ವಾಷಿಂಗ್ಟನ್: ಸಾಂಸ್ಕೃತಿಕ ರಾಷ್ಟ್ರೀಯತಾವಾದಿಗಳು ದೇಶದಲ್ಲಿ ಪ್ರಬಲ ಸಾಮಾಜಿಕ ಶಕ್ತಿ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತದಲ್ಲಿ ಇಂದು ಅವರು ಪ್ರಬಲ ರಾಜಕೀಯ ಶಕ್ತಿಯೂ ಆಗಿದ್ದಾರೆ ಎಂದು ಆರ್ಎಸ್ಎಸ್ ನಾಯಕ ರಾಮ್ ಮಾಧವ್ ಅವರು ಅಮೆರಿಕದ ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಾಂಪ್ರದಾಯವಾದಿಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಹೇಳಿದರು.

‘ಭಾರತದಲ್ಲಿನ ಎಡಪಂಥೀಯ ಉದಾರವಾದಿಗಳು ಎಲ್ಲಾ ಕಡೆಯಿಂದಲೂ ಮೂಲೆಗುಂಪಾಗಿದ್ದು, ಅವರು ನೆಲೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ಭಾರತದಲ್ಲಿ ನಿರಂಕುಶ ಆಡಳಿತ, ಪ್ರಜಾಪ್ರಭುತ್ವ ವಿರೋಧಿ ಹಾಗೂ ದಬ್ಬಾಳಿಕೆಯ ವಾತಾವರಣ ಇದೆ ಎಂದು ಮಾಧ್ಯಮಗಳಲ್ಲಿ ಅಥವಾ ಲೇಖನಗಳಲ್ಲಿ ನೋಡಿದರೆ, ನಕ್ಕು ಸುಮ್ಮನಾಗಿಬಿಡಿ. ಇದು ಎಡಪಂಥೀಯರ ಗೋಳಾಟವಾಗಿದೆ’ ಎಂದು ವ್ಯಂಗ್ಯವಾಡಿದರು.

‘ಹತ್ತು ವರ್ಷಗಳ ಹಿಂದೆ ನಾವು ಸಂಪೂರ್ಣ ರಾಜಕೀಯ ಜನಾದೇಶವನ್ನು ಪಡೆದುಕೊಂಡ ನಂತರ, ಹಲವು ದಶಕಗಳ ಹಿಂದೆ ನೆಹರೂ ಉದಾರವಾದಿಗಳು ನಮ್ಮಿಂದ ಕಸಿದುಕೊಂಡಿದ್ದ ಎಲ್ಲವನ್ನೂ ಹಿಂಪಡೆದುಕೊಳ್ಳಲು ನಾವು ಈ ಸಾಂಪ್ರದಾಯವಾದಿ ಒಮ್ಮತವನ್ನು ಬಳಸಿದ್ದೇವೆ’ ಎಂದರು.

ಒಂದು ದಶಕದ ಹಿಂದೆ ವಿಶ್ವದ ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ ಇಂದು 5ನೇ ಅಥವಾ 4ನೇ ಅತಿ ದೊಡ್ಡ ಆರ್ಥಿಕವಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.