ಭೂಕುಸಿತದಿಂದ ನಲುಗಿದ ಚೂರಲ್ಮಲ ಶಾಲೆಯ ಎದುರಿನ ಪ್ರದೇಶದಲ್ಲಿ ಮನೆ ಇದ್ದ ಜಾಗದ ಹುಡುಕಾಟ – ಪ್ರಜಾವಾಣಿ ಚಿತ್ರ
ತಂಗಿ ಕುಟುಂಬದ ಕುದುರೆ ಹುಡುಕಾಟ:
ಕಲ್ಪೆಟ್ಟದಿಂದ ಬಂದಿದ್ದ ಅನಸ್, ತಂಗಿಯ ಮನೆಯಲ್ಲಿದ್ದ ಜಾಗವನ್ನು ಹುಡುಕುತ್ತ ಮರಣಭೂಮಿಯಲ್ಲಿ ಹೆಜ್ಜೆ ಹಾಕುತ್ತಿದ್ದ. ಪತಿ ಮತ್ತು ಇಬ್ಬರು ಮಕ್ಕಳ ಜೊತೆ ಪ್ರಾಣ ಕಳೆದುಕೊಂಡ ಮೂರು ತಿಂಗಳ ಗರ್ಭಿಣಿ ತಂಗಿಯನ್ನು ನೆನೆದು ಅತ್ತು ಅವರ ಕಣ್ಣಿನಲ್ಲಿ ನೀರು ಬತ್ತಿಹೋಗಿದೆ.
ಭೂಕುಸಿತಕ್ಕೆ ಒಳಗಾದ ಚೂರಲ್‌ಮಲ ಪ್ರದೇಶದಲ್ಲಿ ಉಳಿದಿರುವ ಮನೆ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಗೆಳೆಯರ ನೆನೆದು ಕರಗಿದ ಟ್ಯಾಕ್ಸಿ ಚಾಲಕ:
ಮುಂಡಕ್ಕೈ ಗುಡ್ಡದ ರೆಸಾರ್ಟ್‌ಗೆ ಮೇಲಿದ್ದ ಗೆಳೆಯರ ಜೊತೆ ಜೀಪ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸೈನುದ್ದೀನ್ ದುರಂತ ಆದ ನಂತರ ಇದೇ ಮೊದಲು ಚೂರಲ್‌ಮಲಕ್ಕೆ ಬಂದಿದ್ದರು. ಅಲ್ಲಿ ನಿತ್ಯವೂ ಗೆಳೆಯರ ಜೊತೆ ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಬಿದ್ದಿರುವ ಬಂಡೆಗಳ ಬಳಿ ನಿಂತು ಗಳಗಳನೆ
ಅತ್ತರು.
ತುಂಬ ಸೌಹಾರ್ದದ ವಾತಾವರಣ ಇದ್ದ ಊರು ಇದು. ಧರ್ಮಗಳ ಗೋಡೆ ಇಲ್ಲಿರಲಿಲ್ಲ. ಎಲ್ಲರೂ ಜೊತೆಯಾಗಿ ದಿನ ಕಳೆಯುತ್ತಿ ದ್ದೆವು. ಈಗ ಅವರು ಯಾರೂ ಇಲ್ಲ
ಮಹಮ್ಮದ್ ಕುಟ್ಟಿ, ಚೂರಲ್‌ಮಲ ಶಾಲೆ ಬಳಿಯ ನಿವಾಸಿಭೂಕುಸಿತದಿಂದ ನಲುಗಿದ ಚೂರಲ್‌ಮಲ ಪ್ರದೇಶದಲ್ಲಿ ನಾಶವಾದ ಮನೆಯ ಒಳಗಿನಿಂದ ಲಭಿಸಿದ ಬಹುಮಾನಗಳೊಂದಿಗೆ ಅಕ್ಷಯಾ –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಮನೆ ಸೇರಿದ ಮಣಿಕಂಠನ್ ಕುಟುಂಬ
ಚೂರಲ್‌ಮಲದಿಂದ ಒಂದೂವರೆ ಕಿಲೋಮೀಟರ್ ದೂರದ ನೀಲಿಕಾಪ್ ಗ್ರಾಮದ ಗುಡ್ಡದ ಆಚೆ ವಾಸವಾಗಿದ್ದ ಮಣಿಕಂಠನ್ ಮತ್ತು ಕುಟುಂಬದವರು ಮನೆಯ ಎದುರಿನ ನದಿಯಲ್ಲಿ ನೀರು ಹೆಚ್ಚಾದುದನ್ನು ಕಂಡು ಕಾಡಿನೊಳಗೆ ಓಡಿಹೋಗಿದ್ದರು. ಕಾಳಜಿ ಕೇಂದ್ರದಲ್ಲಿದ್ದ ಅವರಿಗೆ ಮಂಗಳವಾರದಿಂದ ಸ್ವಂತ ಮನೆಯಲ್ಲಿ ವಾಸ. ಮಲಯಾಳಂ ಮತ್ತು ತಮಿಳು ಮಿಶ್ರಿತ ಕನ್ನಡದಲ್ಲಿ ಮಾತನಾಡುವ ಅವರು ಪುತ್ತುಮಲ ಬಳಿ ಬಸ್ ಇಳಿದು ಸಾಮಗ್ರಿಗಳನ್ನು ಖರೀದಿಸಿ ಕುಟುಂಬ ಸಮೇತರಾಗಿ ಮನೆಯತ್ತ ಸರಸರನೆ ಹೆಜ್ಜೆ ಹಾಕಿದರು. 'ಒಂದು ವಾರದಿಂದ ಮನೆಯತ್ತ ಸುಳಿಯಲಿಲ್ಲ. ಎಲ್ಲವನ್ನೂ ಸರಿಪಡಿಸಿ ಮತ್ತೊಮ್ಮೆ ಹೊಸ ಜೀವನ ಆರಂಭಿಸಬೇಕಾಗಿದೆ' ಎಂದು ಮಣಿಕಂಠನ್ ಅವರ ತಾಯಿ ಕೃಷ್ಣಮ್ಮ ಹೇಳಿದರು.
ಭೂಕುಸಿತಕ್ಕೆ ಒಳಾಗದ ಚೂರಲ್‌ಮಲ ಪ್ರದೇಶಕ್ಕೆ ಸಮೀಪದ ನೀಲಿಕಾಪ್‌ನಲ್ಲಿರುವ ಮನೆಯತ್ತ ಧಾವಿಸಿದ ಮಣಿಕಂಠನ್ ಮತ್ತು ಕುಟುಂಬ –ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಸನ್ರೈಸ್ ವ್ಯಾಲಿಯಲ್ಲಿ ಸಾಹಸ
ಸೂಜಿಪ್ಪಾರ ಜಲಪಾತ ಮತ್ತು ಚಾಲಿಯಾರ್ ನದಿ ನಡುವಿನ ಅತ್ಯಂತ ದುರ್ಗಮ ಪ್ರದೇಶವಾದ ಸನ್‌ರೈಸ್ ವ್ಯಾಲಿಗೆ ಹೆಲಿಕ್ಯಾಪ್ಟರ್ ಮೂಲಕ ಸಾಗಿ ಮಂಗಳವಾರ ಸಾಹಸಮಯ ಹುಡುಕಾಟ ನಡೆಸಲಾಯಿತು. ಕಲ್ಪೆಟ್ಟದ ಎಸ್‌ಕೆಎಂ ಶಾಲಾ ಮೈದಾನದಿಂದ ಸೇನಾಪಡೆಯ ಸಿಬ್ಬಂದಿ ಸೇರಿದಂತೆ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವವರ ಬೆಳಿಗ್ಗೆ ಏರ್‌ಲಿಫ್ಟ್. ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಜಾಗದಲ್ಲಿ ಜನರನ್ನು ಇಳಿಸುವ ಮತ್ತು ಏರ್‌ಲಿಫ್ಟ್ ಮಾಡುವ ಸಾಮರ್ಥ್ಯ ಇರುವ ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್ ಅನ್ನು ಬಳಸಲಾಗಿದೆ. ಆರು ಮಂದಿ ಸೈನಿಕರು ಮತ್ತು ಪೊಲೀಸ್ ಸ್ಪೆಷಲ್ ಆಯಕ್ಷನ್ ಗ್ರೂಪ್ನ ನಾಲ್ವರು, ಅರಣ್ಯ ಇಲಾಖೆ ಕೆಳಗೆ ಇಬ್ಬರು ವಾಚರ್ ಇದ್ದ ತಂಡವನ್ನು ಹಗ್ಗ ಮತ್ತು ಬ್ಯಾಸ್ಕೆಟ್ ಬಳಸಿ ಇಳಿಸಲಾಯಿತು. ಒಂದು ಪ್ರದೇಶದಲ್ಲಿ ಹುಡುಕಾಟ ಮುಗಿದ ನಂತರ ಏರ್ಲಿಫ್ಟ್ ಮಾಡಿ ಮತ್ತೊಂದು ಪ್ರದೇಶಕ್ಕೆ ಕರೆದುಕೊಂಡು ಹೋಗಲಾಯಿತು. ಅರುಣ ಹೊಳೆ ಚಾಲಿಯಾರ್ ನದಿಯನ್ನು ಸೇರುವ ಪ್ರದೇಶದಲ್ಲಿ ಹುಡುಕಲಾಗಿದೆ.
ಭೂಕುಸಿತದಿಂದ ನಲುಗಿದ ಚೂರಲ್‌ಮಲ ಪ್ರದೇಶದಲ್ಲಿ ಒಡನಾಡಿಗಳ ಮನೆ ಇದ್ದ ಜಾಗದ ಬಳಿ ಸೈನುದ್ದೀನ್ – ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್