ಬೆಂಗಳೂರು: ಇದನ್ನೊಂದು ಹತ್ಯೆ ಎಂದೇ ನಾವು ಕರೆಯುತ್ತೇವೆ. ಪೊಲೀಸರು ಹೇಳಿಕೆಯೊಂದನ್ನೇ ಆಧರಿಸಿ ಇದನ್ನು ಎನ್ಕೌಂಟರ್ ಎಂದು ಒಪ್ಪಿಕೊಳ್ಳಲು ನಾವು ತಯಾರಿಲ್ಲ. ಸಮಿತಿಯಲ್ಲಿರುವ ನಾಗರಿಕ ಸಮಾಜದ ಪ್ರತಿನಿಧಿಗಳು ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಈ ಹತ್ಯೆ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯಮಟ್ಟದ ಸಮಿತಿಯ ಸದಸ್ಯ ಬಂಜಗೆರೆ ಜಯಪ್ರಕಾಶ್ ಎಂದು ಆಗ್ರಹಿಸಿದ್ದಾರೆ.

ಈ ಚಳವಳಿಯಲ್ಲಿ ತೊಡಗಿರುವವರು ಇತರ ಅಪರಾಧಿಗಳಂತಲ್ಲ. ಇವರನ್ನು ರಾಜಕೀಯ ಹೋರಾಟಗಾರರು ಎಂದೇ ಪರಿಗಣಿಸಬೇಕಾಗುತ್ತದೆ. ಆದರೆ ಹೋರಾಟಕ್ಕೆ ಅವರು ಆಯ್ಕೆ ಮಾಡಿಕೊಂಡ ಹಾದಿ ಒಪ್ಪತಕ್ಕದ್ದಲ್ಲ. ಹಾಗೆಂದು ಅವರನ್ನು ಈ ರೀತಿ ಕೊಲ್ಲುವ ಕ್ರಮ ಸರಿಯಲ್ಲ. ಸರ್ಕಾರ ತಕ್ಷಣವೇ ಇಂತಹ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದಿದ್ದಾರೆ.

ಶರಣಾಗಿ ಎಂದು ವಿಕ್ರಂ ಗೌಡ ಮತ್ತು ತಂಡವನ್ನು ಉದ್ದೇಶಿಸಿ ಹಲವು ತಿಂಗಳ ಹಿಂದೆಯೇ ಸಮಿತಿಯಿಂದ ಪತ್ರ ಬರೆದಿದ್ದೆವು. ಅವರು ಯಾರೂ ನಮ್ಮನ್ನು ಸಂಪರ್ಕಿಸಲಿಲ್ಲ. ನಮ್ಮ ಪತ್ರಗಳು ಅವರಿಗೆ ತಲುಪಿದೆ ಎಂಬುದರ ಬಗ್ಗೆಯೇ ನಮಗೆ ಅನುಮಾನವಿದೆ ಎಂದು ಹೇಳಿದ್ದಾರೆ.

ನಿಮ್ಮ ಹೋರಾಟ ಮತ್ತು ಬೇಡಿಕೆಗಳ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದರೆ ಸಶಸ್ತ್ರ ಹೋರಾಟ ಸಂವಿಧಾನ ಬಾಹಿರ. ಅದನ್ನು ಬಿಟ್ಟು, ಶರಣಾಗಿ. ನಿಮಗೆ ತೊಂದರೆಯಾಗದಂತೆ ನಾವು ಎಚ್ಚರಿಕೆ ವಹಿಸುತ್ತೇವೆ. ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ನಿಮ್ಮ ಹೋರಾಟ ಮುಂದುವರೆಸಿ ಎಂದು ಅಲ್ಲಿ ಉಳಿದಿರುವವರಿಗೆ ತಿಳಿ ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.