ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ₹101.5ರಷ್ಟು ಹೆಚ್ಚಿಸಿವೆ.

ದೆಹಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಸಿಲಿಂಡರ್ ದರವು ₹1,785.50ಕ್ಕೆ ಏರಿಕೆ ಆಗಿದೆ. ಅಕ್ಟೋಬರ್ 1ರಂದು ಪ್ರತಿ ಸಿಲಿಂಡರ್ಗೆ ₹209ರಷ್ಟು ಹೆಚ್ಚಿಸಲಾಗಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಅನುಗುಣವಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿವೆ. ಮನೆಗಳಲ್ಲಿ ಅಡುಗೆಗೆ ಬಳಸುವ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ವಿಮಾನ ಇಂಧನ ದರ ಇಳಿಕೆ

ವಿಮಾನ ಇಂಧನ (ಎಟಿಎಫ್) ದರವನ್ನು ಶೇ 6ರವರೆಗೆ ಕಡಿತ ಮಾಡಲಾಗಿದೆ. ತೈಲ ಕಂಪನಿಗಳ ದರ ಸೂಚನೆಯ ಪ್ರಕಾರ, ದೆಹಲಿಯಲ್ಲಿ ವಿಮಾನ ಇಂಧನ ದರವು ಕಿಲೋ ಲೀಟರಿಗೆ ₹6,854ರಷ್ಟು ಕಡಿಮೆ ಆಗಿದ್ದು, ₹1.11 ಲಕ್ಷಕ್ಕೆ ತಲುಪಿದೆ. (ಒಂದು ಕಿಲೋ ಲೀಟರ್ ಎಂದರೆ ಒಂದು ಸಾವಿರ ಲೀಟರ್). ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ಮಾರಾಟ ದರದಲ್ಲಿ ವ್ಯತ್ಯಾಸ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.