ವಾಷಿಂಗ್ಟನ್: ‘ಅಮೆರಿಕದ ತೆರಿಗೆದಾರರ ಹಣ, ಇಸ್ರೇಲ್ ಮೇಲೆ ದಾಳಿ ನಡೆಸಿರುವ ಹಮಾಸ್ ಬಂಡುಕೋರ ಪಾಲಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಹ್ಯಾಂಪ್ಷೇರ್ನಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ಇಸ್ರೇಲ್ ಮೇಲೆ ಹಮಾಸ್ ಬಂಡುಕೋರರ ದಾಳಿಯು ಅಮೆರಿಕದಲ್ಲಿ ಸದ್ಯ ಇರುವ ನಾಯಕತ್ವದ ದೊಡ್ಡ ವೈಫಲ್ಯ. ನಾನು ಅಧ್ಯಕ್ಷನಾಗಿದ್ದಾಗ ಇಂಥ ಕೃತ್ಯಗಳನ್ನು ನಡೆಯಲು ಬಿಟ್ಟಿರಲಿಲ್ಲ’ ಎಂದಿದ್ದಾರೆ.

‘ಅಮೆರಿಕದತ್ತ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ಆದರೆ ಅವರು ಎಲ್ಲಿಂದ ಬರುತ್ತಿದ್ದಾರೆ ಎಂಬ ಮಾಹಿತಿಯೇ ಇಲ್ಲ. ಇಂಥ ಜನರೇ ಇಸ್ರೇಲ್ ಮೇಲೆ ದಾಳಿ ನಡೆಸಿದ್ದಾರೆ. ಇದು ನಿಮಗೆ ಗೊತ್ತಿದೆ ಅಲ್ಲವೇ? ಈ ವ್ಯಕ್ತಿ (ಜೋ ಬೈಡನ್) ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೇ? ಇದು ಹಿಂದೆಂದೂ ಆಗಿರಲಿಲ್ಲ. ಇಸ್ರೇಲ್ ಮೇಲೆ ಇಂಥ ದಾಳಿ ಹಿಂದೆಂದೂ ಆಗಿರಲಿಲ್ಲ’ ಎಂದಿದ್ದಾರೆ.
.Israel–Palestine Conflict: ಇಸ್ರೇಲ್ಗೆ ಸೇನಾ ನೆರವು ರವಾನಿಸಿದ ಅಮೆರಿಕ.Israel - Palestine Conflict: ಹಮಾಸ್ನ 500ಕ್ಕೂ ನೆಲೆಗಳ ಮೇಲೆ ಇಸ್ರೇಲ್ ದಾಳಿ.
‘ಪುಟ್ಟ ಕಂದಮ್ಮಗಳನ್ನು ಅಮಾನುಷವಾಗಿ ಕೊಲ್ಲಲಾಗುತ್ತಿದೆ. ನಮ್ಮ ಶಾಂತಿಯಲ್ಲೂ ಒಂದು ತಾಕತ್ತು ಇತ್ತು. ಆದರೆ ಇಂದು ಅದುವೇ ನಮ್ಮ ದೌರ್ಬಲ್ಯವಾಗಿದೆ. ನಿಮ್ಮ ಅಧ್ಯಕ್ಷರನ್ನು ನೋಡಿದರೆ ನನಗೆ ಹೀಗೇ ಅನಿಸುತ್ತಿದೆ. ಆದರೆ ನನ್ನ ಅವಧಿಯಲ್ಲಿ ಹೀಗೆಂದೂ ಆಗಿರಲಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ ಎಂದು ಎನ್ಬಿಸಿ ವರದಿ ಮಾಡಿದೆ.

‘ಇರಾನ್ಗೆ 6 ಶತಕೋಟಿ ಡಾಲರ್ ಹಣವನ್ನು ವರ್ಗಾವಣೆ ಮಾಡಲಾಗಿದೆ. ಇನ್ನಷ್ಟು ಹಣವನ್ನು ಕಳುಹಿಸಲಾಗುತ್ತಿದೆ’ ಎಂದು ಜೋ ಬೈಡನ್ ಸರ್ಕಾರದ ವಿರುದ್ಧ ಟ್ರಂಪ್ ನೇರ ಆರೋಪ ಮಾಡಿದರು.

‘ಹಮಾಸ್ ಬಂಡುಕೋರರ ದಾಳಿ ನಿಜಕ್ಕೂ ಅವಮಾನ. ಆದರೆ ಇದನ್ನು ಎದುರಿಸಲು ಇಸ್ರೇಲ್ಗೆ ಎಲ್ಲಾ ರೀತಿಯ ಹಕ್ಕುಗಳು ಇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.