ಬೆಂಗಳೂರು: ಸುದೀರ್ಘ ಕಾಲದಿಂದ ಮುಖ್ಯವಾಗಿ ಹಿರಿಯ ವಯಸ್ಕರನ್ನು ಕಾಡುವಂತಹ ಅತ್ಯಂತ ವಿನಾಶಕಾರಿ ಆರೋಗ್ಯ ಸ್ಥಿತಿಗಳಲ್ಲಿ ಪಾರ್ಶ್ವವಾಯು ಒಂದಾಗಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಯುವಜನರಲ್ಲಿಯೂ ಕೂಡ ಪಾರ್ಶ್ವವಾಯು ಪ್ರಕರಣಗಳು ಕ್ಷಿಪ್ರಗತಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಪಾರ್ಶ್ವವಾಯುವಿನ ಪರಿಣಾಮಗಳು ಅತ್ಯಂತ ಭೀಕರವಾಗಿರಬಹುದು. ಅದರಲ್ಲಿಯೂ ವಿಶೇಷವಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಯುವಜನರು ಮತ್ತು ಮಕ್ಕಳಲ್ಲಿ ಈ ಸ್ಥಿತಿ ಭಯಾನಕವಾಗಬಹುದು. ಪಾರ್ಶ್ವವಾಯುವಿಗೆ ತುತ್ತಾಗಿರುವ ಯುವ ಜನರಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಬಹಳಷ್ಟು ವ್ಯಕ್ತಿಗಳು ಕೆಲಸಕ್ಕೆ ಹಿಂದಿರುಗುವುದು ಅತ್ಯಂತ ಕಷ್ಟಕರವಾಗಿರುತ್ತದೆ ಎಂಬುದು ಎಚ್ಚರಿಕೆಯ ಗಂಟೆಯಾಗಿರುವ ವಾಸ್ತವವಾಗಿದೆ. ಜೊತೆಗೆ ಈ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

50 ವರ್ಷಗಳಿಗೂ ಕಡಿಮೆ ವಯಸ್ಸಿನ ಜನರಲ್ಲಿ ಪಾರ್ಶ್ವವಾಯು ಪ್ರಕರಣಗಳು ಒಟ್ಟಾರೆ ಶೇ. 10ರಿಂದ 14ರಷ್ಟು ಪಾಲು ಹೊಂದಿವೆ ಎಂದು ಅಂದಾಜು ಮಾಡಲಾಗಿದೆ. ಆಘಾತಕಾರಿ ವಿಷಯವೆಂದರೆ ಮಕ್ಕಳಲ್ಲಿ ಕೂಡ ಪಾರ್ಶ್ವವಾಯು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಈ ಮಕ್ಕಳ ಪೈಕಿ ನವಜಾತ ಶಿಶುಗಳಲ್ಲಿ ಇಷೆಮಿಕ್

ಸ್ಟ್ರೋಕ್ ಪ್ರಕರಣಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಹಿಂದಿನ ಕಾಲದಲ್ಲಿ ರೋಗನಿರ್ಣಯ ಕೈಗೊಳ್ಳುವುದರಲ್ಲಿ ಗಮನಾರ್ಹ ವಿಳಂಬಗಳಿoದಾಗಿ ಮಕ್ಕಳು ಮತ್ತು ಯುವಜನರಲ್ಲಿ ಇಷೆಮಿಕ್ ಸ್ಟ್ರೋಕ್ಸಗಳು ಅಷ್ಟಾಗಿ ಕಾಣಸಿಗುತ್ತಿರಲಿಲ್ಲ. ಈ ವಯೋಮಿತಿಗಳಲ್ಲಿ ಪಾರ್ಶ್ವವಾಯುವಿಗೆ ಅಪಾಯದ ಅಂಶಗಳು ಪ್ರತ್ಯೇಕವಾಗಿರುತ್ತವೆ. ದೀರ್ಘಕಾಲೀನ ಪರಿಣಾಮವನ್ನು ಕಡಿಮೆ ಮಾಡಲು ಶೀಘ್ರವಾಗಿ ಪತ್ತೆ ಮಾಡುವುದು ಮತ್ತು ಸೂಕ್ತ ಚಿಕಿತ್ಸೆ ನೀಡುವುದು ಮುಖ್ಯವಾಗಿರುತ್ತದೆ.

ಜೀವನಶೈಲಿ ಮತ್ತು ಅಭ್ಯಾಸಗಳು ಯುವಜನರಲ್ಲಿ ಪಾರ್ಶ್ವವಾಯು ಕಾಣಿಸಿಕೊಳ್ಳುವುದಕ್ಕೆ ಪ್ರಾಥಮಿಕವಾಗಿ ಕೊಡುಗೆ ನೀಡುತ್ತವೆ. ತಂಬಾಕು ಧೂಮಪಾನ, ದೈಹಿಕ ಆಲಸಿತನ, ಅಧಿಕ ರಕ್ತದೊತದ್ತಡ, ಡಿಸ್ಲಿಪಿಡೆಮಿಯಾ ಮತ್ತು ಇತರೆ ಹೃದಯ ರಕ್ತನಾಳಗಳ ರೋಗಗಳು ಗಮನಾರ್ಹ ಅಪಾಯದ ಅಂಶಗಳಾಗಿವೆ. ತಂಬಾಕು ಧೂಮಪಾನ ಎಂಬುದು ಯಾವುದೇ ವಯಸ್ಸಿನವರಾಗಲಿ ಪಾರ್ಶ್ವವಾಯುವಿಗೆ ಗಮನಾರ್ಹ ಅಪಾಯದ ಅಂಶವಾಗಿದೆ. ಕೊಬ್ಬಿನ ಅಂಶ ಹೆಚ್ಚಾಗಲು ಇದು ದಾರಿ ಮಾಡಿಕೊಡುತ್ತದೆ. ಇದರೊಂದಿಗೆ ಹೆಪ್ಪುಗಟ್ಟಿದ ಕೊಬ್ಬಿನ ಗಡ್ಡೆಗಳ ಮತ್ತು ರಕ್ತನಾಳಗಳು ಒಡೆಯುವ ಹಾಗೂ ರಕ್ತನಾಳಗಳಿಗೆ ಹಾನಿವುಂಟಾಗುವ ಅಪಾಯ ಹೆಚ್ಚಾಗುತ್ತದೆ. ದೈಹಿಕವಾದ ಚಟುವಟಿಕೆ ಇಲ್ಲದಿರುವುದು ಅಥವಾ ಆಲಸಿತನ ಬೊಜ್ಜು ಮೈ ಮತ್ತು ಇತರೆ ಹೃದಯ ರಕ್ತನಾಳಗಳ ಅಪಾಯದ ಅಂಶಗಳಿಗೆ ದಾರಿಯಾಗುತ್ತದೆ.

ಇದು ಯುವಜನರಲ್ಲಿನ ಪಾರ್ಶ್ವವಾಯು ಪ್ರಕರಣಗಳಲ್ಲಿ ಮತ್ತೊಂದು ಅತ್ಯಂತ ಸಾಮಾನ್ಯ ಅಂಶವಾಗಿರುತ್ತದೆ. ಹೆಚ್ಚಿನ ರಕ್ತದೊತ್ತಡ ಅಥವಾ ಹೈಪರ್ ಟೆನ್ಷನ್ ಸದ್ದಿಲ್ಲದೆ ಕೊಲ್ಲುವ ತೊಂದರೆಯಾಗಿದ್ದು, ಇದು ಪಾರ್ಶ್ವವಾಯುವಿನ ಅಪಾಯವನ್ನು ಬಹಳಷ್ಟು ಹೆಚ್ಚಿಸುತ್ತದೆ. ಜೀವನಶೈಲಿಯ ಬದಲಾವಣೆಗಳ ಮೂಲಕ ರಕ್ತದ ಒತ್ತಡವನ್ನು ನಿಯಂತ್ರಿಸುವುದು ಮತ್ತು ಅಗತ್ಯವಾದಲ್ಲಿ ಔಷಧಗಳನ್ನು ಸೇವಿಸುವುದು ಪಾರ್ಶ್ವವಾಯುವನ್ನು ತಡೆಯಲು ಅತ್ಯಂತ ಮುಖ್ಯವಾಗಿರುತ್ತದೆ. ಡಿಸ್ಲಿಪೀಡೆಮಿಯಾ ಅಂದರೆ ರಕ್ತದಲ್ಲಿ ಕೊಬ್ಬಿನ(ಲಿಪಿಡ್ಸ್) ಅಂಶಗಳು ಹೆಚ್ಚಾದಲ್ಲಿ ರಕ್ತನಾಳಗಳಲ್ಲಿ ಅಡೆತಡೆ ಉಂಟುಮಾಡುವ ಪ್ಲಾಕ್ಗಳ ಬೆಳವಣಿಗೆಗೆ ದಾರಿಯಾಗಬಹುದು. ಇದು ಪಾರ್ಶ್ವವಾಯುವಿನ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಪಾರ್ಶ್ವವಾಯು ಹಲವು ರೀತಿಯ ವೈಕಲ್ಯಗಳನ್ನು ಉಂಟು ಮಾಡಬಹುದು. ಇವುಗಳಲ್ಲಿ ದೈಹಿಕ ದೌರ್ಬಲ್ಯಗಳಿಂದ ಹಿಡಿದು ಗ್ರಹಿಕೆಯ ತೊಂದರೆಗಳು ಸೇರಿರುತ್ತವೆ. ಇವುಗಳಿಂದಾಗಿ ಈ ತೊಂದರೆಗೊಳಗಾದ ಜನರಲ್ಲಿ ಅನೇಕರಿಗೆ ತಮ್ಮ ವೃತ್ತಿಜೀವನವನ್ನು ಮತ್ತೆ ಆರಂಭಿಸುವುದು ದೊಡ್ಡ ಸವಾಲಾಗುತ್ತದೆ. ಅಲ್ಲದೆ, ಯುವಜನರಲ್ಲಿ ಉನ್ನತ ಅಥವಾ ಕೌಶಲ್ಯದ ಶಿಕ್ಷಣವನ್ನು ಪೂರ್ಣಗೊಳಿಸಲು ಅಥವಾ ವೈಯಕ್ತಿಕ ವೃತ್ತಿಜೀವನ ಗುರಿಗಳನ್ನು ಸಾಧಿಸಲು ಕಷ್ಟವಾಗುತ್ತದೆ. ಈ ವೈಕಲ್ಯಗಳ ತೀವ್ರತೆ ವ್ಯಕ್ತಿಯಿಂದ ವ್ಯಕ್ತಿಗೆ ಗಮನಾರ್ಹವಾಗಿ ಬದಲಾಗಬಹುದು. ಆದರೆ, ಇದು ಜೀವನವನ್ನು ಬದಲಾಯಿಸುವ ಘಟನೆಯಾಗಿರುತ್ತದೆ. ವಿಶೇಷವಾಗಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಇದು ಅತ್ಯಂತ ಕಷ್ಟಕರ ಪರಿಸ್ಥಿತಿ ಉಂಟು ಮಾಡುತ್ತದೆ. ಬೆಂಬಲ ಸೇವೆಗಳು ಮತ್ತು ಪುನರ್ವಸತಿ ಕಾರ್ಯಗಳು, ಕೆಲಸಕ್ಕೆ ಹಿಂದಿರುಗಲು ಬಯಸುವಂತಹ ಯುವ ಪಾರ್ಶ್ವವಾಯು ರೋಗಿಗಳಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಈ ಸೇವೆಗಳಲ್ಲಿ ಫಿಜಿಯೋಥೆರಪಿ, ಆಕ್ಯೂಪೇಷನಲ್ ಥೆರಪಿ, ಸ್ಪೀಚ್ ಥೆರಪಿ ಮತ್ತು ಮನೋವಿಜ್ಞಾನ ಸಂಬoಧಿತ ಸಮಾಲೋಚನೆಗಳು ಸೇರಿರುತ್ತವೆ. ಕಳೆದುಕೊಂಡ ದೈಹಿಕ ಸಾಮರ್ಥ್ಯವನ್ನು ಮರಳಿ ಪಡೆಯುವುದು ಮಾತ್ರ ಈ ಸೇವೆಗಳ ಗುರಿಯಾಗಿರಬಾರದು. ಬದಲಿಗೆ ಪಾರ್ಶ್ವವಾಯುವಿನೊಂದಿಗೆ ಸಾಮಾನ್ಯವಾಗಿ ಸಹಯೋಗ ಹೊಂದಿರುವ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಸವಾಲುಗಳನ್ನು ನಿವಾರಿಸಿಕೊಂಡು ಬದುಕಲು ರೋಗಿಗಳಿಗೆ ಇವು ಸಹಾಯ ಮಾಡುವಂತಿರಬೇಕು.

ಯುವಜನರು ಮತ್ತು ಮಕ್ಕಳಲ್ಲಿ ಪಾರ್ಶ್ವವಾಯು ಪ್ರಕರಣಗಳು ಕಂಡುಬರುವುದು ಹೆಚ್ಚುತ್ತಿರುವುದು ಆಧುನಿಕ ಆರೋಗ್ಯ ಸೇವೆಗೆ ಆತಂಕದ ವಿಷಯವಾಗಿದೆ. ಈ ವಯೋಮಿತಿಗಳಲ್ಲಿನ ಅಪಾಯದ ಅಂಶಗಳು ಬೇರೆ ಬೇರೆಯಾಗಿದ್ದರೂ, ಅವರ ಜೀವನದ ಮೇಲೆ ಪಾರ್ಶ್ವವಾಯುವಿನ ಪರಿಣಾಮ ಅಷ್ಟೇ ವಿನಾಶಕಾರಿಯಾಗಿರುತ್ತದೆ. ಪಾರ್ಶ್ವವಾಯು ಸಂಬoಧಿತ ಲಕ್ಷಣಗಳನ್ನು ಕುರಿತಂತೆ ಸಾಮಾನ್ಯ ಜಾಗೃತಿ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ಪಾರ್ಶ್ವವಾಯು ರೋಗಿಗಳು ಮತ್ತು ಅವರಿಗೆ ಆರೈಕೆ ನೀಡುವವರು ಏನನ್ನು ಎದುರುನೋಡಬಹುದು ಎಂಬುದನ್ನು ಕುರಿತು ಅರಿವು ಹೊಂದಿರಬಹುದಲ್ಲದೆ, ಸೂಕ್ತ ವೈದ್ಯಕೀಯ ಸಹಾಯವನ್ನು ಪಡೆಯಬಹುದು. ಪಾರ್ಶ್ವವಾಯುವಿನ ದೀರ್ಘಕಾಲೀನ ಪರಿಣಾಮಗಳನ್ನು ಕನಿಷ್ಟಗೊಳಿಸಲು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಮುಖ್ಯವಾಗಿರುತ್ತವೆ. ಜೊತೆಗೆ ಇದರಿಂದ ರೋಗಿಗಳು ಕೆಲಸಕ್ಕೆ ಹಿಂದಿರುಗುವ ಮತ್ತು ಸಂತೃಪ್ತ ಜೀವನ ನಡೆಸುವ ಸಾಧ್ಯತೆಗಳನ್ನು ಸುಧಾರಿಸಬಹುದಾಗಿದೆ.

ವ್ಯಕ್ತಿಯೊಬ್ಬರಿಗೆ ಪಾರ್ಶ್ವವಾಯು ಬರುವ ಸಾಧ್ಯತೆ ಹೆಚ್ಚು ಎಂದು ಗುರುತಿಸಲು ನಮಗೆ ನೆರವಾಗುವ ಅಂಶಗಳು

ಆರೋಗ್ಯಕ್ಕೆ ಸಂಬoಧಿಸಿದoತೆ ಹಲವಾರು ಅಪಾಯಕಾರಿ ಅಂಶಗಳನ್ನು ಹೊಂದಿರುವ ಜನರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಕೆಲವು ಅಪಾಯಕಾರಿ ಅಂಶಗಳನ್ನು ಬದಲಾಯಿಸಬಹುದು ಅಥವಾ ನಿಭಾಯಿಸಬಹುದು, ಇವುಗಳನ್ನು ಮಾರ್ಪಡಿಸಬಹುದಾದ ಅಪಾಯಕಾರಿ ಅಂಶಗಳು ಎನ್ನಲಾಗುತ್ತದೆ.

ಇತರ ಅಪಾಯಕಾರಿ ಅಂಶಗಳನ್ನು ಬದಲಾಯಿಸಲಾಗದು ಅಥವಾ ನಿಭಾಯಿಸಲಾಗದಲ್ಲದೇ ಇವುಗಳನ್ನು ಮಾರ್ಪಡಿಸಲಾಗದ ಅಪಾಯಕಾರಿ ಅಂಶಗಳು ಎನ್ನಲಾಗುತ್ತದೆ.

ಮಾರ್ಪಡಿಸಬಹುದಾದ ಅಪಾಯಕಾರಿ ಅಂಶಗಳಲ್ಲಿ, ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯರೋಗ, ಧೂಮಪಾನ, ಮದ್ಯಪಾನ, ಇತರೆ ಮಾದಕ ವ್ಯಸನಗಳು, ವ್ಯಾಯಾಮದ ಕೊರತೆ, ಸ್ಥೂಲಕಾಯತೆ ಅಥವಾ ಬೊಜ್ಜು ಮೈ, ರಕ್ತದಲ್ಲಿ ಹೆಚ್ಚಿನ ಕೊಬ್ಬು, ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಿರುವುದು ಸೇರಿರುತ್ತವೆ.

ಮಾರ್ಪಡಿಸಲಾಗದ ಅಪಾಯಕಾರಿ ಅಂಶಗಳೆoದರೆ ವಯಸ್ಸು, ಜನಾಂಗ, ಲಿಂಗ, ಕುಟುಂಬದ ಇತಿಹಾಸ ಮತ್ತು ಪಾರ್ಶ್ವವಾಯು ಹೊಂದಿರುವ ಇತಿಹಾಸ. ಕುಟುಂಬದಲ್ಲಿ ಪಾರ್ಶ್ವವಾಯು ಇತಿಹಾಸ ಹೊಂದಿರುವ ಜನರಲ್ಲಿ ಪಾರ್ಶ್ವವಾಯು ಕಾಡುವ ಸಾಧ್ಯತೆಗಳು ಹೆಚ್ಚು. ಯಾರಾದರೂ ಈ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ ಈ ತೊಂದರೆ ಮರುಕಳಿಸುವ ಸಾಧ್ಯತೆಗಳೂ ಇರುತ್ತದೆ.

ಪಾರ್ಶ್ವವಾಯು ಬರದಂತೆ ತಡೆಯುವುದು ಹೇಗೆ?

ಪಾರ್ಶ್ವವಾಯು ತಡೆಗಟ್ಟಲು ಅತ್ಯುತ್ತಮ ಮಾರ್ಗವೆಂದರೆ ಆರೋಗ್ಯಕರ ಆಹಾರಕ್ರಮ ಅನುಸರಿಸುವುದು, ನಿಗದಿತ ವ್ಯಾಯಾಮ, ಧೂಮಪಾನ ಮತ್ತು ಮದ್ಯಪಾನ ತಪ್ಪಿಸುವುದು ಮತ್ತು ಒತ್ತಡ ಕಡಿಮೆ ಮಾಡಿಕೊಳ್ಳುವುದು. ಅನಾರೋಗ್ಯಕರ ಆಹಾರಕ್ರಮ, ಆಲಸಿ ಜೀವನಶೈಲಿ, ಧೂಮಪಾನ, ಮದ್ಯಪಾನ, ಒತ್ತಡಗಳು ಮೆದುಳು ಮತ್ತು ಕುತ್ತಿಗೆಯ ನಾಳಗಳಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ.

ಇದನ್ನು ನಾವು ಪ್ಲಾಕ್ ಎಂದು ಕರೆಯುತ್ತೇವೆ. ಈ ಪ್ಲಾಕ್ ಹೆಚ್ಚಾಗಿ ಸೇರಿಕೊಳ್ಳುತ್ತಲೇ ಇರುತ್ತದೆ ಮತ್ತು ಅಂತಿಮವಾಗಿ ಅದು ಪಾರ್ಶ್ವವಾಯು ಉಂಟುಮಾಡುವoತೆ ರಕ್ತನಾಳದಲ್ಲಿ ಅಡ್ಡಿ ಉಂಟು ಮಾಡುತ್ತದೆ. ಇದಲ್ಲದೆ ಈ ಪ್ಲಾಕ್ನ ಕೆಲವು ಭಾಗ ಛಿದ್ರವಾಗಬಹುದಲ್ಲದೇ ಇದು ಮೆದುಳಿನಲ್ಲಿರುವ ಇತರ ಕೆಲವು ನಾಳಗಲ್ಲಿ ಅಡ್ಡಿ ಉಂಟುಮಾಡಬಹುದು. ಹೆಚ್ಚಿದ ತೂಕವು ಅಧಿಕ ರಕ್ತದೊತ್ತಡ, ಕೊಬ್ಬು, ಮಧುಮೇಹ ಮತ್ತು ಹೃದ್ರೋಗಗಳಿಗೆ ಕಾರಣವಾಗುತ್ತದೆ.

ಆರೋಗ್ಯಕರ ತೂಕ ಕಾಪಾಡಿಕೊಳ್ಳಲು, ನಿಮ್ಮ ದೈಹಿಕ ಚಟುವಟಿಕೆಯ ಮಟ್ಟ ಮತ್ತು ನೀವು ಸೇವಿಸುವ ಕ್ಯಾಲೊರಿಗಳ ಸಂಖ್ಯೆ ನಡುವೆ ಸಮತೋಲನ ಸ್ಥಾಪಿಸಿಕೊಳ್ಳಿ. 10 ಪೌಂಡ್ಗಳಷ್ಟು ತೂಕ ಕಡಿಮೆ ಕಳೆದುಕೊಳ್ಳುವುದರಿಂದ ನಿಮಗೆ ಉಂಟಾಗಬಹುದಾದ ಪಾರ್ಶ್ವವಾಯು ಅಪಾಯದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ನಿರಂತರ ಮಾನಸಿಕ ಒತ್ತಡ ಅಪಧಮನಿಯ(ಆರ್ಟರಿ) ಗೋಡೆಗಳಿಗೆ ಹಾನಿ ಉಂಟುಮಾಡುತ್ತದೆ. ವ್ಯಾಯಾಮವು ನಿಮ್ಮ ರಕ್ತ ಉತ್ತಮ ರೀತಿಯಲ್ಲಿ ಹರಿಯುವಂತೆ ಮಾಡುತ್ತದಲ್ಲದೇ ನಿಮ್ಮ ಹೃದಯವನ್ನು ದೃಢಪಡಿಸುತ್ತದೆ. ವಾರದಲ್ಲಿ ಐದು ದಿನಗಳಲ್ಲಿ, ಪ್ರತಿ ದಿನಕ್ಕೆ 30 ನಿಮಿಷ ವ್ಯಾಯಾಮ ಮಾಡುವ ಗುರಿ ಇಟ್ಟುಕೊಳ್ಳಿ. ಪ್ರತಿ ದಿನ 10 ನಿಮಿಷಗಳ ವ್ಯಾಯಾಮ ಕೂಡ ಆರೋಗ್ಯಕ್ಕೆ ಲಾಭ ನೀಡುತ್ತದೆ.

ಸ್ಟ್ರೋಕ್ ಎಲ್ಲಾ ಅಪಾಯಕಾರಿ ಅಂಶಗಳನ್ನು ನಿಗದಿತ ಅವಧಿಗೊಮ್ಮೆ ಗಮನಿಸಬೇಕು ಮತ್ತು ಯಾವುದಾದರೂ ಅಪಾಯದ ಅಂಶ ಇದ್ದಲ್ಲಿ ಅದಕ್ಕೆ ಆಕ್ರಮಣಕಾರಿ ರೀತಿಯಲ್ಲಿ ಗಮನ ಹರಿಸುವ ಕ್ರಮ ಕೈಗೊಳ್ಳುವುದನ್ನು ಪರಿಗಣಿಸಬೇಕು. ಉದಾಹರಣೆಗೆ ನಿಗದಿತವಾಗಿ ರಕ್ತದೊತ್ತಡ ಗಮನಿಸುವುದು. ಶೇ. 95ರಷ್ಟು ಬಾರಿ ನಿಮ್ಮ ರಕ್ತದೊತ್ತಡ ಸಾಮಾನ್ಯ ಮಟ್ಟದಲ್ಲಿರಬೇಕು.

ಅದೇ ರೀತಿ ಮಧುಮೇಹ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ನ ಕಟ್ಟುನಿಟ್ಟಿನ ನಿಯಂತ್ರಣ ಕೈಗೊಳ್ಳಬೇಕು. ಇವು ಅಧಿಕ ರಕ್ತದೊತ್ತಡ, ಮಧುಮೇಹಕ್ಕೆ ಕಾರಣವಾಗಬಹುದು, ಇದು ಪಾರ್ಶ್ವವಾಯುವಿಗೆ ಅಪಾಯಕಾರಿ ಅಂಶವಾಗಿರುತ್ತದೆ. ಈ ಹಿಂದೆ ಹೃದಯಾಘಾತದ ಇತಿಹಾಸ ಅಥವಾ ಹೃದಯದ ಮಿಡಿತದಲ್ಲಿ ಯಾವುದೇ ಅಸಾಮಾನ್ಯತೆಯಂತಹ ಯಾವುದಾದರೂ ಹೃದಯ ಸಮಸ್ಯೆಗಳು ಇದ್ದಲ್ಲಿ ಚಿಕಿತ್ಸೆ ನೀಡಬೇಕು. ಇದರಿಂದ ಪಾರ್ಶ್ವವಾಯು ತಡೆಗಟ್ಟಲು ನೆರವಾಗುತ್ತದೆ. ಆದ್ದರಿಂದ ಸ್ಟ್ರೋಕ್ನ ಅಥವಾ ಪಾರ್ಶ್ವವಾಯು ತಡೆಗಟ್ಟುವ ಏಕೈಕ ಮಾರ್ಗ ಎಂದರೆ ಅದು ಈ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವುದಾಗಿದೆ.

–ಡಾ. ಸುರಭಿ ಚರ್ತುವೇದಿ, ನರರೋಗಶಾಸ್ತ್ರಜ್ಞರು ಮತ್ತು ಪಾರ್ಶ್ವವಾಯು ತಜ್ಞರು, ಟ್ರೈಲೈಫ್ ಹಾಸ್ಪಿಟಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.