ಗುವಾಹಟಿ: ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶಕ್ಕೆ ಈ ವರ್ಷ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಈ ವರ್ಷ 3,27,493 ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದ್ದಾರೆ. ಅವರಲ್ಲಿ 3,13,574 ಜನ ಭಾರತೀಯರು ಮತ್ತು 13,919 ಜನ ವಿದೇಶಿಗರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2023ರ ಅಕ್ಟೋಬರ್ ಮಧ್ಯದಲ್ಲಿ ಉದ್ಯಾನವಕ್ಕೆ ಪ್ರವಾಸಿಗರ ಭೇಟಿಯನ್ನು ಅನುಮತಿಸಲಾಗಿತ್ತು. ಈ ಅವಧಿಯಲ್ಲಿ ಡಾಲ್ಫಿನ್ಗಳ ವೀಕ್ಷಣೆಗೆ ಬೋಟ್ ಸಫಾರಿ, ಜಂಗಲ್ ಸಫಾರಿ ಮತ್ತು ಆನೆ ಸಫಾರಿ, ಸೈಕ್ಲಿಂಗ್ ಟ್ರಯಲ್ ಮತ್ತು ಚಾರಣದಂತಹ ಆಯ್ಕೆಗಳನ್ನು ಪ್ರವಾಸಿಗರಿಗೆ ನೀಡಲಾಗಿತ್ತು.

ಸುಂದರ ಭೂದೃಶ್ಯಗಳು, ಶ್ರೀಮಂತ ಜೀವವೈವಿಧ್ಯತೆ ಮತ್ತು ಒಂದು ಕೊಂಬಿನ ಘೇಂಡಾಮೃಗದಂತಹ ಅಪರೂಪದ ಪ್ರಾಣಿಗಳಿಗೆ ಕಾಜಿರಂಗ ನೆಲೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.