ಅಮೇಠಿ (ಉತ್ತರ ಪ್ರದೇಶ): ವಯನಾಡು ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಿಷೇಧಿತ ಸಂಘಟನೆ ಪಾಫುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್ಐ) ಬೆಂಬಲ ಪಡೆದಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.

ಗೌರಿಗಂಜ್ನಲ್ಲಿ ಯಾದವ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಸಚಿವೆ, ‘ವಯನಾಡಿನಲ್ಲಿ ಸ್ಪರ್ಧಿಸಲು ಹಿಂದೂಗಳನ್ನು ಹತ್ಯೆ ಮಾಡಲು ಪಟ್ಟಿ ತಯಾರಿಸಿದ್ದ ಭಯೋತ್ಪಾದಕ ಸಂಘಟನೆಯ ಬೆಂಬಲವನ್ನು ರಾಹುಲ್ ಬಯಸಿದ್ದಾರೆ’ ಎಂದಿದ್ದಾರೆ.

‘ತಿಂಗಳ ಹಿಂದೆ ಜರುಗಿದ್ದ ಇಂಡಿನ್ ಯೂನಿಯನ್ ಮುಸ್ಲಿಂ ಲೀಗ್ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದರು. ಆದರೆ ಅದರಲ್ಲಿ ಕಾಂಗ್ರೆಸ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಎರಡರ ಧ್ವಜಗಳೂ ಮಾಯವಾಗಿದ್ದವು. ಆದರೆ ಈ ಎರಡೂ ಪಕ್ಷಗಳ ಧ್ವಜಗಳನ್ನು ಹಾರಿಸುವಂತೆ ರಾಹುಲ್ ಗಾಂಧಿ ಅವರು ಮುಸ್ಲಿಂ ಲೀಗ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಪಕ್ಷದ ಧ್ವಜವನ್ನೇ ಮಾರಿಕೊಂಡವರು, ಜನರಿಗೆ ಏನು ಮಾಡಿಯಾರು’ ಎಂದು ಸ್ಮೃತಿ ಪ್ರಶ್ನಿಸಿದ್ದಾರೆ.

‘ಕರ್ನಾಟಕದ ಸಚಿವರೊಬ್ಬರು ವಯನಾಡಿನಿಂದಲೇ ಏಕೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ ಎಂದು ಕೇಳಿದಾಗ, ವಯನಾಡಿನ ಜನರು ಹೆಚ್ಚು ನಿಷ್ಠಾವಂತರು ಎಂದು ರಾಹುಲ್ ಹೇಳಿದ್ದರು. ನಾನು ಕೇಳಲು ಬಯಸುವುದೆನೆಂದರೆ, 15 ವರ್ಷಗಳ ಕಾಲ ಸಂಸದರಾಗಿದ್ದ ಕ್ಷೇತ್ರದ ಜನರು ನಿಷ್ಠಾವಂತರಲ್ಲವೇ? ಅವರೇನು ದೇಶದ್ರೋಹಿಗಳೇ?’ ಎಂದು ಕೇಳಿದರು.

‘ಚುನಾವಣೆಯ ನಂತರ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಾಗಲಿದ್ದು, ರಾಜ್ಯದಲ್ಲಿ ಯೋಗಿ ಸರ್ಕಾರವಿದೆ. ರಾಹುಲ್ ಗಾಂಧಿ ಏನು ಮಾಡಲು ಸಾಧ್ಯ ಹೇಳಿ?’ ಎಂದರು.

2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಅಮೇಠಿಯಲ್ಲಿ ಸ್ಪರ್ಧಿಸಿದ್ದ ಸ್ಮೃತಿ ಇರಾನಿ, ಚುನಾವಣೆಯಲ್ಲಿ ಜಯ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.