ಬೀಜಿಂಗ್: ಚೀನಾದ ದಕ್ಷಿಣದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಬುಧವಾರ ಹೆದ್ದಾರಿಯಲ್ಲಿ ಕೆಲ ಭಾಗ ಕುಸಿದ ಪರಿಣಾಮ ಕನಿಷ್ಠ 24 ಮಂದಿ ಮೃತಪಟ್ಟಿದ್ದಾರೆ.

ರಕ್ಷಣಾ ಕಾರ್ಯ ಕೈಗೊಂಡಿರುವ ಸಿಬ್ಬಂದಿ, 30 ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಿಜೌ–ದಾಬು ಎಕ್ಸ್ಪ್ರೆಸ್ವೇನಲ್ಲಿ 58 ಅಡಿ ಉದ್ದದಷ್ಟು ಭಾಗ ಕುಸಿದಿದ್ದರಿಂದ 18 ಕಾರುಗಳು ಉರುಳಿ ಬಿದ್ದಿರುವುದಾಗಿ ಪ್ರಾಂತ್ಯದ ಮಿಜೌ ನಗರದಲ್ಲಿರುವ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಸರ್ಕಾರಿ ಒಡೆತನದ ಮಾಧ್ಯಮ ಷಿನ್ಹುವಾ ನ್ಯೂಸ್ ವರದಿ ಮಾಡಿದೆ.

ಹೆದ್ದಾರಿಯ ಭಾಗವೊಂದು ಕುಸಿದಿರುವ ಕುರಿತ ವಿಡಿಯೊ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಅವಘಡದ ಪರಿಣಾಮ ಕೆಲವು ವಾಹನಗಳು ಹೊತ್ತಿ ಉರಿದಿವೆ. ಸುಟ್ಟು ಕರಕಲಾದ ಕಾರುಗಳ ಚಿತ್ರಗಳು ಸಹ ಹರಿದಾಡಿವೆ.

ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಎರಡು ವಾರಗಳ ಹಿಂದೆ ಭಾರಿ ಮಳೆಯಾಗಿದ್ದು, ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವಾರು ಗ್ರಾಮಗಳಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿದೆ. ಮಿಜೌ ನಗರದಲ್ಲಿ ಸಹ ಭಾರಿ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.