ದುಬೈ: ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಭಾರತ ತಂಡ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ತನ್ನ ಸ್ಥಿತಿಯನ್ನು ಇನ್ನಷ್ಟು ಬಲಗೊಳಿಸಿದೆ. ನ್ಯೂಜಿಲೆಂಡ್ ವಿರುದ್ಧ ಸೋಮವಾರ ಗಾಲೆಯಲ್ಲಿ ಮೊದಲ ಟೆಸ್ಟ್ ಗೆದ್ದ ಶ್ರೀಲಂಕಾ ಕೂಡ ಫೈನಲ್ನಲ್ಲಿ ಸ್ಥಾನ ಪಡೆಯುವ ಪೈಪೋಟಿಯಲ್ಲಿದೆ.

ಈ ಎರಡು ಟೆಸ್ಟ್ ಪಂದ್ಯಗಳ ಫಲಿತಾಂಶವು ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ ತಂದಿದೆ. ಚೆನ್ನೈ ಟೆಸ್ಟ್ ಗೆದ್ದ ಭಾರತ ಶೇ 71.67 ಸಾಧನೆಯೊಡನೆ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಬಲಪಡಿಸಿದೆ. ಆಸ್ಟ್ರೇಲಿಯಾ (ಶೇ 62.50) ಎರಡನೇ ಸ್ಥಾನದಲ್ಲಿದೆ. ಲಂಕಾ (ಶೇ 50) ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ (ಶೇ 42.86) ಮತ್ತು ಇಂಗ್ಲೆಂಡ್ (ಶೇ 42.19) ನಂತರದ ಸ್ಥಾನದಲ್ಲಿವೆ.

ಪಾಕಿಸ್ತಾನ ವಿರುದ್ಧ ಐತಿಹಾಸಿ 2–0 ಸರಣಿ ಜಯದೊಡನೆ ನಾಲ್ಕನೇ ಸ್ಥಾನಕ್ಕೇರಿದ್ದ ಬಾಂಗ್ಲಾದೇಶ ಈಗ ಆರನೇ ಸ್ಥಾನಕ್ಕಿಳಿದಿದೆ. ಅದರ ಶೇಕಡವಾರು ಪಾಯಿಂಟ್ಸ್ ಶೇ 39.29.

ಶ್ರೀಲಂಕಾ ತಂಡ ಫೈನಲ್ ತಲುಪಬೇಕಾದರೆ, ನ್ಯೂಜಿಲೆಂಡ್ ತಂಡವನ್ನು ಮತ್ತೊಂದು ಟೆಸ್ಟ್ನಲ್ಲಿ ಸೋಲಿಸಬೇಕು. ದಕ್ಷಿಣ ಆಫ್ರಿಕಾ ವಿರುದ್ಧ ಕ್ಲೀನ್ ಸ್ವೀಪ್ ಮತ್ತು ಆಸ್ಟ್ರೇಲಿಯಾ ಎದುರು ತವರಿನಲ್ಲಿ ನಡೆಯುವ ಸರಣಿಯಲ್ಲಿ 2–0 ಜಯಗಳಿಸಬೇಕಾಗುತ್ತದೆ.

ಈ ಡಬ್ಲ್ಯುಟಿಸಿಗೆ ಮೊದಲು ಭಾರತಕ್ಕೆ 9 ಟೆಸ್ಟ್ಗಳನ್ನು ಆಡಲು ಇದೆ. ಈ ಹಿಂದೆ ಭಾರತ ಸತತವಾಗಿ ಎರಡು ಫೈನಲ್ಗಳಲ್ಲಿ ಆಡಿದೆ. ಆದರೆ ಎರಡೂ ಬಾರಿ ರನ್ನರ್ ಅಪ್ ಆಗಿತ್ತು. ನ್ಯೂಜಿಲೆಂಡ್ (2021) ಮತ್ತು ಆಸ್ಟ್ರೇಲಿಯಾ (2023) ತಂಡಗಳು ಭಾರತದ ಮೇಲೆ ಜಯಗಳಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.