ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Lok Sabha Elections Live |ಬಹುತೇಕ ಶಾಂತಿಯುತವಾಗಿ ಕೊನೆಗೊಂಡ 4ನೇ ಹಂತ; ಶೇ 62.8ರಷ್ಟು ಮತದಾನ

Published : 13 ಮೇ 2024, 2:12 IST
Last Updated : 13 ಮೇ 2024, 16:04 IST
ಫಾಲೋ ಮಾಡಿ
02:0813 May 2024

10 ರಾಜ್ಯಗಳ 96 ಕ್ಷೇತ್ರಗಳಿಗೆ ಮತದಾನ ಆರಂಭ

02:1713 May 2024
ಎಲ್ಲರೂ ಮತ ಚಲಾಯಿಸಿ. ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಅದು. ಮುಂದಿನ ಐದು ವರ್ಷಕ್ಕೆ ಇದು ಪ್ರಮುಖ ದಿನ. ನಾನು ರಾಜಕೀಯವಾಗಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ
ಅಲ್ಲು ಅರ್ಜುನ್, ನಟ

ಆಂಧ್ರಪ್ರದೇಶದ 175, ಒಡಿಶಾದ 28 ವಿಧಾನಸಭಾ ಕ್ಷೇತ್ರಗಲ್ಲಿಯೂ ಇಂದೇ ಮತದಾನ

02:3013 May 2024

ಜಮ್ಮು ಕಾಶ್ಮೀರದಲ್ಲಿ ಮತದಾನಕ್ಕೆ ಬಿಗಿ ಭದ್ರತೆ

02:4413 May 2024

ಸಿನಿಮಾ ತಾರೆಯರಿಂದ, ರಾಜಕೀಯ ನಾಯಕರಿಂದ ಮತದಾನ

ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮತದಾನ

ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮತದಾನ

–ಪಿಟಿಐ ಚಿತ್ರ

02:5913 May 2024

ಕರ್ತವ್ಯ ನಿರ್ವಹಿಸೋಣ: ಪ್ರಧಾನಿ ಮೋದಿ ಕರೆ

ನರೇಂದ್ರ ಮೋದಿ
ನರೇಂದ್ರ ಮೋದಿ
ಲೋಕಸಭೆ ಚುನಾವಣೆಯ 4 ನೇ ಹಂತದಲ್ಲಿ, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ಯುವ ಮತದಾರರು ಹಾಗೂ ಮಹಿಳಾ ಮತದಾರರು ಮತ ‍ಪ್ರಮಾಣ ಏರಿಕೆಗೆ ಶಕ್ತಿ ತುಂಬಲಿದ್ದಾರೆ ಎಂದು ನನಗೆ ಖಾತ್ರಿಯಿದೆ. ಬನ್ನಿ, ನಾವೆಲ್ಲರೂ ನಮ್ಮ ಕರ್ತವ್ಯವನ್ನು ಮಾಡೋಣ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸೋಣ
ನರೇಂದ್ರ ಮೋದಿ, ಪ್ರಧಾನಿ
03:0513 May 2024
ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್, ಪತ್ನಿ ಸಮೀರಾ ನಜೀರ್‌ ವಿಜಯವಾಡದಲ್ಲಿ ಮತದಾನ ಮಾಡಿದರು

ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್, ಪತ್ನಿ ಸಮೀರಾ ನಜೀರ್‌ ವಿಜಯವಾಡದಲ್ಲಿ ಮತದಾನ ಮಾಡಿದರು

– ಚಿತ್ರ: ಎಕ್ಸ್‌

ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ: ಅಧೀರ್‌ ರಂಜನ್ ಚೌಧರಿ

ಅಧೀರ್ ರಂಜನ್ ಚೌಧರಿ

ಅಧೀರ್ ರಂಜನ್ ಚೌಧರಿ

–ಪಿಟಿಐ ಚಿತ್ರ

ನಾವು ಗೆಲ್ಲುವುದದಲ್ಲಿ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ನನಗೆ ವಿಶ್ವಾಸವಿದೆ. ಸುಮಾರು 4-5 ಸ್ಥಳಗಳಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿವೆ. ನಾನು ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ಯಾರೂ ಇಲ್ಲಿಂದ ಟಿಎಂಸಿಯ ಯೂಸುಫ್ ಪಠಾಣ್ ಅವರನ್ನು ಆಯ್ಕೆ ಮಾಡಬಾರದು. ಅದು ನಿಷ್ಪ್ರಯೋಜಕವಾಗಿದೆ.
ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ಸಂಸದ ಹಾಗೂ ಬೆಹ್ರಾಂಪುರ ಅಭ್ಯರ್ಥಿ
04:1413 May 2024
ಚುನಾವಣೆಯಲ್ಲಿ ಹಿಂಸಾಚಾರವಿಲ್ಲ. ಎಲ್ಲವೂ ಸುಗಮವಾಗಿದೆ ಎಂದು ಅವರು ಹೇಳುವುದು ಬೇಸರದ ಸಂಗತಿ. ನಮ್ಮ ಪಕ್ಷದ ಕಾರ್ಯಕರ್ತರನ್ನು 2 ದಿನಗಳಿಂದ ಕೂಡಿ ಹಾಕಲಾಗಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವರನ್ನು ನಾನು ಕೇಳಲು ಬಯಸುತ್ತೇನೆ.. ನಮ್ಮ ಕಾರ್ಯಕರ್ತರನ್ನು ಏಕೆ ಕೂಡಿ ಹಾಕಲಾಗಿದೆ? ಸೋಲಿನ ಭಯವೇ?
ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ
04:1913 May 2024
ಸಿಕಂದರಾಬಾದ್‌ನ ಕಾಚೆಗುಡದಲ್ಲಿ ಕೇಂದ್ರ ಸಚಿವ ಕಿಶನ್ ಕುಮಾರ್ ರೆಡ್ಡಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು.

ಸಿಕಂದರಾಬಾದ್‌ನ ಕಾಚೆಗುಡದಲ್ಲಿ ಕೇಂದ್ರ ಸಚಿವ ಕಿಶನ್ ಕುಮಾರ್ ರೆಡ್ಡಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು.

– ಪಿಟಿಐ

ಅಖಿಲೇಶ್, ರಾಹುಲ್, ಓವೈಸಿಗೆ ಸೋಲು: ಸಾಕ್ಷಿ ಮಹಾರಾಜ್

400 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಕನೌಜ್‌ನಿಂದ ಅಖಿಲೇಶ್ ಯಾದವ್, ಮೈನ್‌ಪುರಿಯಿಂದ ಡಿಂಪಲ್ ಯಾದವ್, ರಾಯ್‌ಬರೇಲಿ ಮತ್ತು ವಯನಾಡ್‌ನಲ್ಲಿ ರಾಹುಲ್ ಗಾಂಧಿ ಮತ್ತು ಹೈದರಾಬಾದ್‌ನಿಂದ ಓವೈಸಿ - ಇವರೆಲ್ಲರೂ ಚುನಾವಣೆಯಲ್ಲಿ ಸೋಲಲಿದ್ದಾರೆ.
ಸಾಕ್ಷಿ ಮಹಾರಾಜ್, ಉನ್ನಾವ್ ಬಿಜೆಪಿ ಅಭ್ಯರ್ಥಿ
04:2613 May 2024

ಕಾಶ್ಮೀರದಲ್ಲಿ ಮತದಾನದ ಸಂಭ್ರಮ

ADVERTISEMENT
ADVERTISEMENT