ದಿನ ಭವಿಷ್ಯ: ಈ ರಾಶಿಯವರಿಗೆ ಹೊಸದನ್ನು ಕಲಿಯುವ ಆಸೆಗಳು ಹೆಚ್ಚಲಿವೆ
Published 20 ನವೆಂಬರ್ 2024, 6:41 IST
ಪ್ರಜಾವಾಣಿ ವಾರ್ತೆ
ಮೇಷ
ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯಸಮ್ಮತವಾಗಿ ಬಗೆಹರಿಸಿಕೊಳ್ಳುವಿರಿ. ಶುಭಕಾರ್ಯಗಳಿಗಾಗಿ ಅಥವಾ ಕ್ಷೇತ್ರ ದರ್ಶನಕ್ಕಾಗಿ ಖರ್ಚಿನ ಸಂಭವವಿರುವುದು. ಬೇಡಿಕೆಯ ಅರ್ಜಿಗಳಿಗೆ ಪ್ರೋತ್ಸಾಹ ಸಿಗುವುದು.
20 ನವೆಂಬರ್ 2024, 06:41 IST
ವೃಷಭ
ವಾಣಿಜ್ಯೋದ್ಯಮಿಗಳಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ವಿಶೇಷ ಅನುಭವ ಉಂಟಾಗುವುದು. ಅವಿವಾಹಿತರಿಗೆ ಉತ್ತಮ ಸಂಬಂಧ ಅರಸಿ ಬರುವುದು. ಮಕ್ಕಳ ಓದಿನ ಕಡೆ ಹೆಚ್ಚು ನಿಗಾವಹಿಸುವುದು ಉತ್ತಮ.
20 ನವೆಂಬರ್ 2024, 06:41 IST
ಮಿಥುನ
ಅನಿವಾರ್ಯವಾಗಿ ನಿವೇಶನ ಮಾರುವ ಪರಿಸ್ಥಿತಿ ಎದುರಾದರೂ ಉತ್ತಮ ಲಾಭ ಪಡೆಯುವಿರಿ. ಅತಿಥಿಗಳ ಆತಿಥ್ಯಕ್ಕಾಗಿ ಖರ್ಚು ಮಾಡುವಲ್ಲಿ ಧಾರಾಳತನ ವ್ಯಕ್ತಪಡಿಸುವಿರಿ. ಮನೆಯಲ್ಲಿ ಹೊಂದಾಣಿಕೆ ಅಗತ್ಯ ಎನಿಸಲಿದೆ.
20 ನವೆಂಬರ್ 2024, 06:41 IST
ಕರ್ಕಾಟಕ
ಮುಕ್ತ ಮಾತುಕತೆ ಮೂಲಕ ಕಾರ್ಮಿಕರಲ್ಲಿನ ಸಮಸ್ಯೆ ಬಗೆಹರಿಸಿಕೊಳ್ಳಿರಿ. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ. ಕೆಲಸ ಕಾರ್ಯಗಳು ಲಾಭಯುಕ್ತವಾಗಿ ಪೂರೈಸುವುದು.
20 ನವೆಂಬರ್ 2024, 06:41 IST
ಸಿಂಹ
ನಾಜೂಕಿನ ಮಾತುಗಳು ಅಥವಾ ಹಿತವಚನಗಳು ಸಹೋದ್ಯೋಗಿಯನ್ನು ಧೈರ್ಯದಿಂದ ಇರುವಂತೆ ಮಾಡಲಿದೆ. ಅಕ್ಕಪಕ್ಕದವರೊಂದಿಗೆ ಇದ್ದಂಥ ವಿವಾದಗಳು ಹಂತ ಹಂತವಾಗಿ ಸರಿಯಾಗಲಿವೆ.
20 ನವೆಂಬರ್ 2024, 06:41 IST
ಕನ್ಯಾ
ಕೆಲವು ಸೂಕ್ಷ್ಮವಾದ ಸನ್ನಿವೇಶಗಳು ಸಂಕುಚಿತ ಮನೋಭಾವನೆಯನ್ನು ದೂರಮಾಡಿ, ಎಲ್ಲವನ್ನೂ ಎದುರಿಸುವ ಮನೋಸ್ಥೈರ್ಯವನ್ನು ತಂದು ಕೊಡುವುದು.
20 ನವೆಂಬರ್ 2024, 06:41 IST
ತುಲಾ
ಒಂದೇ ವಿಷಯದಲ್ಲಿ ಹಲವರ ಸಲಹೆ ಕೇಳುವುದು ಸರಿಯಾದರೂ ನಿಮ್ಮ ವಿಷಯದಲ್ಲಿ ಅದು ಹಲವು ಗೊಂದಲಗಳನ್ನು ಸೃಷ್ಟಿ ಮಾಡಬಹುದು. ಆಧ್ಯಾತ್ಮಿಕ ವಿಚಾರಗಳ ಪುಸ್ತಕ ಕೊಳ್ಳಲು ಧನ ವಿನಿಯೋಗವಾಗುವುದು.
20 ನವೆಂಬರ್ 2024, 06:41 IST
ವೃಶ್ಚಿಕ
ಮನೆಯ ಹಿರಿಯರೊಬ್ಬರ ಮಧ್ಯಸ್ಥಿಕೆಯಿಂದ ನೆಂಟಸ್ತಿಕೆಯಲ್ಲಿ ಸಂಬಂಧ ಕೂಡಿ ಬರುವುದು. ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಂಗಾತಿಯಲ್ಲಿ ಒಪ್ಪಿಗೆ ಪಡೆಯಿರಿ. ದೇಹಾಯಾಸ ನಿರಾಸಕ್ತಿ ಮೂಡಿಸುತ್ತದೆ.
20 ನವೆಂಬರ್ 2024, 06:41 IST
ಧನು
ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ ಅಗತ್ಯವೆನಿಸುವುದು. ವಿಷಯಗಳನ್ನು ಗೌಪ್ಯವಾಗಿ ಇರಿಸಿದಲ್ಲಿ ಭವಿಷ್ಯದಲ್ಲಿ ತೊಂದರೆಯನ್ನು ಅನುಭವಿಸುವಂತೆ ಆಗುವುದು.
20 ನವೆಂಬರ್ 2024, 06:41 IST
ಮಕರ
ಬರಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ವಿಚಾರದಲ್ಲಿ ವಿಫಲರಾಗುವಿರಿ. ತುಮುಲಗಳನ್ನು ಮನಸ್ಸಿಗೆ ಹತ್ತಿರವಾದವರಲ್ಲಿ ಹೇಳಿಕೊಳ್ಳುವುದರಿಂದಾಗಿ ಮನಸ್ಸಿನ ಭಾರ ಕಡಿಮೆಯಾಗುವುದು.
20 ನವೆಂಬರ್ 2024, 06:41 IST
ಕುಂಭ
ಬ್ಯಾಂಕ್ ನೌಕರರಿಗೆ ಕೆಲಸಗಳಲ್ಲಿ ಒತ್ತಡ ಕಡಿಮೆಯಾಗಿ ನೆಮ್ಮದಿಯು ಸಿಗುವುದು. ಸಣ್ಣ ವಿಚಾರಗಳನ್ನು ದೊಡ್ಡದಾಗಿ ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಡಿ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಹೆಚ್ಚುವುದು.
20 ನವೆಂಬರ್ 2024, 06:41 IST
ಮೀನ
ಅಂದುಕೊಂಡಿರುವ ಕೆಲಸಗಳನ್ನು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಇರುವುದು. ಸಂಜೆಯ ಸಮಯದಲ್ಲಿ ಶಿರೋ ವೇದನದಿಂದ ಬಳಲುವ ಸಾಧ್ಯತೆ ಇರುವುದು. ಹೊಸದನ್ನು ಕಲಿಯುವ ಆಸೆಗಳು ಹೆಚ್ಚಲಿವೆ.
20 ನವೆಂಬರ್ 2024, 06:41 IST