ಟೆಹರಾನ್ (ಇರಾನ್): ದೇಶದ ಮೇಲೆ ದಾಳಿ ನಡೆಸಿದ ಇಸ್ರೇಲ್ ವಿರುದ್ಧ ಕಿಡಿಕಾರಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಇಸ್ರೇಲ್ಗೆ ಅಮೆರಿಕ ಬೆಂಬಲ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕೃತ ಟಿವಿ ವಾಹಿನಿಗೆ ಹೇಳಿಕೆ ನೀಡಿರುವ ಮಸೂದ್, 'ನಾವು ಯುದ್ಧವನ್ನು ಬಯಸುವುದಿಲ್ಲ. ಆದರೆ, ನಮ್ಮ ದೇಶದ ಹಕ್ಕು ಮತ್ತು ರಾಷ್ಟ್ರವನ್ನು ಕಾಪಾಡುತ್ತೇವೆ. ಯಹೂದಿಗಳ ಆಡಳಿತದ ಆಕ್ರಮಣಕ್ಕೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ' ಎಂದಿದ್ದಾರೆ.

ಇರಾನ್ ದಾಳಿ ನಡೆಸದಿದ್ದರೆ ಗಾಜಾ ಮತ್ತು ಲೆಬನಾನ್ನಲ್ಲಿ ಸಂಘರ್ಷ ಕೊನೆಗೊಳಿಸುವುದಾಗಿ ಅಮೆರಿಕ ಭರವಸೆ ನೀಡಿತ್ತು ಎಂದಿರುವ ಅವರು, 'ನಮ್ಮ ಸಂಯಮಕ್ಕೆ ಪ್ರತಿಯಾಗಿ ಯುದ್ಧ ಅಂತ್ಯಗೊಳಿಸುವುದಾಗಿ ಅವರು (ಅಮೆರಿಕ) ಮಾತು ಕೊಟ್ಟಿದ್ದರು. ಆದರೆ, ಅದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ' ಎಂದು ಕಿಡಿಕಾರಿದ್ದಾರೆ.

'ಆಕ್ರಮಣಕಾರಿ ಪ್ರವೃತ್ತಿ ಮುಂದುವರಿಸಿದರೆ, ಉದ್ವಿಗ್ನತೆ ತೀವ್ರಗೊಳ್ಳಲಿದೆ' ಎಂದು ಇಸ್ರೇಲ್ಗೆ ಎಚ್ಚರಿಸಿರುವ ಅವರು, 'ಇಂತಹ ಕೃತ್ಯಗಳನ್ನು ನಡೆಸಲು ಇಸ್ರೇಲ್ಗೆ ಕುಮ್ಮಕ್ಕು ನೀಡುತ್ತಿರುವುದು ಗೊತ್ತಿದೆ' ಎನ್ನುವ ಮೂಲಕ ಅಮೆರಿಕಕ್ಕೂ ತಿವಿದಿದ್ದಾರೆ.
.Israel attack: ಇರಾನ್ ಮನವಿ ಮೇರೆಗೆ ತುರ್ತು ಸಭೆ ಕರೆದ ವಿಶ್ವಸಂಸ್ಥೆಯ ಮಂಡಳಿ.BRICS Summit: ಪುಟಿನ್ಗೆ ಜಾರ್ಖಂಡ್ ಕಲಾಕೃತಿ ಉಡುಗೊರೆ ನೀಡಿದ ಮೋದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.