ಗಾಜಾದಲ್ಲಿ 184 ಒತ್ತೆಯಾಳು
ಕದನ ವಿರಾಮ ಒಪ್ಪಂದದ ವೇಳೆ ಇಸ್ರೇಲ್‌ನ 50 ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿತ್ತು. ಆದರೆ, ಒತ್ತೆಯಾಳುಗಳಾಗಿರುವ ವಿದೇಶಿ ಪ್ರಜೆಗಳ ಬಿಡುಗಡೆಗೆ ಒಪ್ಪಂದದ ಅನ್ವಯ ಯಾವುದೇ ಮಿತಿ ನಿಗದಿಪಡಿಸಿರಲಿಲ್ಲ. ಭಾನುವಾರದವರೆಗೆ ಬಂಡುಕೋರರು, ವಿದೇಶಿಯರು ಸೇರಿದಂತೆ 58 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ಯಾಲೆಸ್ಟೀನ್‌ನ 117 ನಾಗರಿಕರನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ‘14 ವಿದೇಶಿಯರು ಸೇರಿದಂತೆ 184 ಜನರು ಗಾಜಾದಲ್ಲಿ ಒತ್ತೆಯಾಳುಗಳಾಗಿ ಇದ್ದಾರೆ’ ಎಂದು ಇಸ್ರೇಲ್ ಸರ್ಕಾರದ ವಕ್ತಾರ ಹೇಳಿದ್ದಾರೆ.