ಪುಣೆ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆ ಗೆಲುವು ದಾಖಲಿಸುವ ಮೂಲಕ ಸರಣಿ ವಶಪಡಿಸಿಕೊಂಡಿತು.

ಇದರಿಂದಾಗಿ 2012ರ ನಂತರ ತವರಿನಲ್ಲಿ ಒಂದೂ ಟೆಸ್ಟ್ ಸರಣಿ ಸೋಲದ ಭಾರತದ ದಾಖಲೆಗೆ ಬ್ರೇಕ್ ಬಿದ್ದಿತು.

ಇದೀಗ ಪ್ರವಾಸಿ ತಂಡದ ಸಾಂದರ್ಭಿಕ ಆಫ್ಸ್ಪಿನ್ನರ್ ಗ್ಲೆನ್ ಫಿಲಿಪ್ಸ್ ಹಾಗೂ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅವರ ಚಾರಿತ್ರಿಕ ಸಾಧನೆಯಲ್ಲಿ ಕಿವೀಸ್ ತಂಡ ಸರಣಿ ಗೆದ್ದಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ ಮೊದಲ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಕ್ರಮವಾಗಿ 259 ಮತ್ತು 255 ರನ್ ಗಳಿಸಿ ಭಾರತಕ್ಕೆ 359 ರನ್ಗಳ ಗೆಲುವಿನ ಗುರಿ ನೀಡಿತ್ತು. ಆದರೆ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 156 ರನ್ಗಳಿಗೆ ಕುಸಿದು ಹಿನ್ನಡೆ ಅನುಭವಿಸಿತು. ಎರಡನೇ ಇನ್ನಿಂಗ್ಸ್ನಲ್ಲೂ ಮುಗ್ಗರಿಸಿ 245 ರನ್ಗಳಿಗೆ ಆಲೌಟ್ ಆಯಿತು.

ನ್ಯೂಜಿಲೆಂಡ್ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಎರಡು ಇನ್ನಿಂಗ್ಸ್ಗಳಿಂದ 13 ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಬಲವಾದ ಪೆಟ್ಟುಕೊಟ್ಟರು. ಭಾರತದ ವಾಷಿಂಗ್ಟನ್ ಸುಂದರ್ ಕೂಡ ಎರಡು ಇನ್ನಿಂಗ್ಸ್ಗಳಿಂದ 11 ವಿಕೆಟ್ ಪಡೆದರೂ ಅವರ ಶ್ರಮ ವ್ಯರ್ಥವಾಯಿತು.

ಭಾರತ ತಂಡ ಸ್ಪಿನ್ ಎದುರು ಆಡಲು ಸಮರ್ಥವಾಗಲಿಲ್ಲ. ಅನುಭವಿ ಆಟಗಾರರಾದ ಶರ್ಮಾ, ಕೊಹ್ಲಿ, ರಿಷಬ್ ಪಂತ್, ಗಿಲ್ ಅವರ ನೀರಸ ಪ್ರದರ್ಶನ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ವಿಶ್ಲೇಷಕರು ಹೇಳಿದ್ದಾರೆ.
.IND vs NZ | ಮಿಚೆಲ್ ಸ್ಯಾಂಟನರ್ ಸ್ಪಿನ್ ಆಟ, 301 ರನ್ ಮುನ್ನಡೆಯಲ್ಲಿ ಕಿವೀಸ್.ಫುಲ್ಟಾಸ್ಗೆ ಔಟಾದ ವಿರಾಟ್: ಬೌಲರ್ಗೆ ಅಚ್ಚರಿ.
ಸ್ಕೋರ್ ಕಾರ್ಡ್....

ನ್ಯೂಜಿಲೆಂಡ್: 259 & 255

ಭಾರತ: 156 & 245

ಫಲಿತಾಂಶ: ಭಾರತಕ್ಕೆ ಸೋಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.