ಮಹಿಳೆಯರು ಸೌಂದರ್ಯ ಪ್ರಿಯರು. ಮುಖದ ಅಂದ ಚೆಂದಕ್ಕೆ ವಿವಿಧ ರೀತಿಯ ಪ್ರಯತ್ನಗಳನ್ನು ಮಾಡುತ್ತಿರು ತ್ತಾರೆ. ಅದರಲ್ಲೂ ‘ಹುಬ್ಬು‘ ಅನ್ನು ಆರೋಗ್ಯವಾಗಿಟ್ಟುಕೊಳ್ಳಲು ತುಂಬಾ ಕಾಳಜಿ ವಹಿಸುತ್ತಾರೆ. ಏಕೆಂದರೆ, ಹುಬ್ಬುಗಳು ವದನಕ್ಕೆ ಮೆರುಗು ನೀಡುವುದಲ್ಲದೇ, ಕಣ್ಣುಗಳನ್ನು ರಕ್ಷಿಸುವಲ್ಲಿ ಸಹಕಾರಿಯಾಗಿವೆ.

ಇಂಥ ಹುಬ್ಬುಗಳಿಗೆ ಹೊಟ್ಟಿನ(ಡ್ಯಾಂಡ್ರಫ್) ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಇದರಿಂದ ಮುಖದ ಸೌಂದರ್ಯ ಕುಂದುವ ಜೊತೆಗೆ, ಕಿರಿ ಕಿರಿ ಉಂಟು ಮಾಡುತ್ತದೆ.

ಈ ಸಮಸ್ಯೆಗೆ ಕಾರಣವೇನು?

ತಲೆ ಹೊಟ್ಟಿನ ಸಮಸ್ಯೆ ಇರುವವರಲ್ಲಿ, ತಲೆಯಲ್ಲಿಯಾಗುವ ಸೋರಿಯಾಸಿಸ್(ಸ್ಕಾಲ್ಪ್), ಒಣಚರ್ಮ, ದೇಹದಲ್ಲಿ ಸೋರಿಯಾಸಿಸ್ ಇರುವವರಲ್ಲಿ ಹುಬ್ಬಿನ ಹೊಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗಳಿರುವವರು ಸರಿಯಾದ ಚಿಕಿತ್ಸೆ ತಗೊಂಡರೆ, ಹುಬ್ಬಿನ ಹೊಟ್ಟು ಕಡಿಮೆಯಾಗುತ್ತದೆ.

ಹುಬ್ಬಿನಲ್ಲಿ ಹೊಟ್ಟಾಗಿದ್ದರೆ, ತುರಿಕೆ/ ನೆವೆ ಬರುತ್ತದೆ. ಸ್ವಲ್ಪ ಉರಿ ಉರಿ ಕಾಣಿಸಿಕೊಳ್ಳುತ್ತದೆ. ಇದು ದೀರ್ಘಕಾಲ ವಿರುತ್ತದೆ. ದೇಹದ ಯಾವುದೇ ಭಾಗದಲ್ಲಿ ಚರ್ಮದ ಸಮಸ್ಯೆ ಇದ್ದರೂ, ಹುಬ್ಬಿನಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಪರಿಹಾರಗಳು

* ಶುಭ್ರವಾದ ಬಟ್ಟೆಯನ್ನು ತಂಪಾದ ನೀರಿನಲ್ಲಿ ಅದ್ದಿ ಹಿಂಡಿ ಹುಬ್ಬುಗಳನ್ನು ಸೂಕ್ಷ್ಮವಾಗಿ ಸವರುತ್ತಿರಿ. ಈ ರೀತಿ ಪ್ರತಿ ನಿತ್ಯ 15 ನಿಮಿಷಗಳ ಕಾಲ ಮಾಡಿ.

* ತೆಂಗಿನಕಾಯಿ ನೀರು, ಬೆಣ್ಣೆಹಣ್ಣು, ಟೀ ಟ್ರೀ ತರಹದ ನೈಸರ್ಗಿಕ ತೈಲವನ್ನು ಹುಬ್ಬುಗಳಿಗೆ ಹಚ್ಚುವುದರಿಂದ ಹೊಟ್ಟಾಗುವುದನ್ನು ತಪ್ಪಿಸಬಹುದು.

* ಹುಬ್ಬುಗಳಿಗೆ ಆಲಿವ್ ಎಣ್ಣೆ ಹಚ್ಚಿ ಕೆಲ ಕಾಲ ನುಣುಪಾಗಿ ಮಸಾಜ್ ಮಾಡಿ. ನಂತರ ತೊಳೆಯಿರಿ.

ಆಹಾರವೂ ಮುಖ್ಯ:

* ದೇಹದ ಇತರ ಭಾಗಗಳಲ್ಲಿ ಚರ್ಮದ ಸಮಸ್ಯೆ ಇದ್ದರೆ, ಕೇವಲ ಹುಬ್ಬಿನ ಚಿಕಿತ್ಸೆಯಿಂದ ಪ್ರಯೋಜನ ವಾಗುವುದಿಲ್ಲ. ಹಾಗಾಗಿ, ಚರ್ಮದ ಸಮಸ್ಯೆಗೂ ಚಿಕಿತ್ಸೆ ಪಡೆಯುವ ಅಗತ್ಯವಿದೆ.

* ಚಿಕಿತ್ಸೆಯ ಜೊತೆಗೆ, ಹೆಚ್ಚು ದ್ರವಾಂಶ, ತೈಲಾಂಶವಿರುವ (ಬಾದಾಮಿ, ಶೇಂಗಾ.. ಇತ್ಯಾದಿ) ಆಹಾರ ಸೇವಿಸಬೇಕು.

* ಒಂದು ಚಮಚ ಅರಿಸಿನವನ್ನು ಬಿಸಿಹಾಲು ಅಥವಾ ಬಿಸಿ ನೀರಿಗೆ ಹಾಕಿ ಕುಡಿಯಬಹುದು.

* ಚಳಿ ಮತ್ತು ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ, ಆ ಕಾಲಗಳಿಗೆ ಮುನ್ನವೇ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳವುದು ಒಳ್ಳೆಯದು.

ಎಚ್ಚರಿಕೆ ಕ್ರಮಗಳು:

* ಹುಬ್ಬು ಕಣ್ಣಿನ ಮೇಲ್ಭಾಗದಲ್ಲಿರುವುದರಿಂದ, ಯಾವುದೇ ಚಿಕಿತ್ಸೆ ಮಾಡಿಕೊಳ್ಳುವಾಗ ಎಚ್ಚರಿಕೆ ಇರಬೇಕು. ಕಣ್ಣಿಗೆ ಬೀಳದಂತೆ ರಕ್ಷಣೆ ಮಾಡಿಕೊಳ್ಳಬೇಕು.

* ಮುಖ ತೊಳೆಯಲು ಬಳಸುವ ಸೋಪ್, ಫೇಸ್‌ವಾಷ್, ಮೇಕಪ್‌ಗೆ(ಪ್ರಸಾದನ) ಬಳಸುವ ಕ್ರೀಮ್‌ಗಳನ್ನು, ‘ತಮಗೆ ಅಲರ್ಜಿ ಆಗುತ್ತೆಯೇ‘ ಎಂಬುದನ್ನೂ ಪರೀಕ್ಷಿಸಿ ನಂತರ ಬಳಸಬೇಕು.

* ಚರ್ಮದ ಅಲರ್ಜಿ ಸಮಸ್ಯೆ ಇದ್ದವರಿಗೆ ಈ ಹುಬ್ಬಿನ ಹೊಟ್ಟಿನ ಸಮಸ್ಯೆ ಹೆಚ್ಚು ಬಾಧಿಸುತ್ತದೆ. ಈ ಬಗ್ಗೆಯೂ ಎಚ್ಚರವಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.