ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ತಳೀಯವಾಗಿ ಮಾರ್ಪಡಿಸಿರುವ ಹಂದಿಯ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಅಮೆರಿಕ ವೈದ್ಯರು ಹೊಸಇತಿಹಾಸ ಬರೆದಿದ್ದಾರೆ.

ಅಮೆರಿಕದ ಮೇರಿಲ್ಯಾಂಡ್ ಯೂನಿವರ್ಸಿಟಿ ಮೆಡಿಕಲ್ ಸ್ಕೂಲಿನ ಶಸ್ತ್ರಚಿಕಿತ್ಸಕರು57 ವರ್ಷದ ಡೇವಿಡ್ ಬೆನೆಟ್ ಅವರಿಗೆ ಹಂದಿಯ ಹೃದಯವನ್ನು ಕಸಿ ಮಾಡಿದ್ದಾರೆ. ಇದುವೈದ್ಯಕೀಯ ಲೋಕದಲ್ಲಿ ಪ್ರಥಮವಾಗಿದೆ.

ಡೇವಿಡ್ ಬೆನೆಟ್ ಅವರು ಶ್ವಾಸಕೋಶಹಾಗೂ ಹೃದಯ ರೋಗದಿಂದ ಬಳಲುತ್ತಿದ್ದರು. ಅವರು ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದು ಆರೋಗ್ಯವು ತುಂಬ ಕ್ಷೀಣವಾಗಿತ್ತು. ಅವರಿಗೆ ಮನುಷ್ಯರ ಹೃದಯವನ್ನು ಕಸಿ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.

ಈ ಹಂತದಲ್ಲಿ ಡೇವಿಡ್ ಬೆನೆಟ್ಗೆ ಹಂದಿಯ ಹೃದಯವನ್ನು ಕಸಿ ಮಾಡಲಾಯಿತು. ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕಸಿಯಾಗಿರುವ ಹೃದಯ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಗಮನಿಸುತ್ತಿದ್ದು ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ವ್ಯದ್ಯರು ಹೇಳಿದ್ದಾರೆ.

’ಮೇರಿಲ್ಯಾಂಡ್‌ನಿವಾಸಿಯಾದ ನಾನು ಹಲವು ತಿಂಗಳಿಂದ ಹಾಸಿಗೆಯಲ್ಲಿ ಮಲಗಿದ್ದೆ. ಅಂತಿಮವಾಗಿ ವೈದ್ಯರು ಕಸಿಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದರು. ನಾನು ಇದಕ್ಕೆ ಒಪ್ಪಿಕೊಂಡೆ. ಈ ಚಿಕಿತ್ಸೆ ನನಗೆ ಮಾಡುವ ಅಂತಿಮ ಚಿಕಿತ್ಸೆಯಾಗಿತ್ತು. ಕತ್ತಲಲ್ಲಿ ಗುಂಡು ಹೊಡೆದರೆ ವ್ಯಕ್ತಿಗೆ ತಗಲಬಹುದು ಅಥವಾ ತಾಗದಿರಬಹುದಾದ ಪರಿಸ್ಥಿತಿ ನನ್ನದಾಗಿತ್ತು. ಕೊನೆಗೆ ವೈದ್ಯರು ಯಶಸ್ವಿಯಾಗಿ ಕಸಿ ಮಾಡಿದ್ದಾರೆ’ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಾನು ನಡೆಯ ಬಲ್ಲೇ ಎಂಬ ವಿಶ್ವಾಸವನ್ನುಅವರು ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು ಅನುಮತಿ ನೀಡಿದ ಬಳಿಕವೇ ಶಸ್ತ್ರಚಿಕಿತ್ಸೆ ಮಾಡಲಾಯಿತು. ಚೇತರಿಸಿಕೊಳ್ಳುತ್ತಿರುವ ರೋಗಿಯು ಮಾತನಾಡಿದ್ದಾರೆ ಎಂದು ಶಸ್ತ್ರಚಿಕಿತ್ಸಕವೈದ್ಯ ಬಾರ್ಟ್ಲಿ ಗ್ರಿಫಿತ್ ಹೇಳಿದ್ದಾರೆ.

ಹಂದಿ ಹೃದಯ ಕಸಿ ಮಾಡಿರುವ ಶಸ್ತ್ರಚಿಕಿತ್ಸೆಯು ಜಗತ್ತಿನಲ್ಲೇ ಮೊದಲ ಬಾರಿಗೆ ನಡೆದ ಸರ್ಜರಿಯಾಗಿದೆ. ಭವಿಷ್ಯದಲ್ಲಿ ಅಂಗಾಂಗಳ ಕೊರತೆ ಸಮಸ್ಯೆಯನ್ನು ಪರಿಹರಿಸಲುಇದುಭರವಸೆ ಮೂಡಿಸಿರುವ ವಿಧಾನವಾಗಿದೆ ಎಂದು ಬಾರ್ಟ್ಲಿ ಗ್ರಿಫಿತ್ ಹೇಳಿದ್ದಾರೆ.

ಹೃದಯ ಕಸಿ ಮಾಡುವ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ ನಡೆಸಿದ್ದೇವೆ. ಹಂದಿ, ಬಬೂನ್ (ಕೋತಿ) ಸೇರಿದಂತೆ ವಿವಿಧ ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗಿತ್ತು ಎಂದು ವೈದ್ಯ ಮೊಹಮ್ಮದ್ ಮೊಹಿದ್ದೀನ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಸದ್ಯ 1.1 ಲಕ್ಷ ಜನರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಪ್ರತಿ ವರ್ಷ 6 ಸಾವಿರ ಜನರು ಅಂಗಾಂಗ ಕಸಿ ಸಾಧ್ಯವಾಗದೆಮೃತರಾಗುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮತ್ತೆ ಲಾಕ್ಡೌನ್?: ಇದು ಬಂಧನವೋ? ಹೊಸತನದ ಅವಕಾಶವೋ? ಒಂದ್ನಿಮಿಷ ಇಲ್ಲಿ ನೋಡಿ

ಅಮೆರಿಕದಲ್ಲಿ1984ರಲ್ಲಿ ಆಗ ತಾನೇ ಜನಿಸಿದ ಶಿಶುವಿನ ಹೃದಯಕ್ಕೆ ಕೋತಿಯ ಹೃದಯವನ್ನು ಕಸಿ ಮಾಡಲಾಗಿತ್ತು. ಆದರೆ ಆ ಶಿಶು 20 ದಿನಗಳವರೆಗೆ ಬದುಕಿತ್ತು.

ಸದ್ಯ ವೈದ್ಯಲೋಕದಲ್ಲಿ ಮಾನವರ ಹೃದಯದ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಹಂದಿಯ ಹೃದಯದ ಕವಾಟವನ್ನು ಬಳಕೆ ಮಾಡಲಾಗುತ್ತಿದೆ. ಹಾಗೇ ಹಂದಿಯ ಚರ್ಮವನ್ನು ಮನುಷ್ಯರ ಸುಟ್ಟ ಗಾಯಗಳ ಚರ್ಮಕ್ಕೆ ಕಸಿ ಮಾಡಲಾಗುತ್ತಿದೆ.

ಇದನ್ನೂ ಓದಿ:ಸರ್ವಾಂಗಗಳೂ ಶುದ್ಧವಾಗಿರಲಿ: ಹಾಗಾದರೆ ಮಾಡಬೇಕಾದ ಸರಳ ಕೆಲಸಗಳೇನು?ಇಲ್ಲಿದೆ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.