ನವದೆಹಲಿ: ಕೋಚಿಂಗ್ ಸೆಂಟರ್ನ ನೆಲಮಹಡಿಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ನೆಲಮಹಡಿಯ ಮಾಲೀಕ ಹಾಗೂ ಇತರ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದರೊಂದಿಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ದೆಹಲಿಯ ಓಲ್ಡ್ ರಾಜೇಂದ್ರ ನಗರದಲ್ಲಿರುವ 'ರಾವ್ಸ್ ಐಎಎಸ್ ಸ್ಟಡಿ ಸರ್ಕಲ್' ತರಬೇತಿ ಕೇಂದ್ರದ ಮಾಲೀಕ ಹಾಗೂ ನಿರ್ವಾಹಕರನ್ನು ಭಾನುವಾರ ಬಂಧಿಸಲಾಗಿತ್ತು.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಆಯುಕ್ತ (ಕೇಂದ್ರ) ಎಂ. ಹರ್ಷ ವರ್ಧನ್, ಕಟ್ಟಡಲ್ಲಿರುವ ಪ್ರತಿ ಮಹಡಿಗೂ ಬೇರೆ ಬೇರೆ ಮಾಲೀಕರಿದ್ದಾರೆ ಎಂದಿದ್ದಾರೆ.

'ರಾಜೇಂದ್ರ ನಗರದಲ್ಲಿ ವರದಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐದು ಮಂದಿಯನ್ನು ಬಂಧಿಸಲಾಗಿದೆ. ಕಟ್ಟಡದ ನೆಲಮಹಡಿಯ ಮಾಲೀಕ ಹಾಗೂ ಕಟ್ಟಡದ ಗೇಟ್ಗೆ ಹಾನಿಯಾಗುವಂತೆ ವಾಹನ ಚಾಲನೆ ಮಾಡಿ, ನೆಲ ಮಹಡಿಗೆ ನೀರು ನುಗ್ಗಲು ಕಾರಣವಾದ ವ್ಯಕ್ತಿಯೂ ಬಂಧಿತರ ಪಟ್ಟಿಯಲ್ಲಿದ್ದಾರೆ' ಎಂದು ತಿಳಿಸಿದ್ದಾರೆ.

ದುರಂತಕ್ಕೆ ಕಾರಣವಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಭರವಸೆ ನೀಡಿದ್ದಾರೆ.
.ದೆಹಲಿ | ನೆಲಮಾಳಿಗೆ ಜಲಾವೃತ: ಐಎಎಸ್ ಕೋಚಿಂಗ್ ಪಡೆಯುತ್ತಿದ್ದ ಮೂವರ ಸಾವು.ಕೋಚಿಂಗ್ ಸೆಂಟರ್ನಲ್ಲೇ ಐಎಎಸ್ ಆಕಾಂಕ್ಷಿಗಳ ದುರಂತ ಅಂತ್ಯ! ಘಟನೆ ಹೇಗಾಯಿತು?.ದೆಹಲಿ ಕೋಚಿಂಗ್ ಸೆಂಟರ್ ದುರಂತ: ಕುಟುಂಬದ ಕನಸನ್ನೇ ಕೊಂದ ಶ್ರೇಯಾ ಸಾವು.13 ಅಕ್ರಮ ಕೋಚಿಂಗ್ ಸೆಂಟರ್ಗಳಿಗೆ ಬೀಗ ಜಡಿದ ದೆಹಲಿ ಮಹಾನಗರ ಪಾಲಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.