ರಾಮನಗರ: ನಗರದ ಬೆಂಗಳೂರು–ಮೈಸೂರು ಮುಖ್ಯರಸ್ತೆಯಲ್ಲಿರುವ ಶಾನ್ ಚಿತ್ರಮಂದಿರದ ಮುಂಭಾಗ ಶನಿವಾರ ರಾತ್ರಿ ಜರುಗಿದ ಸರಣಿ ಅಪಘಾತದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಅವರ ಕಾರು ಜಖಂಗೊಂಡಿದೆ. ಘಟನೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರ ಕಾರು ಸೇರಿದಂತೆ ಎರಡು ಪೊಲೀಸ್ ವಾಹನಗಳಿಗೆ ಹಾನಿಯಾಗಿದೆ.

ರಸ್ತೆಯಲ್ಲಿ ಕಾರು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರು ರಸ್ತೆ ದಾಟಲು ಏಕಾಏಕಿ ಅಡ್ಡಬಂದಿದ್ದಾರೆ. ತಕ್ಷಣ ಕಾರು ಚಾಲಕ ಬ್ರೇಕ್ ಹಾಕಿದ್ದಾರೆ. ಇದರಿಂದ ಸರಣಿ ಅಪಘಾತ ಸಂಭವಿಸಿದೆ.

ಕಾರಿನ ಹಿಂದಿದ್ದ ಎಸ್ಪಿ ಕಾರಿನ ಚಾಲಕ ಸಹ ಬ್ರೇಕ್ ಹಾಕಿ ಕಾರು ನಿಲ್ಲಿಸಿದ್ದಾರೆ. ಮುಂದಿನ ಘಟನೆ ಅರಿಯದ ಹಿಂದಿದ್ದ ಎಎಸ್ಪಿ ಕಾರು ಚಾಲಕ, ನಿಯಂತ್ರಣ ಕಳೆದುಕೊಂಡು ಮುಂದಿದ್ದ ಎಸ್ಪಿ ಕಾರಿಗೆ ಗುದ್ದಿದ್ದಾನೆ. ಅದರ ಹಿಂದಿದ್ದ ಮತ್ತೊಂದು ವಾಹನ ಎಎಸ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ.

‘ನನ್ನ ಕಾರಿನ ಮುಂದಿದ್ದ ಕಾರು ಚಲಾಯಿಸುತ್ತಿದ್ದ ವೃದ್ಧರೊಬ್ಬರು ರಸ್ತೆ ದಾಟಲು ವ್ಯಕ್ತಿಯೊಬ್ಬರು ಅಡ್ಡಬಂದರೆಂದು ತಕ್ಷಣ ಬ್ರೇಕ್ ಹಾಕಿದರು. ಇದರಿಂದಾಗಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾಧ್ಯಮದವರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.