ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಜಲಾಶಯಕ್ಕೆ ಬಾಗಿನಕ್ಕೆ ಕ್ಷಣಗಣನೆ:MLA ಗವಿಯಪ್ಪ,ಬೆಂಬಲಿಗರಿಗೆ ನಿರ್ಬಂಧ

Published : 22 ಸೆಪ್ಟೆಂಬರ್ 2024, 5:57 IST
Last Updated : 22 ಸೆಪ್ಟೆಂಬರ್ 2024, 5:57 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲು ಕ್ಷಣಗಣನೆ ಆರಂಭವಾಗಿರುವಂತೆಯೇ ಶಾಸಕ ಎಚ್.ಆರ್. ಗವಿಯಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ಸ್ಥಳದಿಂದ ಹೊರನಡೆದರು.

ಟಿ.ಬಿ.ಡ್ಯಾಂ ಗೇಟ್‌ನಲ್ಲಿ ಭಾನುವಾರ ಬೆಳಿಗ್ಗೆ ಮೊದಲಿಗೆ ಶಾಸಕ ಗವಿಯಪ್ಪ ಅವರ ವಾಹನವನ್ನು ಮಾತ್ರ ಬಿಡಲಾಗಿತ್ತು. ಅವರ ಹಿಂಬಾಲಕರು, ರೈತರ ವಾಹನವನ್ನು ತಡೆಹಿಡಿಯಲಾಗಿತ್ತು. ಇದರಿಂದ ಕುಪಿತಗೊಂಡ ಶಾಸಕರು, ಅವರ ಹಿಂಬಾಲಕರ ವಾಹನಗಳನ್ನು ಒಳಕ್ಕೆ ಬಿಡಿಸಲು ವಾಪಸ್ ಗೇಟ್‌ನತ್ತ ಬಂದರು.

ಪೊಲೀಸ್ ಅಧಿಕಾರಿಗಳು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಶಾಸಕರು, ತಮ್ಮ ಬೆಂಬಲಿಗರೊಂದಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸ್ಥಳಕ್ಕೆ ಹೋಗದೇ ಹೊರನಡೆದರು.

ಸದ್ಯ ಶಾಸಕರು ತಮ್ಮ ಕಚೇರಿಯಲ್ಲೇ ಉಳಿದಿದ್ದು, ಸಿಎಂ, ಡಿಸಿಎಂ ಬರುವ ಹೊತ್ತಿಗೆ ಅಣೆಕಟ್ಟೆಯತ್ತ ಬರುತ್ತಾರೆಯೇ ಎಂಬ ಕುತೂಹಲ ನೆಲೆಸಿದೆ.

ಶಾಸಕ ಎಚ್.ಆರ್. ಗವಿಯಪ್ಪ ಅವರ ಬೆಂಬಲಿಗರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು

ಶಾಸಕ ಎಚ್.ಆರ್. ಗವಿಯಪ್ಪ ಅವರ ಬೆಂಬಲಿಗರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT