ಬೆಂಗಳೂರು: ಸೌತ್ ಸ್ಟಾರ್ ನಯನತಾರಾ ತಮ್ಮ ಬೋಲ್ಡ್ ನಟನೆಯಿಂದ ಅಷ್ಟೇ ಅಲ್ಲದೇ ಅನೇಕ ಸವಾಲಿನ ಪಾತ್ರಗಳನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ.

ಮುಂಚೂಣಿಯಲ್ಲಿರುವ ಇಂತಹ ನಟಿಯ ಬಗ್ಗೆ ಅವಹೇಳನಗಳು, ಟ್ರೋಲ್ಗಳೇನೂ ಕಡಿಮೆಯಿಲ್ಲ.

ನಯನತಾರಾ ಅವರ ಬಗ್ಗೆ ಆಗದವರು ಅವರ ಕಾಲೆಳೆಯುವ ಒಂದು ವಿಚಾರವೆಂದರೆ, 'ನಯನತಾರಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ತಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಂಡಿದ್ದಾರೆ. ಇವರ ಹಳೇ ಫೋಟೊಗಳನ್ನು ನೋಡಿದರೆ ನಗು ಬರುತ್ತದೆ' ಎಂದು ಕುಹಕವಾಡುತ್ತಾರೆ.

ಇಷ್ಟು ದಿನ ಇದನ್ನೆಲ್ಲ ಸಹಿಸಿಕೊಂಡು ಸುಮ್ಮನಿದ್ದ ನಯನತಾರಾ ಈಗ ಕಾಲೆಳೆಯುವವರಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ.

ಇತ್ತೀಚಿಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, 'ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಬದಲಾಗಿದ್ದೇನೆ ಎಂದು ಕೆಲವರು ಹೇಳುತ್ತಿರುತ್ತಾರೆ. ಇಂತವರಿಗೆ ಹೇಗೆ ಹೇಳಬೇಕು ಎಂದು ಗೊತ್ತಾಗದೇ ಸುಮ್ಮನಿದ್ದೇನೆ. ಆದರೆ, ಈಗ ಹೇಳುತ್ತೇನೆ ಕೇಳಿ, ನಾನು ಯಾವುದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ' ಎಂದು ಖಡಕ್ ಆಗಿ ಹೇಳಿದ್ದಾರೆ.

'ನಾನು ಆಗಾಗ ನನ್ನ ಹುಬ್ಬುಗಳನ್ನು ಶೇಪ್ ಮಾಡಿಸುತ್ತೇನೆ. ಅಲ್ಲದೇ ಸಿನಿಮಾಗಳಿಗಾಗಿ ನಾನು ಅನುಸರಿಸುವ ಡಯಟ್ ಕ್ರಮ ನನ್ನ ಕೆನ್ನೆಗಳನ್ನು ಕೆಲವೊಮ್ಮೆ ಉಬ್ಬುವಂತೆ, ಕೆಲವೊಮ್ಮೆ ಕುಗ್ಗುವಂತೆ ಮಾಡುತ್ತದೆ. ಹೀಗಾಗಿ ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಕೆಲವರಿಗೆ ಎನ್ನಿಸಬಹುದು ಎಂದಿದ್ದಾರೆ.

'ಇಷ್ಟು ಹೇಳಿದ ಮೇಲೂ ನಿಮಗೆ ಸಮಾಧಾನ ಆಗದಿದ್ದರೇ ನನ್ನ ಕೆನ್ನೆಯನ್ನು ಹಿಚುಕಿ ನೋಡಬಹುದು, ಅದೂ ಆಗದಿದ್ದರೇ ನನ್ನ ಮುಖವನ್ನು ಸುಟ್ಟು ನೋಡಬಹುದು, ಆಗ ಅಲ್ಲಿ ನಿಮಗೆ ಯಾವುದೇ ಪ್ಲಾಸ್ಟಿಕ್ ಸಿಗುವುದಿಲ್ಲ' ಎಂದು ನಗಾಡಿದ್ದಾರೆ. ಈ ಕುರಿತು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕೇರಳ ಮೂಲದ ಈ ಚೆಲುವೆ 2003 ರಲ್ಲಿ 'ಮನಸಿನಕ್ಕರೇ' ಮಲಯಾಳಿ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಅಲ್ಲಿಂದ ಮಲಯಾಳಂ, ತೆಲುಗು, ತಮಿಳು, ಕನ್ನಡ, ಹಿಂದಿಯ ಸುಮಾರು 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ದುಬಾರಿ ಸಂಭಾವನೆ ಪಡೆಯುವ ನಟಿ ಎಂದು ಹೆಸರಾಗಿದ್ದಾರೆ. 'ಜವಾನ್' ಸಿನಿಮಾ ಯಶಸ್ಸಿನ ನಂತರ ಸದ್ಯ ಅವರು ಮಲಯಾಳಂನ 'ಡಿಯರ್ ಸ್ಟೂಡೆಂಟ್ಸ್' ಎಂಬ ಸಿನಿಮಾ ಸೇರಿ ಹಲವು ಪ್ರೊಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದಾರೆ.
.ವೃತ್ತಿ ಜೀವನದ ಔನ್ನತ್ಯವನ್ನು ಎಸೆದು ಬಂದಿದ್ದೇನೆ.. ನಿಮಗಾಗಿ ನಾನು! ನಟ ವಿಜಯ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.