ಜೆರುಸಲೇಂ: ಅಮೆರಿಕದ ಯುದ್ಧ ನೌಕೆಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಯೆಮನ್ನ ಹುತಿ ಬಂಡುಕೋರರು ಸೋಮವಾರ ಹೇಳಿದ್ದಾರೆ. ಆದರೆ ದಾಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ. ಅಮೆರಿಕದ ರಕ್ಷಣಾ ಸಚಿವಾಲಯ ಈ ಹೇಳಿಕೆಯನ್ನು ಅಲ್ಲಗಳೆದಿದೆ.

‘ಅಮೆರಿಕದ ಯುದ್ಧ ನೌಕೆ ಲೂಯಿಸ್ ಬಿ ಪುಲ್ಲರ್ ಮೇಲೆ ಏಡನ್ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿ ನಡೆಸಲಾಗಿದೆ. ಹಮಾಸ್ ಮೇಲೆ ಇಸ್ರೇಲ್ ನಡೆಸುತ್ತಿರುವ ಯುದ್ಧ ಕೊನೆಗೊಳ್ಳುವವರೆಗೂ ಇಂತಹ ದಾಳಿಗಳು ಮುಂದುವರಿಯಲಿವೆ’ ಎಂದು ಹುತಿ ಮಿಲಿಟರಿ ವಕ್ತಾರ ಯಾಹ್ಯಾ ಸ್ಯಾರಿ ಹೇಳಿದ್ದಾರೆ.

‘ಪುಲ್ಲರ್ ನೌಕೆ ಮೇಲೆ ಯಾವುದೇ ದಾಳಿ ನಡೆದಿಲ್ಲ. ಹುತಿ ಬಂಡುಕೋರರು ಹಿಂದೆ ಯುದ್ಧ ನೌಕೆಗಳನ್ನು ಗುರಿಯಾಗಿಸಿ ಕ್ಷಿಪಣಿಗಳನ್ನು ಉಡಾಯಿಸಿದ್ದರೂ, ಅದು ಉದ್ದೇಶಿತ ಗುರಿಯನ್ನು ತಲುಪಿಲ್ಲ. ನೆಲ ಅಥವಾ ಸಮುದ್ರಕ್ಕೆ ಅಪ್ಪಳಿಸಿವೆ’ ಎಂದು ಅಮೆರಿಕ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ ಸೇನೆಯು ತನ್ನ ಕಾರ್ಯಾಚರಣೆಗಳಿಗೆ ಪುಲ್ಲರ್ ನೌಕೆಯನ್ನು ‘ಸಂಚಾರಿ ಸೇನಾ ನೆಲೆ’ಯ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.