ನವದೆಹಲಿ: ಟೀಮ್ ಇಂಡಿಯಾ ಆಟಗಾರ ಕೇದಾರ್ ಜಾಧವ್ ಅವರ ತಂದೆ ಮಹದೇವ್ ಸೋಪಾನ್ ಅವರು ಪತ್ತೆಯಾಗಿದ್ದಾರೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ.

75 ವರ್ಷದ ಮಹದೇವ್ ಸೋಪಾನ್ ಜಾಧವ್ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪುಣೆಯ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೋಪಾನ್ ಜಾಧವ್ ಅವರು ಸೋಮವಾರ ಬೆಳಿಗ್ಗೆ ಮನೆಯವರಿಗೆ ಮಾಹಿತಿ ನೀಡದೆ ಹೊರಗಡೆ ಹೋಗಿದ್ದರು. ಹೆಚ್ಚು ಸಮಯದವರೆಗೆ ಮನೆಗೆ ವಾಪಸ್ ಆಗಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸೋಪಾನ್ ಜಾಧವ್ ಭಾವಚಿತ್ರ, ಮಾಹಿತಿಯನ್ನು ಪುಣೆ ನಗರದ ಇತರ ಪೊಲೀಸ್ ಠಾಣೆಗಳಿಗೆ ರವಾನಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು.

ಮುಂಡ್ವಾ ಪ್ರದೇಶದ ಘೋರ್ಪಾಡಿ ಗಾಂವ್‌ನಲ್ಲಿ ಸೋಪಾನ್ ಜಾಧವ್ ಕಾಣಿಸಿಕೊಂಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಸೋಪಾನ್ ಅವರನ್ನು ಪತ್ತೆಹಚ್ಚಿದ್ದರು.

ಶೀಘ್ರ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಕ್ರಿಕೆಟಿಗ ಕೇದಾರ್ ಜಾಧವ್, ಪೊಲೀಸರಿಗೆ ಧನ್ಯವಾದ ಹೇಳಿದ್ದಾರೆ.

ಇವನ್ನೂ ಓದಿ...

ಶ್ರೀರಾಮನವಮಿ: ನಾಡಿನ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

India Covid Update | ಒಂದೇ ದಿನ ಮೂರು ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.