ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಇತರ ಪ್ರಮುಖ ಬಂಧಿತ ರಾಜಕೀಯ ವ್ಯಕ್ತಿಗಳು ಅಂಚೆ ಮತಪತ್ರದ ಮೂಲಕ ಜೈಲಿನಿಂದಲೇ ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ.

ಅಂಚೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿ ಅವರ ಬಂಧನವಾಗಿದ್ದರಿಂದ ಅಂಚೆ ಮತದಾನದಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

ಅಂಚೆ ಮೂಲಕ ಮತ ಚಲಾಯಿಸಿದ ರಾಜಕೀಯ ನಾಯಕರಲ್ಲಿ ಮಾಜಿ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ, ಪಂಜಾಬ್ ಮಾಜಿ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ, ಅವಾಮಿ ಮುಸ್ಲಿಂ ಲೀಗ್ ಮುಖ್ಯಸ್ಥ ಶೇಖ್ ರಶೀದ್ ಮತ್ತು ಮಾಜಿ ಸಚಿವ ಫವಾದ್ ಚೌಧರಿ ಅವರು ಸೇರಿದ್ದಾರೆ ಎಂದು ಅಡಿಯಾಲಾ ಜೈಲಿನ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಗಣಕೀಕೃತ ರಾಷ್ಟ್ರೀಯ ಗುರುತಿನ ಚೀಟಿ(ಸಿಎನ್ಐಸಿ) ಹೊಂದದೆ ಇರುವ ಕಾರಣ ಅಡಿಯಾಲಾ ಜೈಲಿನಲ್ಲಿರುವ 7 ಸಾವಿರ ಕೈದಿಗಳಲ್ಲಿ 100ಕ್ಕಿಂತಲೂ ಕಡಿಮೆ ಕೈದಿಗಳು ಮತ ಚಲಾಯಿಸಲು ಅರ್ಹತೆ ಪಡೆದಿದ್ದರು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.