ಫಿಟ್‌ನೆಸ್ ಪ್ರಿಯರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆಯೆಂದರೆ ಬೊಜ್ಜು. ಹಲವು ರೋಗಗಳಿಗೆ ಕಾರಣವಾಗುತ್ತಿರುವ ಈ ಬೊಜ್ಜು ಕರಗಿಸಲು ಹಲವರು ವಿವಿಧ ಕಸರತ್ತು ನಡೆಸುತ್ತಿದ್ದಾರೆ. ಗಂಟೆಗಟ್ಟಲೇ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ.

ನಮ್ಮ ದೇಹದಲ್ಲಿ ಎಷ್ಟು ಪ್ರಮಾಣದಲ್ಲಿ ಬೊಜ್ಜು ಶೇಖರಣೆಯಾಗಿದೆ ಎಂಬ ವಿವರ ತಿಳಿಯುವಂತಿದ್ದರೆ ಕರಗಿಸುವುದು ಸುಲಭ. ಬೊಜ್ಜಿನ ಪ್ರಮಾಣವನ್ನು ತಿಳಿಸುವಲ್ಲಿ ಸ್ಕಲ್ಪ್ಟ್ ಸ್ಕ್ಯಾನರ್ ವಿವಿಧ ರೂಪದಲ್ಲಿ ನೆರವಾಗುತ್ತದೆ.

ಈ ಸಾಧನ ದೇಹದಲ್ಲಿನ ಕೊಬ್ಬಿನ ಪ್ರಮಾಣವನ್ನು ತಿಳಿಸುವುದಷ್ಟೇ ಅಲ್ಲದೇ, ಮಾಂಸಖಂಡಗಳ ದೃಢತ್ವದ ಬಗ್ಗೆಯೂ ಮಾಹಿತಿ ನೀಡುತ್ತದೆ. ನಾವು ನಿತ್ಯ ಮಾಡುವ ವ್ಯಾಯಾಮ, ಅದರಿಂದ ದೇಹದಲ್ಲಾದ ಬದಲಾವಣೆಗಳ ಬಗ್ಗೆ ಕೂಡ ತಿಳಿಸುತ್ತದೆ.

ದೇಹದ 24 ಅಂಗಾಂಗಳನ್ನು ಪರೀಕ್ಷಿಸುವಂತೆ ಇದನ್ನು ತಯಾರಿಸಿರುವುದು ವಿಶೇಷ. ಅಲ್ಲದೇ ಎಂತಹ ವ್ಯಾಯಾಮ ಮಾಡಬೇಕು, ಯಾವ ರೀತಿಯ ಆಹಾರ ಪಥ್ಯ ಅನುಸರಿಸಬೇಕು ಎಂಬ ಸಲಹೆಗಳನ್ನೂ ನೀಡುತ್ತದೆ.

ದೇಹವನ್ನು ಸ್ಕ್ಯಾನ್ ಮಾಡುವ ಹಲವು ಸ್ಕ್ಯಾನರ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ದೇಹದಲ್ಲಿ ಎಷ್ಟು ಕ್ಯಾಲರೊಗಳಿಗೆ ಕರಗಿವೆ, ಎಷ್ಟು ಮೆಟ್ಟಿಲುಗಳನ್ನು ಹತ್ತಿದ್ದೀರಿ, ಎಷ್ಟು ದೂರ ನಡೆದಿದ್ದೀರಿ... ಎಂಬ ಮಾಹಿತಿ ನೀಡುವುದಕ್ಕಷ್ಟೇ ಅವು ಸೀಮಿತವಾಗಿವೆ. ಹೀಗಾಗಿ ಈ ಸ್ಕ್ಯಾನರ್ ವಿಶೇಷ ಎನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.