ಆರೋಗ್ಯಕರವಾದ ಮಗುವನ್ನು ಹೊಂದಲು ಗರ್ಭಧಾರಣೆಯ ಮೊದಲು ಕೆಲವು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಆದರೆ ಒಂದು ಮುಖ್ಯವಾದ ವಿಷಯವನ್ನು ನೆನಪಿನಲ್ಲಿಡಬೇಕು– ಪ್ರತಿಯೊಬ್ಬ ಮಹಿಳೆಯ ದೇಹವು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುತ್ತದೆ ಮತ್ತು ಮಗುವನ್ನು ಹೆರಲು ಸಿದ್ಧವಾಗುವ ಮುನ್ನ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.

ತಾಯ್ತನದ ಅನುಭವ ಹೊಂದಲು ಬಯಸುವ ಮಹಿಳೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ 9 ತಿಂಗಳು ಕಳೆದರೆ ಸಾಕು ಎಂಬ ಬಯಕೆಯೂ ಮನಸ್ಸಿನಲ್ಲಿರುತ್ತದೆ. ಆರೋಗ್ಯಕರವಾದ ಮಗುವನ್ನು ಹೊಂದಲು ಗರ್ಭಧಾರಣೆಯ ಮೊದಲು ಕೆಲವು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಆದರೆ ಒಂದು ಮುಖ್ಯವಾದ ವಿಷಯವನ್ನು ನೆನಪಿನಲ್ಲಿಡಬೇಕು– ಪ್ರತಿಯೊಬ್ಬ ಮಹಿಳೆಯ ದೇಹವು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುತ್ತದೆ ಮತ್ತು ಮಗುವನ್ನು ಹೆರಲು ಸಿದ್ಧವಾಗುವ ಮುನ್ನ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ.

ನಿಮ್ಮ ವೈದ್ಯರನ್ನು ಸಂಪರ್ಕಿಸಿ
ಗರ್ಭವತಿಯಾಗುವ ಮುನ್ನ ಪೂರ್ವಭಾವಿ ಆರೋಗ್ಯ, ಆರೈಕೆ ಬಗ್ಗೆ ನಿಮ್ಮ ವೈದ್ಯರಲ್ಲಿ ಚರ್ಚಿಸಿ ಮತ್ತು ತಾಯಿಯಾಗಲು ಬಯಸುವ ಮಹಿಳೆ ತನಗಿರುವ ಹಾಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯರ ಬಳಿ ಯಾವುದೇ ಮುಚ್ಚುಮರೆಯಿಲ್ಲದೇ ಹೇಳಿಕೊಳ್ಳಬೇಕು. ಮೊದಲ ಮಗುವೆ ಅಥವಾ ಎರಡನೇ ಮಗುವೆ ಎಂಬುದನ್ನು ಕೂಡ ಇಲ್ಲಿ ಪರಿಗಣಿಸುತ್ತಾರೆ.

ಆರೋಗ್ಯ ಸಮಸ್ಯೆ
ಲೈಂಗಿಕವಾಗಿ ಹರಡಿರುವ ರೋಗಗಳು (ಎಸ್‌ಟಿಡಿಗಳು), ಮಧುಮೇಹ, ಥೈರಾಯ್ಡ್, ಅಧಿಕ ರಕ್ತದೊತ್ತಡ ಅಥವಾ ಇನ್ನಿತರೆ ದೀರ್ಘಕಾಲೀನ ರೋಗಗಳು, ಅನಿಮಿಯಾ ಸೇರಿದಂತೆ ಅಸ್ವಸ್ಥತೆಗಳು ನಿಮಗಿದ್ದರೆ ಗರ್ಭ ಧರಿಸುವ ಮುನ್ನ ತಜ್ಞರು ಅವುಗಳಿಗೆ ಪರಿಹಾರ ನೀಡಬಲ್ಲರು.

ಪೋಷಕಾಂಶ
ಫಾಲಿಕ್ ಆಸಿಡ್ ಮತ್ತು ವಿಟಮಿನ್ ಬಿ12 ಕೊರತೆಯು ತಾಯಿಯಲ್ಲಿ ಅವಧಿಪೂರ್ವ ಪ್ರಸವ, ನ್ಯೂರಲ್ ಟ್ಯೂಬ್ ದೋಷಗಳು, ಗರ್ಭಪಾತ, ಅನಿಮಿಯಾಕ್ಕೆ ಕಾರಣವಾಗಬಲ್ಲವು. ಈ ಹಿನ್ನೆಲೆಯಲ್ಲಿ ಮಗುವನ್ನು ಪಡೆಯಲು ಬಯಸುವ ಮಹಿಳೆ ಫಾಲಿಕ್ ಆಸಿಡ್ ಅನ್ನು ಸೇವಿಸಲು ಪ್ರಾರಂಭಿಸಬೇಕು. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದವರು ಪ್ರತಿದಿನ 0.4 ರಿಂದ 1.0 ಎಂ.ಜಿಯಷ್ಟು ಫಾಲಿಕ್ ಆಸಿಡ್ ಅಂಶಗಳಿರುವ ಸಪ್ಲಿಮೆಂಟ್‌ಗಳೊಂದಿಗೆ ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಈ ಸಪ್ಲಿಮೆಂಟ್‌ಗಳನ್ನು ಸೇವಿಸುವುದನ್ನು 2 ರಿಂದ 3 ತಿಂಗಳ ಮೊದಲೇ ಆರಂಭಿಸಬೇಕು ಮತ್ತು ಪ್ರಸವವಾಗುವವರೆಗೆ ತೆಗೆದುಕೊಳ್ಳಬೇಕು. ಅಲ್ಲದೇ, ಸ್ತನ್ಯಪಾನವನ್ನು ಎಷ್ಟು ಸಾಧ್ಯವೋ ಅಷ್ಟು ಸುದೀರ್ಘ ಅವಧಿವರೆಗೆ ಮಾಡಬೇಕು.

ಆನುವಂಶೀಯವಾಗಿ ನ್ಯೂರಲ್ ಟ್ಯೂಬ್ ದೋಷಗಳಿದ್ದಲ್ಲಿ ಮತ್ತು ಎಥ್ನಿಕ್ ಗ್ರೂಪ್ ಅಪಾಯವಿದ್ದಲ್ಲಿ ಬ್ರಾಕೊಲಿ, ಮೊಳಕೆ ಭರಿಸಿದ ಕಾಳು, ಹಸಿರು ತರಕಾರಿಗಳಾದ ಕೋಸು, ಸೊಪ್ಪು, ಪಾಲಕ್, ಬಟಾಣಿ, ಚಿಕ್‌ಪೀಸ್ ಮತ್ತು ಕಿಡ್ನಿ ಬೀನ್ಸ್‌ನಂತಹ ಫಾಲೇಟ್ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ಅದೇ ರೀತಿ ಫಾಲಿಕ್ ಆಸಿಡ್ ಅಂಶವಿರುವ ಸಪ್ಲಿಮೆಂಟ್‌ಗಳನ್ನು ಪ್ರತಿದಿನ 5 ಎಂ.ಜಿವರೆಗೆ ಸೇವಿಸಬೇಕು. ಈ ಸಪ್ಲಿಮೆಂಟ್‌ಗಳನ್ನು ಗರ್ಭ ಧರಿಸುವ ಕನಿಷ್ಠ ಮೂರು ತಿಂಗಳ ಮುನ್ನವೇ ಆರಂಭಿಸಬೇಕು ಮತ್ತು ಗರ್ಭ ಧರಿಸಿದ ನಂತರದ 10 ರಿಂದ 12 ವಾರಗಳವರೆಗೆ ಇದನ್ನು ಮುಂದುವರಿಸಬೇಕು. ಏಕೆಂದರೆ, ಮಧುಮೇಹ ಮತ್ತು ಮೂರ್ಛೆರೋಗಕ್ಕೆ ತೆಗೆದುಕೊಳ್ಳುವ ಔಷಧಗಳಿಂದಾಗಿ ಫಾಲಿಕ್ ಆಸಿಡ್‌ನ ಕೊರತೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಸಪ್ಲಿಮೆಂಟ್‌ಗಳನ್ನು ಸೇವಿಸಿದರೆ ಜನನವಾಗುವ ಮಗುವಿನ ಮಿದುಳು ಮತ್ತು ಬೆನ್ನುಹುರಿಯಲ್ಲಿ ದೋಷ ಉಂಟಾಗುವುದನ್ನು ತಪ್ಪುತ್ತದೆ.

13 ಅತ್ಯಗತ್ಯ ವಿಟಮಿನ್‌ಗಳಲ್ಲಿ ಫೋಲೆಟ್ ಅಥವಾ ವಿಟಮಿನ್ ಬಿ9 ಅತ್ಯಂತ ಪ್ರಮುಖವಾದ ವಿಟಮಿನ್ ಆಗಿವೆ. ಇದನ್ನು ದೇಹ ಉತ್ಪಾದಿಸಲು ಸಾಧ್ಯವಿಲ್ಲ. ಇದನ್ನು ಆಹಾರ ಅಥವಾ ಸಪ್ಲಿಮೆಂಟ್‌ಗಳಿಂದ ಪಡೆಯಬೇಕು. ಭ್ರೂಣ ಬೆಳವಣಿಗೆಯಾಗಲು ಇದು ಅತ್ಯಗತ್ಯ.

(ಲೇಖಕರು: ಮೆಡಿಕಲ್ ಡೈರೆಕ್ಟರ್, ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.