ಗರ್ಭಾವಸ್ಥೆ ಮಹಿಳೆಯ ಜೀವನದ ಅದ್ಭುತ ಹಾಗೂ ಸಂತಸದ ಕ್ಷಣವಾದರೂ ಈ ಸಮಯದಲ್ಲಾಗುವ ಏರುತ್ತಿರುವ ಹಾರ್ಮೋನುಗಳ ಮಟ್ಟದಿಂದ ಹಲವು ಶಾರೀರಕ ಬದಲಾವಣೆಗಳು ಸಹಜ. ಕೆಲವರಲ್ಲಿ ಈಗಾಗಲೇ ಇರುವ ವೈದ್ಯಕೀಯ ಸಮಸ್ಯೆಗಳಲ್ಲೂ ಏರುಪೇರಾಗಬಹುದು. ಇವುಗಳಲ್ಲೊಂದು ವ್ಯಾರಿಕೋಸ್ವೇನ್ ಸಮಸ್ಯೆ.

ಏನಿದು ವ್ಯಾರಿಕೋಸ್ವೇನ್?
ವೇನ್ಸ್ ಅಥವಾ ಅಭಿದಮನಿಗಳೆಂದರೆ ನಮ್ಮ ದೇಹದ ಎಲ್ಲಾ ಭಾಗಗಳಿಂದ ಅಶುದ್ಧ ರಕ್ತವನ್ನು ಹೃದಯಕ್ಕೆ ತಲುಪಿಸುವ ರಕ್ತನಾಳಗಳು. ಈ ವೇನ್ಸ್ಗಳಲ್ಲಿ ಕವಾಟಗಳಿರುತ್ತವೆ. ಅದರಲ್ಲೂ ಕಾಲುಗಳಿಂದ ಮಲಿನರಕ್ತವೂ ಹೃದಯಕ್ಕೆ ತಲುಪಬೇಕಾದರೆ ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ಮೇಲ್ಮುಖವಾಗಿ ರಕ್ತ ಚಲಿಸಬೇಕಾಗಿರುವುದರಿಂದ ಕಾಲಿನ ಅಭಿಧಮನಿಗಳು ಬಲಯುತವಾದ ಕವಾಟಗಳಿಂದ ಕೂಡಿರುತ್ತವೆ ಮತ್ತು ಮಲಿನ ರಕ್ತದ ಹಿಮ್ಮುಖ ಹರಿವನ್ನು ತಡೆಗಟ್ಟುತ್ತವೆ. ಈ ಅಭಿದಮನಿಗಳು ದಪ್ಪನಾಗಿ, ತಿರುಚಿ, ನೀಲಿಗಟ್ಟಿಕೊಂಡು, ಊದಿಕೊಂಡಾಗ ಅವುಗಳನ್ನು ವಾರಿಕೋಸ್ವೇನ್ ಎನ್ನುತ್ತಾರೆ. ಇವು ದೇಹದ ಎಲ್ಲಡೆಯಾಗಬಹುದಾದರೂ ಕಾಲುಗಳಲ್ಲಿ ಹೆಚ್ಚು.

ಅನುವಂಶೀಯವಾಗಿ ಹುಟ್ಟಿದಾಗಿನಿಂದಲೇ ಕವಾಟಗಳ ದುರ್ಬಲತೆ ಇದ್ದರೆ ಅಂತವರಲ್ಲಿ ಹದಿವಯಸ್ಸಿನವರಲ್ಲಿ ವ್ಯಾರಿಕೋಸ್ವೇನ್ ಕಂಡುಬರುತ್ತದೆ. ಕೆಲವರಲ್ಲಿ ಅಪಘಾತಗಳಾಗಿ ಕವಾಟಗಳಿಗೆ ಪೆಟ್ಟಾದಾಗ, ಶಸ್ತ್ರಚಿಕಿತ್ಸೆಯ ನಂತರ, ದೀರ್ಘಾವಧಿ ಕಾಯಿಲೆಗಳಿಂದಲೂ ವ್ಯಾರಿಕೋಸ್ವೇನ್ ಬರಬಹುದು.

ದೀರ್ಘಾವಧಿ ನಿಲ್ಲುವವರು, ಕಷ್ಟಕರವಲ್ಲದ ಆರಾಮದಾಯಕ ಜೀವನ, ವ್ಯಾಯಾಮರಹಿತ ಜೀವನ ನಡೆಸುವವರಲ್ಲಿ, ಬಿಗಿಯಾದ ಬಟ್ಟೆಗಳನ್ನು ಕಾಲಿಗೆ ಧರಿಸುವವರಲ್ಲಿ ವ್ಯಾರಿಕೋಸ್ವೇನ್ ಹೆಚ್ಚು.

ಗರ್ಭಾವಸ್ಥೆಯಲ್ಲಿ ವ್ಯಾರಿಕೋಸ್ವೇನ್ ಹೆಚ್ಚಾಗುತ್ತದೆ. ಇದಕ್ಕೆ ಕಾರಣಗಳೆಂದರೆ ಮೊದಲನೆಯದಾಗಿ ಗರ್ಭಧಾರಣೆಯಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಎರಡನೆಯದಾಗಿ ಏರುತ್ತಿರುವ ಪ್ರೊಜೆಸ್ಟಿರಾನ್ ಹಾರ್ಮೋನು ಮಟ್ಟದಿಂದ ರಕ್ತನಾಳಗಳು ಹಿಗ್ಗಿ ಸಡಿಲವಾಗುವುದರಿಂದ ರಕ್ತಪರಿಚಲನೆ ಅಧಿಕವಾಗುತ್ತದೆ. ಮೂರನೆಯದಾಗಿ ಏರುತ್ತಿರುವ ತೂಕ, ಬೆಳೆಯುತ್ತಿರುವ ಗರ್ಭಾಶಯದಿಂದ ಕಿಬ್ಬೊಟ್ಟೆಯ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾಗಿ ಕಾಲು ಹಾಗೂ ಕಿಬ್ಬೊಟ್ಟೆಯ ಭಾಗದಿಂದ ಮಲಿನರಕ್ತ ಹೃದಯಕ್ಕೆ ಹಿಂತಿರುಗಲು ಸರಿಯಾಗಿ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಯೋನಿಮಾರ್ಗದಲ್ಲೂ ವ್ಯಾರಿಕೋಸ್ವೇನ್ ಉಂಟಾಗುತ್ತದೆ. ಮಲಬದ್ಧತೆಯಾದಾಗ ಗುದದ್ವಾರದಲ್ಲಿ ಅಥವಾ ಮೂಲವ್ಯಾಧಿಯ ರೀತಿಯಲ್ಲಿ ಕಾಣಿಸಿಕೊಳ್ಳಬಹುದು.

ರೋಗಲಕ್ಷಣಗಳು
ರಕ್ತನಾಳಗಳು ನೀಲಿಬಣ್ಣ ಅಥವಾ ಕಡುನೇರಳೆ ಬಣ್ಣಗಟ್ಟುವುದು, ಕಾಲಿನ ರಕ್ತನಾಳಗಳು ತಿರುಚಿ, ಒರಟಾಗಿ ಹಗ್ಗ ಸುತ್ತಿಕೊಂಡಂತೆ ಕಾಣಿಸಿಕೊಳ್ಳಬಹುದು. ಕಾಲುಗಳಲ್ಲಿ ಭಾರವಾದ ಅನುಭವ, ನಡೆದಾಗ, ನಿಂತಾಗ ಸುಸ್ತು, ಕಾಲುಗಳಲ್ಲಿ ಸಿಡಿತ, ಊತ, ಕೆಲವೊಮ್ಮೆ ಕಾಲಿನ ಸ್ನಾಯುಗಳಲ್ಲಿ ಹಿಡಿದುಕೊಂಡಂತೆ ಆಗುವುದು. ಆದರೆ ಮಲಗಿ ಕಾಲುಗಳನ್ನು ಮೇಲೆತ್ತಿದಾಗ ನೋವು ಕಡಿಮೆಯಾಗುವ ಅನುಭವ ಆಗುತ್ತದೆ.

ಕೆಲವೊಮ್ಮೆ ಊದಿದ ರಕ್ತನಾಳಗಳಲ್ಲಿ ತುರಿಕೆ, ರಕ್ತಸ್ರಾವ, ಸುತ್ತಲಿನ ಚರ್ಮದ ಉರಿಯೂತ, ಸುತ್ತಲೂ ಚರ್ಮ ಕಪ್ಪಾಗಿ ಹುಣ್ಣಾಗುವುದು, ಕಾಯಿಲೆ ಉಲ್ಬಣಗೊಂಡಾಗ ಹುಣ್ಣು ವಾಸಿಯಾಗದ ಹಂತಕ್ಕೆ ತಲುಪುತ್ತದೆ, ರಕ್ತನಾಳಗಳು ಕೆಲವೊಮ್ಮೆ ಜೇಡರಬಲೆಯಂತೆ ಕಾಣಿಸಿಕೊಳ್ಳಬಹುದು, ಇದು ಹೆಚ್ಚು ಅಪಾಯಕಾರಿಯಲ್ಲ.

ವ್ಯಾರಿಕೋಸ್ವೇನ್ ಗರ್ಭಧಾರಣೆಯಲ್ಲಿ ಹೆಚ್ಚಿನ ತೊಂದರೆಯನ್ನು ಕೊಡದೇ ಪ್ರಸವದ ನಂತರ 3–4 ತಿಂಗಳೊಳಗಾಗಿ ಸಹಜಸ್ಥಿತಿಗೆ ಮರಳಬಹುದು. ಗರ್ಭಾವಸ್ಥೆಯಲ್ಲಿ ವ್ಯಾರಿಕೋಸ್ವೇನ್ಗೆ ಯಾವುದೇ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಹಾಗೂ ಅದು ಉಚಿತವೂ ಅಲ್ಲ. ಆದ್ದರಿಂದ ಮುಂಜಾಗ್ರತಾ ಕ್ರಮಗಳೇ ಅತಿಮುಖ್ಯ.

ಗರ್ಭಾವಸ್ಥೆಯ ನಂತರ ವ್ಯಾರಿಕೋಸ್ವೇನ್ ಸಹಜಸ್ಥಿತಿಗೆ ಮರಳಬಹುದು. ಆದರೆ ಮತ್ತೆ ಗರ್ಭಿಣಿಯಾದಾಗ ಈ ಸಮಸ್ಯೆ ಮರುಕಳಿಸಿ ಇನ್ನೂ ಹೆಚ್ಚಾಗುವ ಸಂಭವವಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಸಂತಾನೋತ್ಪತ್ತಿ ಕ್ರಿಯೆ ನಿಲ್ಲಿಸಿದ ಮೇಲೆಯೇ ಶಸ್ತ್ರಚಿಕಿತ್ಸೆಗೊಳಗಾಗುವ ನಿರ್ಣಯ ಕೈಗೊಳ್ಳಬೇಕು.

ಸಲಹೆಗಳು

*ಸೊಂಟ ಮತ್ತು ಕಾಲಿನ ಭಾಗಗಳಲ್ಲಿ ಸಡಿಲವಾದ ಹತ್ತಿಬಟ್ಟೆಗಳನ್ನು ಧರಿಸಿ.

* ಹೈಹೀಲ್ಡ್ ಧಾರಣೆ ಬೇಡ. ಲೋಹೀಲ್ಡ್ ಪಾದರಕ್ಷೆಯನ್ನ ಧರಿಸಿ.

* ಕಾಲುಗಳನ್ನು ಆಗಾಗ್ಗೆ ಎತ್ತರದಲ್ಲಿಟ್ಟು ವಿಶ್ರಾಂತಿ ಪಡೆಯಬೇಕು. ರಾತ್ರಿ ಮಲಗುವಾಗಲಂತೂ ಕಾಲುಗಳ ಕೆಳಗೆ ಎತ್ತರದ ದಿಂಬಿಟ್ಟು ಮಲಗಿ. ಕನಿಷ್ಠ 10 ನಿಮಿಷವಾದರೂ ಕಾಲುಗಳನ್ನು ಹಿಪ್ಸ್ ಮಟ್ಟಕ್ಕಿಂತ ಮೇಲೆತ್ತಬೇಕು.

* ಕುರ್ಚಿಯಲ್ಲಿ ಕೂರಬೇಕಾದಾಗ ಕಾಲನ್ನು ಕ್ರಾಸ್ ಮಾಡಿ ಕುಳಿತುಕೊಳ್ಳಬೇಡಿ. ಮತ್ತು ದೀರ್ಘಾವಧಿ ಕುಳಿತುಕೊಳ್ಳಬೇಕಾದಾಗ ಕಾಲ್ಬೆರಳುಗಳಿಂದ ಗಾಳಿಯಲ್ಲಿ ಎ.ಬಿ.ಸಿ ಎಂದು ಆಗ್ಗಾಗ್ಗೆ ಬರೆಯುತ್ತಿರಿ.

* ಎಡಮಗ್ಗಲಿಗೆ ಹೆಚ್ಚು ಮಲಗಿ, ಇದರಿಂದ ಮುಖ್ಯ ಅಶುದ್ಧರಕ್ತನಾಳದ ಮೇಲೆ ಉಂಟಾಗುವ ಒತ್ತಡ ಕಡಿಮೆಯಾಗುತ್ತದೆ.

* ಸೋಡಿಯಂ (ಉಪ್ಪು) ಸೇವನೆ ಮಿತವಾಗಿರಲಿ.

* ನೀರಿನ ಬಳಕೆ, ನಾರಿನಾಂಶದ ಆಹಾರ ಹೆಚ್ಚು ಸೇವಿಸುವುದರಿಂದ ಮಲಬದ್ಧತೆಯಾಗದೆ ಮೂಲವ್ಯಾಧಿ ಉಂಟಾಗುವ ಸಂಭವ ಕಡಿಮೆಯಾಗುತ್ತದೆ.

* ಧೂಮಪಾನ, ಮದ್ಯಪಾನ, ತಂಬಾಕು ಸೇವನೆ ತ್ಯಜಿಸಿ.

* ನಿಯಮಿತ ವ್ಯಾಯಾಮಗಳು (ಸ್ಕೇಟಿಂಗ್ ಮತ್ತು ಜಾಗಿಂಗ್ ಬೇಡ), ಅದರಲ್ಲೂ ಕಾಲುಗಳ ಸೂಕ್ಷ್ಮ ವ್ಯಾಯಮಗಳನ್ನು ಆಗಾಗ್ಗೆ ಮಾಡುತ್ತಿರಬೇಕು.

* ದೀರ್ಘ ಉಸಿರಾಟ ನಿಯಮಿತವಾಗಿ ಮಾಡುವುದರಿಂದ ಶರೀರ ಸಡಿಲಾಗಿ ರಕ್ತಸಂಚಾರ ಸರಾಗವಾಗುತ್ತದೆ.

* ಸಾಧ್ಯವಾದಷ್ಟು ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ.

* ದೇಹತೂಕ ಏರದಂತೆ ಮುಂಜಾಗ್ರತೆ ವಹಿಸಿ.

* ಎಲಾಸ್ಟಿಕ್ ಕಾಂಪ್ರೆಶನ್ಸ್ಟಾಕಿಂಗ್ಸ್ ಉಪಯೋಗಿಸಬೇಕಾದಾಗ ವೈದ್ಯರ ಸಲಹೆಯ ಮೇರೆಗೆ ಸರಿಯಾದ ಅಳತೆ ಇರುವುದನ್ನು ಕೊಂಡು ಉಪಯೋಗಿಸಿ.

(ಲೇಖಕಿ ಭದ್ರಾವತಿಯಲ್ಲಿ ಸ್ತ್ರೀರೋಗ ತಜ್ಞೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.