ಬೆಂಗಳೂರು: 2024ರ ಟಿ–20 ಕ್ರಿಕೆಟ್ ವಿಶ್ವಕಪ್ನಲ್ಲಿ ಭಾಗಿಯಾಗಲಿರುವ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ ವಹಿಸಲಿದೆ.

ಇದನ್ನು ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ ಜಗದೀಶ್ ಸ್ಪಷ್ಟಪಡಿಸಿದ್ದಾರೆ.
.ಮೈಸೂರು: ‘ನಂದಿನಿ’ ಅಂಬಲಿ, ಪ್ರೋಬಯಾಟಿಕ್ ಮಜ್ಜಿಗೆ ಮಾರುಕಟ್ಟೆಗೆ.
‘ಹೌದು, ನಾವು ಅವರಿಗೆ ಪ್ರಾಯೋಜಕತ್ವ ವಹಿಸಲಿದ್ದೇವೆ. ಪಂದ್ಯದ ವೇಳೆ ಅವರು ನಮ್ಮ ಬ್ರ್ಯಾಂಡ್ ಅನ್ನು ಪ್ರದರ್ಶಿಸಲಿದ್ದಾರೆ’ ಎಂದು ಕೆ.ಎಂ ಜಗದೀಶ್ ಭಾನುವಾರ ಪಿಟಿಐಗೆ ತಿಳಿಸಿದ್ದಾರೆ.

ನಂದಿನಿಯನ್ನು ಜಾಗತಿಕ ಬ್ರ್ಯಾಂಡ್ ಆಗಿ ಪರಿವರ್ತಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಾಗಲೇ ನಮ್ಮ ಮಳಿಗೆಗಳು ಮಧ್ಯಪ್ರಾಚ್ಯದಲ್ಲಿ ಇವೆ. ಸಿಂಗಪುರದಲ್ಲೂ ನಮ್ಮ ಉತ್ಪನ್ನಗಳು ಲಭ್ಯವಿವೆ. ನಮ್ಮ ಸಿಹಿತಿಂಡಿಗಳು ಅಮೆರಿಕದಲ್ಲೂ ಮಾರಾಟವಾಗುತ್ತಿವೆ’ ಎಂದು ಹೇಳಿದರು.
.ಸಾಲುಸಾಲು ಹಬ್ಬಗಳು: ನಂದಿನಿ ಹಾಲು, ಮೊಸರು, ಮಜ್ಜಿಗೆ ದಾಖಲೆ ಮಾರಾಟ.
ಕೆಎಂಎಫ್ನ ಈ ನಿರ್ಧಾರವನ್ನು ಇನ್ಫೋಸಿನ್ನ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ ಮೋಹನದಾಸ್ ಪೈ ಅವರು ಟೀಕಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಇದು ನಾಚಿಗೆಯ ಸಂಗತಿ. ಕರ್ನಾಟಕದ ರೈತರು ಹಾಗೂ ಕನ್ನಡಿಗ ಗ್ರಾಹಕರು ಪಾವತಿಸಿದ ಹಣವನ್ನು ವಿದೇಶಿ ತಂಡಗಳ ಪ್ರಾಯೋಜಕತ್ವಕ್ಕೆ ಏಕೆ ಬಳಸಲಾಗುತ್ತಿದೆ? ಅದು ಯಾವ ಮೌಲ್ಯವನ್ನು ತೋರಿಸುತ್ತದೆ? ಬಡ ರೈತರಿಗೆ ಅದನ್ನು ಪಾವತಿಸಿ. ಇದು ಕರ್ನಾಟಕದ ಸಹಕಾರಿ ಸಂಸ್ಥೆಗೆ ವ್ಯರ್ಥ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.
.ನಂದಿನಿ ಐಸ್ಕ್ರೀಂ ಬಿಡುಗಡೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್, ‘ನಮ್ಮ ಶೇ 85ರಷ್ಟು ಆದಾಯ ರೈತರಿಗೇ ಹೋಗುತ್ತದೆ. ನಮ್ಮ ಉತ್ಪನ್ನಗಳ ಪ್ರಚಾರಕ್ಕೆ ನಾವು ಪ್ರಾಯೋಜಕತ್ವ ವಹಿಸುತ್ತಿದ್ದೇವೆ. ನಾವು ಜಾಗತಿಕವಾಗಿ ಹೋಗಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.