ಬೆಂಗಳೂರು: ಉದ್ಯಮಗಳಲ್ಲಿ ವಾರಕ್ಕೆ 70 ಗಂಟೆಯ (ಐದು ದಿನದ ದುಡಿಮೆ ದಿನಗಳಂದು) ಕೆಲಸ ಮಾಡುವುದು ಅಗತ್ಯ ಎಂಬ ವಿಷಯ ಕುರಿತಂತೆ ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರ ಅಭಿಪ್ರಾಯ ಕುರಿತು ಈಗ ವ್ಯಾಪಕ ಚರ್ಚೆ ನಡೆಯುತ್ತಿದೆ.

’ಜಾಗತಿಕ ಮಟ್ಟಕ್ಕೆ ಹೋಲಿಸಿದಲ್ಲಿ ಭಾರತದಲ್ಲಿ ಮಾನವ ಸಂಪನ್ಮೂಲದ ಉತ್ಪಾದನೆ ತೀರಾ ಕಡಿಮೆ. ಇಂದಿನ ಯುವ ಸಮುದಾಯವು ದುಡಿಮೆಯ ಸಂಸ್ಕೃತಿಗೆ ತಮ್ಮದೇ ಆದ ಹೆಚ್ಚಿನ ಕೊಡುಗೆ ನೀಡಿದಲ್ಲಿ, ಜಾಗತಿಕ ವೇದಿಕೆಯಲ್ಲಿ ಭಾರತ ತನ್ನ ಪಾರಮ್ಯ ಮೆರೆಯಲು ಸಾಧ್ಯ’ ಎಂದು ಹೇಳಿದ ನಾರಾಯಣಮೂರ್ತಿ, 2ನೇ ವಿಶ್ವ ಯುದ್ಧದ ನಂತರ ಜಪಾನ್ ಮತ್ತು ಜರ್ಮನಿಯಲ್ಲಿ ದುಡಿಮೆ ಅವಧಿಯನ್ನು ವಿಸ್ತರಿಸಿದ್ದನ್ನು ಉಲ್ಲೇಖಿಸಿರುವುದನ್ನು ಎನ್‌ಡಿಟಿವಿ ವರದಿ ಮಾಡಿದೆ.

ನಾರಾಯಣಮೂರ್ತಿ ಅವರ ಸಲಹೆ ಕುರಿತಂತೆ ಮೈಕ್ರೊ ಬ್ಲಾಗಿಂಗ್ ವೇದಿಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಒಲಾದ ಸಿಇಒ ಭವಿಷ್ ಅಗರವಾಲ್, ‘ಇತರ ರಾಷ್ಟ್ರಗಳಲ್ಲಿ ಹಿಂದಿನ ಹಲವು ತಲೆಮಾರುಗಳು ಈ ಸಂಸ್ಕೃತಿಯನ್ನು ಕಟ್ಟಿವೆ. ಇಂದು ಅದೆಲ್ಲವನ್ನೂ ಭಾರತ ಒಂದೇ ತಲೆಮಾರಿನಲ್ಲಿ ಸಿದ್ಧಪಡಿಸುವ ಅನಿವಾರ್ಯತೆ ಇದೆ’ ಎಂದು ಪ್ರತಿಪಾದಿಸಿದ್ದಾರೆ.

2020ರಲ್ಲೂ ನಾರಾಯಣಮೂರ್ತಿ ಅವರು ದೀರ್ಘ ಸಮಯದವರೆಗೆ ಕೆಲಸ ಮಾಡುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೋವಿಡ್ ನಂತರದಲ್ಲಿ ಕೈಗಾರಿಕೆಗಳನ್ನು ಮರಳಿ ಹಿಂದಿನ ವೇಗಕ್ಕೆ ತರಲು ನೌಕರರು ವಾರಕ್ಕೆ 60 ಗಂಟೆಗಳ ಕಾಲ ದುಡಿಯುವುದು ಅಗತ್ಯ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಲಿಬಾಬಾ ಸಂಸ್ಥಾಪಕ ಚೀನಾದ ಜಾಕ್ ಮಾ ಅವರ ‘996’ ಎಂಬ ಸೂತ್ರ ಈ ಹಿಂದೆ ಬಹಳಷ್ಟು ವಿವಾದ ಹುಟ್ಟುಹಾಕಿತ್ತು. ದೀರ್ಘಕಾಲದವರೆಗೆ ನೌಕರರು ದುಡಿದರೆ, ಅಂಥವರಿಗೆ ಅವರ ಕೆಲಸಕ್ಕೆ ತಕ್ಕಂತ ಬೆಲೆ ಸಿಗಲಿದೆ ಎಂದಿದ್ದರು. ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ 6 ದಿನಗಳವರೆಗಿನ ದುಡಿಮೆಯು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್‌ಗಳಲ್ಲಿನ ನೌಕರರಿಗೆ ಅನಿವಾರ್ಯ ಎಂದಿದ್ದರು.

ಜಾಕ್ ಅವರ ಹೇಳಿಕೆಗೆ ಚೀನಾದ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸೂತ್ರದಿಂದ ಕೌಟುಂಬಿಕ ವಾತಾವರಣ ಹದಗೆಡಲಿದೆ. ಸಮಯವೇ ಸಿಗದೆ, ಯಾರೊಬ್ಬರೂ ಮಕ್ಕಳನ್ನು ಹೊಂದಲು ಸಾಧ್ಯವಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಒಂದು ವರ್ಷದ ಹಿಂದೆ ಟ್ವಿಟರ್ ಖರೀದಿಸಿದ್ದ ಎಲಾನ್ ಮಸ್ಕ್ ಅವರು ವಾರಕ್ಕೆ 100 ಗಂಟೆ ದುಡಿಯುವಂತೆ ತಮ್ಮ ಉದ್ಯೋಗಿಗಳಿಗೆ ಸೂಚಿಸಿದ್ದರು. ಸಾಧನೆ ಮಾಡಬೇಕೆಂದರೆ ನಾವೆಲ್ಲರೂ ಅಗತ್ಯಕ್ಕಿಂತ ಹೆಚ್ಚಿನ ದುಡಿಮೆಗಾರರಾಗಬೇಕು ಎಂದು ಇಮೇಲ್ ಕಳುಹಿಸಿದ್ದು ವರದಿಯಾಗಿತ್ತು.

ಬಾಂಬೇ ಶೇವಿಂಗ್ ಕಂಪನಿಯ ಸಿಇಒ ಶಾಂತನು ದೇಶಪಾಂಡೆ ಅವರೂ ಇಂಥದ್ದೇ ಅಭಿಪ್ರಾಯವನ್ನು ಲಿಂಕ್‌ಡಿನ್‌ನಲ್ಲಿ ವ್ಯಕ್ತಪಡಿಸಿದ್ದರು. ಹೊಸದಾಗಿ ಕೆಲಸಕ್ಕೆ ಸೇರಿದವರು ದಿನಕ್ಕೆ 18 ಗಂಟೆಗಳ ಕಾಲ ದುಡಿಯಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ‘ಒಳ್ಳೆಯ ಆಹಾರ ಸೇವಿಸಿ, ಸದಾ ಫಿಟ್ ಆಗಿರಿ. ಆದರೆ ಮುಂದಿನ 4 ರಿಂದ 5 ವರ್ಷಗಳವರೆಗೆ ದಿನಕ್ಕೆ 18 ತಾಸು ದುಡಿಯಿರಿ’ ಎಂಬುದು ಅವರ ಸಲಹೆಯಾಗಿತ್ತು.

ಇದೇ ವಿಷಯವಾಗಿ ಹಾರ್ವರ್ಡ್ ಬ್ಯುಸಿಸೆನ್ ರಿವ್ಯೂ 2018ರಲ್ಲಿ ಸಮೀಕ್ಷೆಯೊಂದನ್ನು ನಡೆಸಿದೆ. ಅಮೆರಿಕದಲ್ಲಿ ವಾರದ ದಿನಗಳಲ್ಲಿನ ದುಡಿಮೆ ಅವಧಿ 9.7 ಗಂಟೆ ಇದೆ. ವಾರಾಂತ್ಯದಲ್ಲಿ 3.9 ಗಂಟೆ ಇದೆ. ಅಮೆರಿಕದ ನೌಕರರು ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಅವಧಿ ದುಡಿಮೆಗೆ ವಿನಿಯೋಗಿಸುತ್ತಿದ್ದಾರೆ ಎಂದು ಈ ವರದಿ ಹೇಳಿದೆ.

ಭಾರತದ 357 ಸಿಇಒಗಳನ್ನು ಒಳಗೊಂಡ ಸಮೀಕ್ಷೆಯೊಂದರ ಪ್ರಕಾರ, ಸಿಇಒಗಳು ವಾರಕ್ಕೆ 39 ಗಂಟೆ ದುಡಿಯುತ್ತಿದ್ದಾರೆ. ಅಂದರೆ ವಾರದ 5 ದಿನಗಳಲ್ಲಿ ದಿನಕ್ಕೆ 8ರಿಂದ 9 ಗಂಟೆಗಳ ಕಾಲ ಅವರ ದುಡಿಮೆ ಇದೆ ಎಂದು ಸಮೀಕ್ಷೆ ಹೇಳಿದೆ.
.ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆಯೇ?: ಸಿದ್ದರಾಮಯ್ಯ.ಹಳೇ ಮಾಡಲ್ ಫೋನ್ನಂತೆಯೇ ಹಿಂದಿನ ಸರ್ಕಾರ: ವಿರೋಧ ಪಕ್ಷಗಳ ವಿರುದ್ಧ PM ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.