಿತ್ಸಾ ವಿಧಾನವು ಚೀನಾದಲ್ಲಿ ಹುಟ್ಟಿದಾದರೂ ಪ್ರಪಂಚದಾದ್ಯಂತ ಪ್ರಚಲಿತವಾಗುತ್ತಿದೆ. ಈ ಪದ್ಧತಿ ಮೇಲೆ ಅನೇಕ ಅಧ್ಯಯನಗಳು ನಡೆಯುತ್ತಿವೆ.ಈ ಪದ್ಧತಿಯು ಸೌಂದರ್ಯ ಚಿಕಿತ್ಸೆಗಳಲ್ಲಿ ಪ್ರಚಲಿತವಾಗಿದ್ದು, ಈಗ ಮೂಳೆ ಹಾಗೂ ಸ್ನಾಯುಗಳ ನೋವಿನ ನಿವಾರಣೆಗೂ ಬಳಸಲಾಗುತ್ತಿದೆ. ಕರ್ನಾಟಕದಲ್ಲೂ ಸಹ ಅನೇಕ ಕಡೆ ಈ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ಗ್ಯೂ ಷಾ ಚಿಕಿತ್ಸಾ ವಿಧಾನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಏನಿದು ಗ್ಯೂ ಷಾ?

ಗ್ಯೂ ಷಾ ಎಂದರೆ ಒಂದು ಶಕ್ತಿಯನ್ನು ಸಂಚಲನ ಮಾಡುವ ವಿಧಾನ. ಇದನ್ನು ಮಾಡಲು ಕೆಲವು ಸಾಧನಗಳನ್ನು ಬಳಸಲಾಗುತ್ತದೆ. ಈ ಸಾಧನಗಳನ್ನು ಉಪಯೋಗಿಸಿ ಸ್ನಾಯುಗಳ ಮೇಲೆ ಅಥವಾ ಮೂಳೆಯ ಮೇಲೆ ಒತ್ತಡ ಹೇರುವುದರಿಂದ ಹಾಗೂ ಸ್ಕ್ರೇಪ್ ಮಾಡುವುದರಿಂದ ಚರ್ಮದ ಮೇಲೆ ಕೆಂಪು ಅಥವಾ ನೀಲಿ ಮಚ್ಚೆಗಳು ಸೃಷ್ಟಿಯಾಗುತ್ತದೆ. ಇದನ್ನೇ ಷಾ ಎನ್ನಲಾಗುವುದು. ಇದು ಚೈನೀಸ್ ಸಂಸ್ಕೃತಿಯಲ್ಲಿ ಪ್ರಚಲಿತ.

ಗ್ಯೂ ಷಾ ಪದ್ಧತಿಯ ಉಪಯೋಗಗಳು: ರಕ್ತ ಸಂಚಲನೆಯು ಕುಂಟಿತವಾಗುವುದರಿಂದ ಸ್ನಾಯುಗಳಲ್ಲಿ ನೋವುಂಟು ಮಾಡುತ್ತದೆ ಎಂಬುದು ಈ ಚಿಕಿತ್ಸಾ ವಿಧಾನದ ನಂಬಿಕೆ. ಆದುದರಿಂದ ಸ್ನಾಯು ಸೆಳೆತ, ಮೂಳೆ ನೋವು ನಿವಾರಣೆಗೆ ಈ ಚಿಕಿತ್ಸಾ ವಿಧಾನ ಪೂರಕ.
ಶರೀರದ ಆಂತರಿಕ ಶಕ್ತಿಯನ್ನು ರಕ್ತ ಸಂಚಲನೆಯಿಂದ ಹೆಚ್ಚಿಸುವುದರಿಂದ ಸಾಮಾನ್ಯ ಉರಿಯೂತವನ್ನು ಕಡಿಮೆ ಮಾಡಬಹುದಾಗಿದೆ ಎಂಬುದು ಇದರ ನಂಬಿಕೆ.

ಸಣ್ಣ ಪೆಟ್ಟುಗಳು ಹಾಗೂ ಗಾಯಗಳನ್ನು ವಾಸಿ ಮಾಡಬಹುದಾಗಿದೆ ಎಂದು ಹೇಳಲಾಗುತ್ತಿದೆ. ಅಧ್ಯಯನಗಳ ಪ್ರಕಾರ ಪ್ರೀ ಮೆನೋಪಾಸಲ್ ಲಕ್ಷಣಗಳು, ಕುತ್ತಿಗೆ ನೋವು, ಭುಜನೋವು ನಿವಾರಣೆಯಾಗಬಹುದಾಗಿದೆ.

ಗ್ಯೂ ಷಾ ಚಿಕಿತ್ಸಾ ವಿಧಾನಗಳ ಭಾದಕಗಳು: ಚರ್ಮದ ಮೇಲಿನ ಒತ್ತಡದಿಂದ ಸಣ್ಣ ರಕ್ತನಾಳಗಳು ಒಡೆದು ಕೆಂಪು ಅಥವಾ ನೀಲಿ ಮಚ್ಚೆಗಳಾಗಬಹುದು. ಇದು ಕೆಲವು ದಿನಗಳಲ್ಲಿ ಅಥವಾ ವಾರಗಳಲ್ಲಿ ವಾಸಿಯಾಗಬಹುದಾಗಿದೆ. ಗ್ಯೂ ಷಾ ಪದ್ಧತಿಯನ್ನು ರಕ್ತನಾಳಗಳ ಸಮಸ್ಯೆಯುಳ್ಳವರು, ರಕ್ತಸ್ರಾವ ಸಮಸ್ಯೆಯಿರುವವರು, ಹೃದಯ ಸಂಬಂಧಿ ಕಾಯಿಲೆಯಿರುವವರು ಒಳಗಾಗುವುದು ಒಳಿತಲ್ಲ ಎನ್ನಬಹುದಾಗಿದೆ.

ತಜ್ಞರ ಮಾರ್ಗದರ್ಶನದಲ್ಲೇ ಈ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ.

ಲೇಖಕರು: ಡಾ. ಸ್ಮಿತಾ ಜೆ.ಡಿ., ಹಿರಿಯ ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.