ಪತಂಜಲಿ ಘಟಕ ಮುಚ್ಚಲು ಒತ್ತಾಯ
ಜಲ ಮಾಲಿನ್ಯಕ್ಕೆ ಕಾರಣವಾಗಿರುವ ಮೆ. ಪತಂಜಲಿ ಫುಡ್ಸ್ ಲಿಮಿಟೆಡ್ ಕಂಪನಿಯ ಖಾದ್ಯ ತೈಲ ತಯಾರಿಕಾ ಘಟಕವನ್ನು ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯರು ಘಟಕದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು. ‘ಕಂಪನಿಯು ಜಲ ಮಾಲಿನ್ಯ ಉಂಟುಮಾಡಿರುವ ಬಗ್ಗೆ ಕೆಎಸ್‌ಪಿಸಿಬಿಗೆ ಸಾಕ್ಷ್ಯಗಳು ಸಿಕ್ಕಿವೆ. ಜಿಲ್ಲಾಮಟ್ಟದ ಅಧಿಕಾರಿಗಳು ಶಿಫಾರಸು ಮಾಡಿದ ಮೇಲೂ ಪತಂಜಲಿಯ ಘಟಕವನ್ನು ಮುಚ್ಚಲು ಎಷ್ಟು ಸಮಯ ಬೇಕು’ ಎಂದು ನಾಗರಿಕ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಪ್ರಶ್ನಿಸಿದರು.