ನವದೆಹಲಿ: 'ಯಾವುದೇ ಒಂದು ಭಾಷೆಯನ್ನು ಯಾರ ಮೇಲೆಯೂ ಒತ್ತಾಯಪೂರ್ವಕವಾಗಿ ಹೇರಲೂಬಾರದು ಮತ್ತು ಯಾವುದೇ ಒಂದು ಭಾಷೆಯನ್ನು ಪೂರ್ವಗ್ರಹಪೀಡಿತವಾಗಿ ಯಾರೂ ವಿರೋಧಿಸಲೂಬಾರದು' ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಹೇಮವತಿ ನಂದನ ಬಹುಗುಣ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾಯ್ಡು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಿನಹಿಂದಿ ರಾಷ್ಟ್ರಭಾಷೆ ಹೌದು, ಅಲ್ಲ ಎಂಬ ವಿವಾದದಹಿನ್ನೆಲೆಯಲ್ಲಿ ನಾಯ್ಡು ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

'ನಾವು ವಿನಾಕಾರಣ ಅನವಶ್ಯಕ ವಿವಾದಗಳನ್ನು ಹುಟ್ಟುಹಾಕಬಾರದು ಎಂದು ಕಿವಿಮಾತು ಹೇಳಿರುವ ಅವರು, ನಾನು ಆಂಧ್ರಪ್ರದೇಶದಲ್ಲಿ ನನ್ನ ಯೌವನದಲ್ಲಿ ಹಿಂದಿ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದೆ. ಆದರೆ, ನಂತರ ಹಿಂದಿಯ ಮಹತ್ವ ಅರ್ಥವಾಯಿತು' ಎಂದು ಅವರು ಹೇಳಿದ್ದಾರೆ.

ಅಲ್ಲದೇ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಬೇಕಿದೆ. ಈಗಿರುವ ಕಾಯ್ದೆ ಪಕ್ಷಾಂತರ ತಡೆಗಟ್ಟುವಲ್ಲಿ ಪರಿಪೂರ್ಣವಲ್ಲ ಎಂದು ಉಪರಾಷ್ಟ್ರಪತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಹೆಡ್ ಬುಷ್’ ವಿರುದ್ಧ ಎಂ.ಪಿ ಜಯರಾಜ್ ಪುತ್ರ ಅಜಿತ್ ಜಯರಾಜ್ ದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.