ಪರ್ತ್: ‘ಈ ಸಲದ ಸರಣಿಯಲ್ಲಿ ಭಾರತ ತಂಡವು ಚೇತೇಶ್ವರ್ ಪೂಜಾರ ಅವರಿಲ್ಲದೇ ಕಣಕ್ಕಿಳಿಯುತ್ತಿರುವುದು ನನಗೆ ಬಹಳ ಸಂತೋಷವಾಗಿದೆ. ಅವರು ಇಲ್ಲಿ ಆಡಿದಾಗಲೆಲ್ಲ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಅವರ ವಿಕೆಟ್ ಗಳಿಸುವುದು ನಮ್ಮ ಮುಂದಿನ ಪ್ರಮುಖ ಸವಾಲಾಗಿತ್ತು’ ಎಂದು ಆಸ್ಟ್ರೇಲಿಯಾ ತಂಡದ ವೇಗಿ ಜೋಷ್ ಹ್ಯಾಜಲ್ವುಡ್ ಹೇಳಿದ್ದಾರೆ.

ಇದೇ 22ರಿಂದ ಆರಂಭವಾಗಲಿರುವ ಬಾರ್ಡರ್ –ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಪೂಜಾರ ಅವರಿಲ್ಲ. ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಭಾರತ ತಂಡವು ಸತತ ಎರಡು ಸರಣಿ ಜಯಿಸಲು ಪೂಜಾರ ಅವರ ಆಟವೇ ಪ್ರಮುಖ ಪಾತ್ರ ವಹಿಸಿತ್ತು.

2018–19ರ ಸರಣಿಯಲ್ಲಿ ಪೂಜಾರ ಅವರು 521 (1258 ಎಸೆತ) ರನ್ ಕಲೆಹಾಕಿದ್ದರು. ಎರಡನೇ ಸಲ ಜಯಿಸಿದಾಗ 271 ರನ್ (928 ಎಸೆತ) ಕಲೆ ಹಾಕಿದ್ದರು. ಕ್ರೀಸ್ನಲ್ಲಿ ಬಂಡೆಗಲ್ಲಿನಂತೆ ನಿಂತು ಬೌಲರ್ಗಳಿಗೆ ಸವಾಲೊಡ್ಡಿದ್ದರು.

‘ಭಾರತ ತಂಡದಲ್ಲಿ ಯಾವಾಗಲೂ ಯುವ ಪ್ರತಿಭಾನ್ವಿತರು ಆಡಲು ಬರುತ್ತಾರೆ. ಅವರು ತಮ್ಮ ತಂಡಕ್ಕಾಗಿ ಉತ್ತಮವಾಗಿ ಆಡುವ ಒತ್ತಡದಲ್ಲಿರುತ್ತಾರೆ. ತಂಡಕ್ಕೆ ಆಯ್ಕೆಯಾದ ಆಟಗಾರರು ಯಾವ ರೀತಿಯ ಸವಾಲು ಒಡ್ಡುತ್ತಾರೆ ಎಂಬುದನ್ನು ಊಹಿಸಲಾಗದು’ ಎಂದರು.

‘ಪೂಜಾರ ಬಿಟ್ಟರೆ ರಿಷಭ್ ಪಂತ್ ಕೂಡ ಅದೇ ತರಹದ ಬ್ಯಾಟರ್. ಅವರಂತಹ ಬ್ಯಾಟರ್ಗಳಿಗೆ ಎರಡು, ಮೂರು ಯೋಜನೆಗಳೊಂದಿಗೆ ಕಣಕ್ಕಿಳಿಯಬೇಕಾಗುತ್ತದೆ. ನಮ್ಮಲ್ಲಿಯೂ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಅವರು ಅದೇ ತರಹದ ಆಟಗಾರರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.