ಗುವಾಹಟಿ: ಪ್ರಕರಣವೊಂದರ ವಾದ ಮಂಡಿಸಲು ನ್ಯಾಯಾಲಯಕ್ಕೆ ಜೀನ್ಸ್ ಪ್ಯಾಂಟ್ ಧರಿಸಿ ಬಂದಿದ್ದ ಹಿರಿಯ ವಕೀಲರೊಬ್ಬರನ್ನು ಗುವಾಹಟಿಯ ಹೈಕೋರ್ಟ್ ಶುಕ್ರವಾರ ‘ಡಿಕೋರ್ಟ್’ (ನ್ಯಾಯಾಲಯದಿಂದ ಹೊರಗೆ ಕಳಿಸುವುದು) ಮಾಡಿದ್ದು, ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದೆ.

ಪೊಲೀಸರನ್ನು ನ್ಯಾಯಾಲಯಕ್ಕೆ ಕರೆಸಿದ ನ್ಯಾಯಮೂರ್ತಿ ಕಲ್ಯಾಣ್ ರೈ ಸುರಾನಾ ಅವರು ಜೀನ್ಸ್ ಧರಿಸಿದ್ದ ವಕೀಲ ಬಿ.ಕೆ. ಮಹಾಜನ್ ಅವರನ್ನು ಕೋರ್ಟ್‌ನಿಂದ ಹೊರಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.

‘ವಿಚಾರಣೆಯನ್ನು ಇಂದು ಮುಂದೂಡಲಾಗಿದೆ. ಅರ್ಜಿದಾರರ ಪರ ವಕೀಲರಾದ ಬಿ.ಕೆ. ಮಹಾಜನ್ ಅವರು ಜೀನ್ಸ್ ಪ್ಯಾಂಟ್ ಧರಿಸಿ ಹಾಜರಾಗಿದ್ದಾರೆ. ಹೀಗಾಗಿ ಅವರನ್ನು ಹೈಕೋರ್ಟ್ ಆವರಣದಿಂದ ಹೊರಕ್ಕೆ ಬಿಡುವಂತೆ ಪೊಲೀಸ್ ಸಿಬ್ಬಂದಿಗೆ ಕೋರ್ಟ್ ಕರೆ ನೀಡಬೇಕಾಯಿತು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಈ ಆದೇಶವನ್ನು ಮುಖ್ಯ ನ್ಯಾಯಮೂರ್ತಿ, ರಿಜಿಸ್ಟ್ರಾರ್ ಜನರಲ್ ಹಾಗೂ ಅಸ್ಸಾಂ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದ ಬಾರ್ ಕೌನ್ಸಿಲ್‌ಗಳ ಗಮನಕ್ಕೆ ತರಲಾಗುವುದು’ ಎಂದೂ ನ್ಯಾಯಮೂರ್ತಿ ಸುರಾನಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.