ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಚರ್ಮರೋಗತಜ್ಞರಲ್ಲಿ ಕರೆ ತಂದಿದ್ದ ಆತ ತಾಯಿಯು ಕೋಣೆಯಿಂದ ಹೊರ ನಡೆದ ನಂತರ ವೈದ್ಯರ ಬಳಿ ಮೆಲುದನಿಯಲ್ಲಿ ಕೇಳುತ್ತಿದ್ದ: ’ಡಾಕ್ಟ್ರೆ, ಮಕ್ಕಳು ಅಮ್ಮನೊಂದಿಗೆ ಒಡನಾಡಿದರೆ ತೊಂದರೆ ಇಲ್ಲವಷ್ಟೆ? ಮಕ್ಕಳಿಗೆ ಕಾಯಿಲೆ ಅಂಟುವುದಿಲ್ಲ ತಾನೆ?’ ಅಂದು ಚರ್ಮರೋಗದ ಹೊರರೋಗಿಗಳ ವಿಭಾಗಕ್ಕೆ ಭೇಟಿಯಿತ್ತ ಸಂದರ್ಭದಲ್ಲಿ ಕಂಡು ಬಂದ ದೃಶ್ಯವಿದು. ಅಷ್ಟಕ್ಕೂ ಆಕೆ ಬಳಲುತ್ತಿದ್ದ ಕಾಯಿಲೆ ಯಾವುದು ಎಂದು ಚರ್ಮರೋಗತಜ್ಞರಲ್ಲಿ ಕೇಳಿದಾಗ ತಿಳಿದು ಬಂದದ್ದು ‘ಸೋರಿಯಸಿಸ್’ ಎಂದು.

ಏನಿದು ಸೋರಿಯಾಸಿಸ್?
ಸೋರಿಯಾಸಿಸ್ ಒಂದು ದೀರ್ಘಕಾಲದ, ಹೆಚ್ಚಿನ ಸಂದರ್ಭಗಳಲ್ಲಿ ಮತ್ತೆ ಮತ್ತೆ ಮರುಕಳಿಸುವ ಚರ್ಮದ ಸಮಸ್ಯೆ. ಈ ಕಾಯಿಲೆಗೆ ನಿಖರವಾದ ಕಾರಣವಿನ್ನೂ ತಿಳಿದಿಲ್ಲ. ಆದರೆ ಮುಖ್ಯವಾಗಿ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯ ದೋಷದಿಂದ ಉಂಟಾಗುವ ಸಮಸ್ಯೆಯಿದು. ಆದ್ದರಿಂದ ಆನುವಂಶೀಯತೆಯ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವಂತಹದ್ದಲ್ಲ. ಹಾಗೆಯೇ ಯಾವುದೇ ಸೂಕ್ಷ್ಮಾಣು ಅಥವಾ ವೈರಾಣು ಕೂಡ ಇದಕ್ಕೆ ಕಾರಣವಲ್ಲ. ಇದು ಯಾವುದೇ ವಸ್ತುವಿನ ಅಲರ್ಜಿಯಿಂದ ಉಂಟಾಗುವಂತಹದ್ದೂ ಅಲ್ಲ.

ಗುಣಲಕ್ಷಣಗಳೇನು?
ಈ ಸಮಸ್ಯೆಯು ಮಹಿಳೆ ಹಾಗೂ ಪುರುಷರಿಬ್ಬರನ್ನೂ ಸಮನಾಗಿ ಕಾಡುತ್ತದೆ. ದೇಹದ ವಿವಿಧ ಭಾಗದ ಚರ್ಮದ ಮೇಲೆ ಸಣ್ಣ ಸಣ್ಣ ಬಿಲ್ಲೆಗಳಂತಹ ಗಾಯಗಳು ಕಂಡು ಬರುತ್ತವೆ. ಈ ಬಿಲ್ಲೆಗಳು ಒಂದು ಬಗೆಯ ಬೆಳ್ಳಿಬಣ್ಣದ ಒಣ ಚರ್ಮದಿಂದ ಮುಚ್ಚಲ್ಪಟ್ಟಿರುತ್ತವೆ. ಆ ಒಣ ಚರ್ಮವನ್ನು ಕಿತ್ತ ಕೂಡಲೇ ಅಲ್ಲಿ ಸಣ್ಣ ಸಣ್ಣ ರಕ್ತ ಸ್ರಾವದ ಬಿಂದುಗಳಿರುತ್ತವೆ. ಕೈ, ಕಾಲು, ಮೊಣ ಕೈ, ಮೊಣಕಾಲು, ನೆತ್ತಿಯ ಚರ್ಮ – ಹೀಗೆ ದೇಹದ ಯಾವುದೇ ಭಾಗದಲ್ಲಿಯೂ ಇವು ಕಂಡುಬರಬಹುದು. ಈ ಗಾಯಗಳಲ್ಲಿ ಸಾಮಾನ್ಯವಾಗಿ ತುರಿಕೆ ಇರುತ್ತದೆ; ಇಲ್ಲದೆಯೂ ಇರಬಹುದು.

ಚರ್ಮದ ಪದರಗಳ ಜೀವಕೋಶಗಳು ವಿಭಜನೆಗೊಳ್ಳುವ ಪ್ರಕ್ರಿಯೆಯಲ್ಲಿನ ದೋಷವೇ ಈ ಕಾಯಿಲೆಗೆ ಮುಖ್ಯ ಕಾರಣ. ಸಾಮಾನ್ಯವಾಗಿ ಚರ್ಮದ ಪದರಗಳ ಜೀವಕೋಶಗಳು ಕೆಳ ಪದರದಿಂದ ಮೇಲಿನ ಪದರಕ್ಕೆ ಪಕ್ವವಾಗಿ ಬರಲು ಐವತ್ತೆರಡರಿಂದ ಎಪ್ಪತ್ತೈದು ದಿನಗಳು ಬೇಕಾಗುತ್ತವೆ. ಆದರೆ, ಈ ಸಮಸ್ಯೆಯಲ್ಲಿ ಕೇವಲ ಎಂಟರಿಂದ ಹತ್ತು ದಿನಗಳ ಒಳಗಾಗಿ ಈ ಜೀವಕೋಶಗಳು ಕೆಳ ಪದರದಿಂದ ಮೇಲಿನ ಪದರಗಳಿಗೆ ಪಕ್ವವಾಗಿ ಬರುತ್ತವೆ. ಬಹಳ ವೇಗವಾಗಿ ಜೀವಕೋಶಗಳು ವಿಭಜನೆ ಹೊಂದುವುದೇ ಇದಕ್ಕೆ ಕಾರಣ.

ಸೋರಿಯಾಸಿಸ್ನಲ್ಲಿ ಅನೇಕ ಬಗೆಗಳಿವೆ.
ಬಗೆ 1: ಈ ಬಗೆಯಲ್ಲಿ ಕೈ, ಕಾಲು ಮಂಡಿ, ಮೊಣಕೈ ಮೊದಲಾದ ಭಾಗಗಳಲ್ಲಿ ಸುಸ್ಪಷ್ಟವಾದ ಬೆಳ್ಳಿಬಣ್ಣದ ಒಣ ಚರ್ಮದಿಂದ ಮುಚ್ಚಲ್ಪಟ್ಟ ಗಾಯಗಳು ಕಂಡು ಬರುತ್ತವೆ. ಒಣ ಚರ್ಮವನ್ನು ಕಿತ್ತ ಕೂಡಲೇ ಅಲ್ಲಿ ರಕ್ತಸ್ರಾವದ ಬಿಂದುಗಳಿರುತ್ತವೆ.

ಬಗೆ 2 : ಇನ್ನೊಂದು ಬಗೆಯ ಸೋರಿಯಾಸಿಸ್ನಲ್ಲಿ ಕೆಂಪು ಕೆಂಪಾದ ಗಾಯಗಳು ಹೊಟ್ಟೆ ಬೆನ್ನು ಹಾಗೂ ಕೈಗಳ ಮೇಲೆ ಕಾಣಿಸಿಕೊಳ್ಳಬಹುದು. ಈ ಬಗೆಯು ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ಹದಿಹರೆಯದವರಲ್ಲಿ ಕಂಡುಬರುತ್ತದೆ.

ಬಗೆ 3: ಚರ್ಮದ ಮಡಿಕೆಗಳಿರುವ ದೇಹದ ಭಾಗಗಳಲ್ಲಿ ಗಾಯಗಳು ಗೋಚರಿಸುತ್ತವೆ. ಕಂಕುಳ, ತೊಡೆಗಳ ಸಂಧುಗಳಲ್ಲಿ, ಮಹಿಳೆಯರಲ್ಲಿ ಸ್ತನಗಳ ಕೆಳ ಭಾಗದಲ್ಲಿ ಗಾಯಗಳು ಕಂಡುಬರುತ್ತವೆ.

ಬಗೆ 4: ಶರೀರದ ಸುಮಾರು ತೊಂಬತ್ತಕ್ಕೂ ಹೆಚ್ಚು ಭಾಗವು ಕೆಂಪುಬಣ್ಣದ ಗಾಯಗಳನ್ನು ಹೊಂದಿರುತ್ತದೆ.

ಬಗೆ 5: ಗಾಯಗಳು ಕೇವಲ ನೆತ್ತಿಯ ಚರ್ಮದ ಮೇಲೆ ಕಂಡು ಬರುತ್ತವೆ.

ಬಗೆ 6: ಚರ್ಮದ ಗಾಯಗಳ ಜೊತೆಯಲ್ಲಿಯೇ ವ್ಯಕ್ತಿಯ ಉಗುರುಗಳಲ್ಲಿಯೂ ಬದಲಾವಣೆಗಳು ಕಂಡು ಬರುತ್ತವೆ. ಉಗುರು ಹಳದಿಬಣ್ಣಕ್ಕೆ ತಿರುಗುವುದು, ಉಗುರುಗಳ ಮೇಲೆ ಸಣ್ಣ ಸಣ್ಣ ತಗ್ಗುಗಳಾದಂತಾಗುವುದು, ಉಗುರು ಟೊಳ್ಳಾಗುವುದು.

ಬಗೆ 7: ಕೀಲುಗಳಲ್ಲಿಯೂ ಉರಿಯೂತದಂತಹ ಬದಲಾವಣೆ. ಸಾಮಾನ್ಯವಾಗಿ ಅಂಗೈನ ಸಣ್ಣ ಕೀಲುಗಳು, ಕೆಲವೊಮ್ಮೆ ದೊಡ್ಡ ಕೀಲುಗಳೂ ಬದಲಾವಣೆ ತೋರಬಹುದು.

ಪತ್ತೆ ಹೇಗೆ?
ಸಾಮಾನ್ಯವಾಗಿ ರೋಗಿಯ ಗುಣಲಕ್ಷಣಗಳನ್ನು ಆಧರಿಸಿಯೇ ಕಾಯಿಲೆಯನ್ನು ಪತ್ತೆ ಮಾಡಲಾಗುತ್ತದೆ. ಕಾಯಿಲೆಯನ್ನು ಧೃಡಪಡಿಸಲು ಗಾಯದ ಅಂಗಾಂಶದ ತುಣುಕೊಂದನ್ನು ಬಯಾಪ್ಸಿ ಪರೀಕ್ಷೆ ಮಾಡಿ ಚರ್ಮದ ಜೀವಕೋಶಗಳ, ಪದರಗಳಲ್ಲಿನ ನಿರ್ದಿಷ್ಟ ಬದಲಾವಣೆಗಳನ್ನು ಗಮನಿಸಬಹುದು.

ಸೋರಿಯಾಸಿಸ್ ಕಾಯಿಲೆಯು ಚಿಕಿತ್ಸೆಯ ನಂತರ ನಿಯಂತ್ರಣಕ್ಕೆ ಬಂದರೂ ಮತ್ತೆ ಮರುಕಳಿಸುವುದಿಲ್ಲ ಎಂದು ಹೇಳಲು ಬರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಇದು ಯಾವ ಬಗೆಯ ತಿರುವನ್ನು ಪಡೆಯಬಹುದೆಂದು ಊಹಿಸುವುದು ಸ್ವಲ್ಪ ಕಷ್ಟದ ಸಂಗತಿಯೇ. ಬಹಳ ಅಪರೂಪದ ಸಂದರ್ಭಗಳಲ್ಲಿ ಸೋರಿಯಾಸಿಸ್ ಮರುಕಳಿಸದೆಯೂ ಇರಬಹುದು. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಸೋರಿಯಾಸಿಸ್ ಚಿಕಿತ್ಸೆಯ ಸಮಯದಲ್ಲಿ ನಿಯಂತ್ರಣಗೊಂಡರೂ ಪುನಃ ಮರುಕಳಿಸುತ್ತದೆ.

ನೆನಪಿನಲ್ಲಿಡಬೇಕಾದ ಅಂಶಗಳು

* ಹೇಗೆ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಒಮ್ಮೆ ಪತ್ತೆಯಾದರೆ ಸಂಪೂರ್ಣವಾಗಿ ಗುಣಪಡುವುದಿಲ್ಲವೋ ಹಾಗೆಯೇ ಸೋರಿಯಾಸಿಸ್ ಕೂಡ.

* ಕೆಲವು ಅಂಶಗಳು ಸೋರಿಯಾಸಿಸ್ ಕಾಯಿಲೆಯನ್ನು ಪ್ರಚೋದಿಸುತ್ತವೆ. ಅವೆಂದರೆ, ಶರೀರಕ್ಕೆ ಆಗುವ ಆಘಾತ, ಕೆಲವು ಬಗೆಯ ಸೋಂಕುಗಳು, ಕೆಲವು ಔಷಧಗಳು, ಒತ್ತಡ ತುಂಬಿದ ಜೀವನಶೈಲಿ, ಸೂರ್ಯನ ಬಿಸಿಲಿಗೆ ಅತಿಯಾಗಿ ಮೈಯೊಡ್ಡುವಿಕೆ, ಪದೇ ಪದೇ ಡಯಾಲಿಸಿಸ್ಗೆ ಒಳಪಡುವುದು, ಕ್ಯಾಲ್ಸಿಯಂ ಕೊರತೆ, ಮದ್ಯಪಾನ, ಧೂಮಪಾನ, ಮುಂತಾದವು

* ಚಳಿಗಾಲದಲ್ಲಿಯೂ ಒಮ್ಮೊಮ್ಮೆ ಈ ಕಾಯಿಲೆಯು ಉಲ್ಬಣಗೊಳ್ಳುತ್ತದೆ. ಆ ಸಂದರ್ಭದಲ್ಲಿ ಚರ್ಮವನ್ನು ಮೃದುಗೊಳಿಸುವ ಔಷಧಗಳನ್ನು ಬಳಸಬಹುದು.

* ಈ ಕಾಯಿಲೆಯು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ.

* ಸೋರಿಯಾಸಿಸ್ ಮಾರಣಾಂತಿಕ ಕಾಯಿಲೆಯಲ್ಲ. ಸಾಮಾನ್ಯವಾಗಿ ಯಾವುದೇ ಅಪಾಯಕರ ಸಂಭವನೀಯ ಪರಿಣಾಮಗಳಿಗೆ ಕಾರಣವಾಗುವುದಿಲ್ಲ.

* ಈ ಕಾಯಿಲೆಯು ಪತ್ತೆಯಾದಾಗ, ವ್ಯಕ್ತಿಯು ಮಾನಸಿಕವಾಗಿ ಕುಗ್ಗಿಹೋಗದೇ ಚಿಕಿತ್ಸೆಯನ್ನು ಪಡೆದು ಸಾಮಾನ್ಯ ಜೀವನ ನಡೆಸಲು ದೃಢ ಮನಸ್ಸು ಮಾಡಬೇಕು.

ನಿಯಂತ್ರಣ ಸಾಧ್ಯ
ದಿನ ನಿತ್ಯದ ವ್ಯಾಯಾಮ, ಪ್ರಾಣಾಯಾಮ, ಸಮತೋಲನ ಆಹಾರದ ಸೇವನೆ, ಹೆಚ್ಚು ನೀರಿನ ಬಳಕೆ, ಚರ್ಮದ ಮೃದುಕಾರಕಗಳ ಬಳಕೆ, ಮದ್ಯಪಾನ ಹಾಗೂ ಧೂಮಪಾನದ ವರ್ಜನೆ – ಇವುಗಳಿಂದ ನೋರಿಯಾಸಿಸ್ನ ನಿಯಂತ್ರಣ ಸಾಧ್ಯ.

ಚಿಕಿತ್ಸೆ ಏನು?
ಸೋರಿಯಾಸಿಸ್ ಕಾಯಿಲೆಯನ್ನು ಹೆಚ್ಚಿನ ಸಂದರ್ಭಗಳಲ್ಲಿ ಸಂಪೂರ್ಣವಾಗಿ ಗುಣಪಡಿಸಲಾಗುವುದಿಲ್ಲ. ಆದರೆ ಅದರ ನಿಯಂತ್ರಣ ಖಂಡಿತ ಸಾಧ್ಯ. ವ್ಯಕ್ತಿಯ ಕಾಯಿಲೆಯ ತೀವ್ರತೆಯನ್ನು ಅಳೆದು ಚಿಕಿತ್ಸೆಯ ಸೂಕ್ತ ವಿಧಾನವನ್ನು ಆರಿಸಿಕೊಳ್ಳಬಹುದು. ಗಾಯಗಳ ಮೇಲೆ ಹಚ್ಚಲು ಔಷಧ, ಸಾಮಯಿಕ ಉತ್ಪನ್ನಗಳನ್ನು ಬಳಸಿ ಚಿಕಿತ್ಸೆ. ನೇರಳಾತೀತ ವಿಕಿರಣಗಳನ್ನು ಬಳಸಿ ಚಿಕಿತ್ಸೆ. ಇಡೀ ದೇಹಕ್ಕೆ ವ್ಯವಸ್ಥಿತವಾದ ಚಿಕಿತ್ಸೆ. ಜೈವಿಕ ಉತ್ಪನ್ನಗಳನ್ನು ಬಳಸಿ ಚಿಕಿತ್ಸೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.