ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ಗೇಟ್ನ ಚೈನ್ ಶನಿವಾರ ಮಧ್ಯರಾತ್ರಿ 12ರ ಸುಮಾರಿಗೆ ತುಂಡಾಗಿದ್ದು, ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದೆ.

‘70 ವರ್ಷದ ಅಣೆಕಟ್ಟೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ದುರಂತ ಸಂಭವಿಸಿದ್ದು, ಜಲಾಶಯ ತುಂಬಿರುವುದರಿಂದ ಸದ್ಯ ದುರಸ್ತಿ ಮಾಡುವುದೂ ಕಷ್ಟವಾಗಿದೆ. ಹೀಗಾಗಿ ಈ ಗೇಟ್ನಲ್ಲಿ ಪ್ರತಿದಿನಕ್ಕೆ 35 ಸಾವಿರ ಕ್ಯುಸೆಕ್ನಷ್ಟು ನೀರು ನದಿಗೆ ಹರಿದು ಹೋಗುತ್ತದೆ’ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಜಲಾಶಯದ ಒಳಹರಿವಿನ ಪ್ರಮಾಣ ಕುಸಿದ ಕಾರಣ ಶುಕ್ರವಾರ ರಾತ್ರಿಯಷ್ಟೇ ಅಣೆಕಟ್ಟೆಯ ಗರಿಷ್ಠ ಮಟ್ಟಕ್ಕೆ ನೀರು ನಿಲ್ಲಿಸಲಾಗಿತ್ತು. 9 ಗೇಟ್ಗಳ ಮೂಲಕ 28 ಸಾವಿರ ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿತ್ತು.

‘ಪ್ರತಿದಿನ 35 ಸಾವಿರ ಕ್ಯುಸೆಕ್ನಂತೆ ನೀರು ಹೊರಗೆ ಹೋಗುತ್ತಲೇ ಇದ್ದರೆ ಜಲಾಶಯದ ನೀರು ಸಂಗ್ರಹ ಪ್ರಮಾಣ ಕೆಲವೇ ದಿನಗಳಲ್ಲಿ ಈಗಿನ 105.78 ಟಿಎಂಸಿ ಅಡಿಯಿಂದ 40 ಟಿಎಂಸಿ ಅಡಿಗೆ ಕುಸಿಯಬಹುದು, ಹಾಗಾದರೆ ಈ ಬಾರಿಯೂ ಒಂದು ಬೆಳೆಗೆ ಮಾತ್ರ ನೀರು ಸಿಗುವಂತಾಗಬಹುದೇ’ ಎಂಬ ಆತಂಕ ರೈತರನ್ನು ಕಾಡತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.