ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು

Published : 10 ಮೇ 2024, 8:50 IST
Last Updated : 10 ಮೇ 2024, 8:50 IST
ಫಾಲೋ ಮಾಡಿ
Comments
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ 50 ದಿನಗಳು ಕಳೆದ ನಂತರ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್‌, 21 ದಿನಗಳ ಕಾಲ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಕೇಜ್ರಿವಾಲ್‌ ಅವರಿಗೆ ಅವಕಾಶ ಕಲ್ಪಿಸಿದೆ. ‘ಜೂನ್‌ 1ರವರೆಗೆ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಕೊನೆ ಹಂತದ ಮತದಾನ ಬಳಿಕ, ಜೂನ್‌ 2ರಂದು ಅವರು ಶರಣಾಗಬೇಕು’ ಎಂದು ಸೂಚಿಸಿದೆ. ₹ 50 ಸಾವಿರ ಮೊತ್ತದ ಬಾಂಡ್‌ ಹಾಗೂ ಜೈಲು ಸೂಪರಿಂಟೆಂಡೆಂಟ್‌ ಒಪ್ಪುವ ಮೊತ್ತದಷ್ಟು ಮತ್ತೊಂದು ಖಾತರಿ ಒದಗಿಸಬೇಕು ಎಂಬ ಷರತ್ತನ್ನೂ ಪೀಠ ವಿಧಿಸಿದೆ. ಮುಖ್ಯಮಂತ್ರಿ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಕೇಜ್ರಿವಾಲ್‌ ಭೇಟಿ ನೀಡಬಾರದು. ಅತ್ಯಗತ್ಯವೆನಿಸಿದ ಸಂದರ್ಭಗಳಲ್ಲಿ ಲೆಫ್ಟಿನೆಂಟ್‌ ಗವರ್ನರ್ ಅವರ ಅನುಮೋದನೆ ಇಲ್ಲದ ಹೊರತು, ಯಾವುದೇ ಕಡತಗಳಿಗೆ ರುಜು ಹಾಕುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದೆ.
ಭಗವಾನ್‌ ಹನುಮಾನ್‌ಗೆ ಧನ್ಯವಾದ. ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕಿದೆ. ಈ ಹೋರಾಟದಲ್ಲಿ ಜನರು ಸಹಕಾರ ನೀಡಬೇಕು
ಅರವಿಂದ ಕೇಜ್ರಿವಾಲ್‌ ದೆಹಲಿ ಮುಖ್ಯಮಂತ್ರಿ (ಜೈಲಿನಿಂದ ಹೊರಬಂದ ಬಳಿಕ)
ಅರವಿಂದ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಲಭಿಸಿರುವುದು ಖುಷಿ ತಂದಿದೆ. ಪ್ರಸಕ್ತ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಬೆಳವಣಿಗೆ ಬಹಳ ಸಹಕಾರಿಯಾಗಲಿದೆ –ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ   ಅರವಿಂದ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಸಿಕ್ಕಿರುವುದನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಭಾರತದ ನಿಲುವು ದೃಢವಾಗಿರಲಿದೆ
–ಶರದ್‌ ಪವಾರ್‌ ಎನ್‌ಸಿಸಪಿ (ಶರದ್‌ಚಂದ್ರ ಪವಾರ್‌ ಬಣ)
ಪ್ರಜಾಪ್ರಭುತ್ವ ಉಳಿವಿಗಾಗಿ ನಡೆಸುತ್ತಿರುವ ಹೋರಾಟವನ್ನು ಈಗ ಮತ್ತಷ್ಟು ತೀವ್ರಗೊಳಿಸಲಾಗುವುದು. ಅರವಿಂದ ಕೇಜ್ರಿವಾಲ್‌ ಒಬ್ಬ ವ್ಯಕ್ತಿಯಲ್ಲ ಅವರು ವಿಚಾರಧಾರೆ ಇದ್ದಂತೆ. ಇಂತಹ ವಿಚಾರಧಾರೆಯನ್ನು ದೊಡ್ಡ ಮಟ್ಟದಲ್ಲಿ ಜನರ ಬಳಿ ಒಯ್ಯುತ್ತೇವೆ
–ಭಗವಂತ ಮಾನ್‌ ಪಂಜಾಬ್‌ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT