ನವದೆಹಲಿ: ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಆರು ತಿಂಗಳಿಗೆ 60 ಜಿ.ಬಿ. ಉಚಿತ ಡೇಟಾ ನೀಡುವ ಹೊಸ ಯೋಜನೆಯನ್ನು ಏರ್‌ಟೆಲ್ ದೂರಸಂಪರ್ಕ ಕಂಪೆನಿ ಘೋಷಿಸಿದೆ. ಇದರ ಪ್ರಯೋಜನ ಪಡೆಯಲು ಗ್ರಾಹಕರು ಏರ್‌ಟೆಲ್ ಟಿವಿ ಆ್ಯಪ್ ಅಳವಡಿಸಿಕೊಳ್ಳಬೇಕಿದೆ. ಆ್ಯಪ್ ಅಳವಡಿಸಿಕೊಂಡ 24 ಗಂಟೆಗಳ ಒಳಗಾಗಿ ಗ್ರಾಹಕರ ಖಾತೆಗೆ ಡೇಟಾ ಜಮೆಯಾಗಲಿದೆ.

ಹೀಗೆ ಪಡೆಯಿರಿ: ಮೈ ಏರ್‌ಟೆಲ್ ಆ್ಯಪ್ ಇದ್ದವರಿಗೆ ಮಾತ್ರ ಉಚಿತ ಅಂತರ್ಜಾಲ ಸೇವೆ ಪಡೆಯಲು ಸಾಧ್ಯವಿದೆ. ಆ್ಯಪ್ ಇಲ್ಲದವರು ಗೂಗಲ್ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಮೈ ಏರ್‌ಟೆಲ್ ಆ್ಯಪ್ ಅನ್ನು ತೆರೆದ ತಕ್ಷಣ ಉಚಿತ ಡೇಟಾ ಪಡೆಯಿರಿ ಎಂಬ ಸಂದೇಶವುಳ್ಳ ಪರದೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಬೇಕು. ಜತೆಗೆ, 60 ಜಿ.ಬಿ. ಉಚಿತ ಡೇಟಾ ಪಡೆಯಲು ಇರುವ ಸೂಚನೆಗಳನ್ನು ಪಾಲಿಸಬೇಕು. ನಂತರ ಏರ್‌ಟೆಲ್ ಟಿವಿ ಆ್ಯಪ್ ಅಳವಡಿಸಿಕೊಂಡರೆ ಉಚಿತ ಅಂತರ್ಜಾಲ ಸೇವೆ ದೊರೆಯಲಿದೆ.

ಮುಂಗಾರು ಕೊಡುಗೆ ಕೊನೆಗೊಳ್ಳುತ್ತಿರುವ ಬೆನ್ನಲ್ಲೇ ಏರ್‌ಟೆಲ್ ಈ ಹೊಸ ಯೋಜನೆ ಘೋಷಿಸಿದೆ. ಮುಂಗಾರು ಕೊಡುಗೆಯಲ್ಲಿ ಮೂರು ತಿಂಗಳಿಗೆ 30 ಜಿ.ಬಿ. ಡೇಟಾ ಉಚಿತವಾಗಿ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.