ಪಾರ್ಶ್ವವಾಯುವಿಗೆ ಮುಖ್ಯ ಕಾರಣ ನಮ್ಮ ಜೀವನಶೈಲಿ ಹಾಗೂ ವೈದ್ಯಕೀಯ ಅರಿವಿನ ಕೊರತೆ.

ಚಿಕ್ಕ ವಯಸ್ಸಿನಿಂದಲೂ ರಕ್ತದೊತ್ತಡ ಹಾಗೂ ಮಧುಮೇಹದ ಬಗ್ಗೆ ಕಣ್ಣಿಟ್ಟಿರಬೇಕು. ಹೆಚ್ಚು ಒತ್ತಡದ ಜೀವನ ನಡೆಸುವವರಂತೂ ಈ ಎಚ್ಚರಿಕೆ ವಹಿಸಲೇಬೇಕು. ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸುತ್ತಿರಬೇಕು. ಕೊಂಚ ಏರಿಳಿತವಾದರೂ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು. ರಕ್ತದೊತ್ತಡ ಹಾಗೂ ಮಧುಮೇಹ ನಿರ್ಲಕ್ಷ್ಯವು ಕಾಲಾಂತರದಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಮಿದುಳಿನ ರಕ್ತಸ್ರಾವ, ಮರೆಗುಳಿತನ ಮುಂತಾದ ಸಮಸ್ಯೆಗೆ ಈಡು ಮಾಡುತ್ತಾರೆ.

ಇನ್ನು, ಪಾರ್ಶ್ವವಾಯು ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಕ್ರಮವೂ ಸುಲಭವಾಗಿಯೇ ಇವೆ. ಜೀವನಶೈಲಿಯನ್ನು ಶಿಸ್ತಿನಿಂದ ಇರಿಸಿಕೊಳ್ಳುವುದು ಮುಖ್ಯ ಪರಿಹಾರ. ಪ್ರತಿನಿತ್ಯ ಯೋಗಾಭ್ಯಾಸ, ಪ್ರಾಣಾಯಾಮ ಮಾಡಬೇಕು. ಕೊಂಚ ದೂರವಾದರೂ ನಡೆಯಬೇಕು. ಮಿತ ಹಾಗೂ ಯುಕ್ತ ಆಹಾರ ಸೇವಿಸಬೇಕು. ನಿದ್ರೆಯನ್ನು ಕನಿಷ್ಠವೆಂದರೂ ದಿನಕ್ಕೆ 6 ಗಂಟೆ ಮಾಡಬೇಕು. ಇವೆಲ್ಲದರ ಜತೆಗೆ, ಸ್ನೇಹಿತರೊಂದಿಗೆ ಬೆರೆಯಬೇಕು. ಸಂಗೀತ, ಕಲೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಯಾವುದಾದರೊಂದು ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಒತ್ತಡ ನಿರ್ವಹಣೆ ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.