ಅಹಮದಾಬಾದ್: ಅಹಮದಾಬಾದಿನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದ ಮುಖ್ಯ ದ್ವಾರದ ಮುಂದೆ ಶನಿವಾರ ಮಧ್ಯರಾತ್ರಿಯವರೆಗೂ ಜನಜಂಗುಳಿ ಸೇರಿತ್ತು. ಭಾನುವಾರದ ಫೈನಲ್ನಲ್ಲಿ ಆಸ್ಟ್ರೇಲಿಯಾ ಎದುರು ಆಡಲಿರುವ ಭಾರತ ತಂಡದ ಪರ ಘೋಷಣೆಗಳನ್ನು ಕೂಗುತ್ತ ನೂರಾರು ಜನರು ನಿಂತಿದ್ದರು. ಟಿಕೆಟ್, ಪಾಸ್ ಗಿಟ್ಟಿಸಲು ಕೆಲವರು ಅಂತಿಮ ಹಂತದ ಪ್ರಯತ್ನ ನಡೆಸುತ್ತಿದ್ದರು. ಇವರೆಲ್ಲರ ನಡುವೆ ಕೋಲ್ಕತ್ತದ ವ್ಯಕ್ತಿಯೊಬ್ಬರು ಗಮನ ಸೆಳೆದರು.

ಅವರು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಭಿಮಾನಿ ಸೌರಭ್ ಚಾಬ್ರಿಯಾ. ರಾಹುಲ್ ಚಿತ್ರ ಮತ್ತು ’ಮಿಸ್ಟರ್ ಡಿಪೆಂಡ್ಬಲ್’ ಎಂಬ ಒಕ್ಕಣೆಯಿದ್ದ ಪ್ಲೇಕಾರ್ಡ್ ಹಿಡಿದು ಜಯಘೋಷ ಕೂಗಿದರು. ರಾಹುಲ್ ದ್ರಾವಿಡ್ ಈ ಹಿಂದೆ ಭಾರತ ತಂಡದಲ್ಲಿ ಆಡುವ ಸಂದರ್ಭದಲ್ಲಿನ ಕೆಲವು ಚಿತ್ರಗಳನ್ನು ತಮ್ಮ ಟೀಶರ್ಟ್ ಮೇಲೆ ಅಚ್ಚಾಕಿಸಿಕೊಂಡಿದ್ದರು.

’ದ್ರಾವಿಡ್ ಅವರ ಮಾರ್ಗದರ್ಶನ ಮತ್ತು ಸಮಚಿತ್ತದ ಕೋಚಿಂಗ್ ನಿಂದಾಗಿ ತಂಡವು ಇವತ್ತು ಈ ಹಂತಕ್ಕೆ ಬಂದಿದೆ. ಅವರಂತಹ ಜೆಂಟಲ್ಮ್ಯಾನ್ ಮತ್ತೊಬ್ಬರಿಲ್ಲ. ಅವರಿಗಾಗಿಯೇ ನಾನು ಕೋಲ್ಕತ್ತದಿಂದ ಇಲ್ಲಿಗೆ ಬಂದು ಪಂದ್ಯ ವೀಕ್ಷಿಸಲಿದ್ದೇನೆ. ಭಾರತ ಗೆಲ್ಲುತ್ತದೆ. ಅದರ ಶ್ರೇಯ ದ್ರಾವಿಡ್ಗೆ ಸಲ್ಲುತ್ತದೆ’ ಎಂದು ಸೌರಭ್ ಭಾವುಕರಾಗಿ ನುಡಿದರು.
.IND vs AUS FINAL | ಜಗದ ಕಣ್ಣು ಭಾರತದತ್ತ; ರೋಹಿತ್ ಪಡೆಯ ನೋಟ ಕಿರೀಟದತ್ತ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.