ಕೊಡಗು: ಜಿಲ್ಲೆಯಲ್ಲಿ ಕಾವೇರಿ ಸೇರಿದಂತೆ ಎಲ್ಲ ನದಿಗಳೂ ಅಪಾಯದಂಚನ್ನು ಮೀರಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ. ಜುಲೈ 20ರಂದೂ ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ.

90 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದು, 4 ಕಾಳಜಿ ಕೇಂದ್ರಗಳನ್ನು ತೆರೆದು 35 ಮಂದಿಯನ್ನು ಇರಿಸಲಾಗಿದೆ. ಒಂದೇ ದಿನ 30 ಮನೆಗಳು ಕುಸಿದು, 50 ವಿದ್ಯುತ್ ಕಂಬಗಳು ನೆಲಕಚ್ಚಿವೆ.

ನಾಪೋಕ್ಲು ಮೂರ್ನಾಡು ರಸ್ತೆ ಜಲಾವೃತಗೊಂಡಿದ್ದುದೆ. ಕುಶಾಲನಗರದ ಗೊಂದಿಬಸವನಹಳ್ಳಿಯ ರೊಂಡೆ ಕೆರೆಯ ಏರಿ ಕುಸಿದು ನೀರು ಜಮೀನುಗಳಿಗೆ ನುಗ್ಗಿದ್ದು, ಯುವಕರು ಮೀನು ಹಿಡಿದು ಸಂಭ್ರಮಿಸಿದರು.

ಕುಶಾಲನಗರದಲ್ಲಿ ಏಳು ಬಡಾವಣೆಗಳಿಗೆ ನೀರು ನುಗ್ಗಿದೆ. ಮಡಿಕೇರಿ– ವಿರಾಜಪೇಟೆ ನಡುವಿನ ಬೇತ್ರಿಯಲ್ಲಿ ಕಾವೇರಿ ಹರಿವು ಹೆಚ್ಚಳಗೊಂಡಿದ್ದು, ಸೇತುವೆ ಮಟ್ಟ ತಲುಪಲು ಕೆಲವೇ ಮೀಟರ್ಗಳಿವೆ. ಮಡಿಕೇರಿ ತಾಲ್ಲೂಕಿನ ಕಡಂಗ– ಎಡಪಾಲ– ಬಾವಲಿ ಚೆಯಂಡಾಣೆ ರಸ್ತೆ ಸೇತುವೆ ಮೇಲೆ ಹೊಳೆ ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ.

ಮಡಿಕೇರಿ–ಚೆಟ್ಟಳ್ಳಿ ರಸ್ತೆಗೆ ಅಭ್ಯಾಲ ಬಳಿ ಮಣ್ಣು ಕುಸಿದಿದ್ದು, ಸಂಚಾರ ಸ್ಥಗಿತಗೊಂಡಿದೆ. ಆಲೂರು ಸಿದ್ದಾಪುರ ಪಂಚಾಯಿತಿಯ ಹಾರೋಹಳ್ಳಿಯಲ್ಲಿ ರಸ್ತೆಗೆ ಮಣ್ಣು ಕುಸಿದಿದೆ.

ಸೋಮವಾರಪೇಟೆ ತಾಲ್ಲೂಕಿನ ಮಲ್ಲಳ್ಳಿ ಜಲಪಾತ ದಾರಿಯ ಹಂಚಿನಲ್ಲಿ ಎಂಬಲ್ಲಿ ರಸ್ತೆಯಲ್ಲಿ ನೀರು ಹರಿಯಲಾರಂಭಿಸಿದೆ. ಸೋಮವಾರಪೇಟೆಯಿಂದ ಸಕಲೇಶಪುರ ರಸ್ತೆಗೆ ತೆರಳುವ ಮಾಗೇರಿ– ಬಾಣಗೇರಿ ಸೇತುವೆ ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದೆ. ತೋಳೂರು ಶೆಟ್ಟಳ್ಳಿ–ಕೂತಿ–ವಣಗೂರು ಕೂಡುರಸ್ತೆ ಮಾರ್ಗವಾಗಿ ಸಕಲೇಶಪುರಕ್ಕೆ ವಾಹನಗಳು ಸಂಚರಿಸುತ್ತಿವೆ. ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ಮಂಗಳೂರು– ಮಡಿಕೇರಿ ರಸ್ತೆಯ ಕರ್ತೋಜಿಯಲ್ಲಿ ರಾತ್ರಿ ಸಂಚಾರವನ್ನು ಹೆದ್ದಾರಿಯಲ್ಲಿ ನಿರ್ಬಂಧಿಸಿರುವ ವಿಷಯ ತಿಳಿಯದ ಜನ ಚೆಕ್ಪೋಸ್ಟ್ಗಳಲ್ಲಿ ಕಿ.ಮೀಗಟ್ಟಲೆ ಸಾಲುಗಟ್ಟಿ ನಿಂತು ಪರಿತಪಿಸಿದರು.

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಭಾಗಮಂಡಲದಲ್ಲಿ 22, ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ 18, ನಾಪೋಕ್ಲು 15, ಅಮ್ಮತ್ತಿ 14, ಮಡಿಕೇರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 13 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.