ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, 'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ' ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಮೂಲಕ ರಾಹುಲ್ ಅವರು 'ಮೋದಿ' ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯವು ಕಾಂಗ್ರೆಸ್ ಸಂಸದ ರಾಹುಲ್ ಅವರು ತಪ್ಪಿತಸ್ಥರು ಎಂದು ತೀರ್ಪು ನೀಡಿದೆ. ಹೀಗಾಗಿ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಜನ ಪ್ರಾತಿನಿಧ್ಯ ಕಾಯ್ದೆ ಪ್ರಕಾರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾದ ಜನಪ್ರತಿನಿಧಿಯು ಶಿಕ್ಷೆ ವಿಧಿಸಲಾದ ದಿನದಿಂದಲೇ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಶಿಕ್ಷೆ ಪೂರ್ಣಗೊಳಿಸಿದ ನಂತರ ಆರು ವರ್ಷ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಇಲ್ಲ.

ರಾಹುಲ್ ಗಾಂಧಿ ಅವರಂತೆಯೇ ಇನ್ನೂ ಸಾಕಷ್ಟು ರಾಜಕೀಯ ನಾಯಕರು ಅನರ್ಹರಾಗಿ ಸಂಸತ್ ಹಾಗೂ ವಿಧಾನಸಭೆ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಅವರ ವಿವರ ಇಲ್ಲಿದೆ.

ಲಾಲು ಪ್ರಸಾದ್
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಅವರು ಮೇವು ಹಗರಣದಲ್ಲಿ ದೋಷಿ ಎಂದು ಸಾಬೀತಾದ ಬಳಿಕ 2013ರ ಸೆಪ್ಟೆಂಬರ್‌ನಲ್ಲಿ ಲೋಕಸಭೆ ಸದಸ್ಯತ್ವದಿಂದ ಅನರ್ಹರಾಗಿದ್ದರು. ಅವರು ಬಿಹಾರದ ಸರನ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಜೆ. ಜಯಲಲಿತಾ
ಎಐಎಡಿಎಂಕೆ ನಾಯಕಿಯಾಗಿದ್ದ ಜೆ.ಜಯಲಲಿತಾ ಅವರು ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಸಾಬೀತಾದ ಬಳಿಕ ತಮಿಳುನಾಡು ವಿಧಾನಸಭೆ ಸದಸ್ಯತ್ವದಿಂದ 2014ರ ಸೆಪ್ಟೆಂಬರ್‌ನಲ್ಲಿ ಅನರ್ಹರಾಗಿದ್ದರು. ನಂತರ ಅವರು ತಮಿಳುನಾಡು ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಬೇಕಾಯಿತು.

ಪಿ.ಪಿ.ಮೊಹಮ್ಮದ್ ಫೈಸಲ್
ಲಕ್ಷದ್ವೀಪ ಸಂಸದ ಪಿ.ಪಿ.ಮೊಹಮ್ಮದ್ ಫೈಸಲ್ ಅವರು 'ಕೊಲೆ ಯತ್ನ' ಪ್ರಕರಣದಲ್ಲಿ ದೋಷಿ ಎಂದು 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದರಿಂದಾಗಿ ಫೈಸಲ್ 2023ರ ಜನವರಿಯಲ್ಲಿ ಸ್ವಯಂಚಾಲಿತವಾಗಿ ಸದಸ್ಯತ್ವ ಕಳೆದುಕೊಂಡಿದ್ದರು. ತದನಂತರ ಕೇರಳ ಕೈಕೋರ್ಟ್, ತೀರ್ಪನ್ನು ಅಮಾನತು ಮಾಡಿತ್ತು. ಲೋಕಸಭೆ ಸಚಿವಾಲಯವು ತಮ್ಮ ಸದಸ್ಯತ್ವ ಅನರ್ಹತೆ ಆದೇಶ ಹಿಂಪಡೆಯುವ ಅಧಿಸೂಚನೆಯನ್ನು ಇನ್ನಷ್ಟೇ ಹೊರಡಿಸಬೇಕಿದೆ ಎಂದು ನ್ಯಾಷನಲ್ ಕಾಂಗ್ರೆಸ್ ಪಕ್ಷದ ಫೈಸಲ್ ಹೇಳಿದ್ದಾರೆ.

ಆಜಂ ಖಾನ್
2019ರಲ್ಲಿ ಮಾಡಿದ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರು 2022ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶ ವಿಧಾನಸಭೆ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. ಅವರು ರಾಂಪುರ ಸದರ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಅನಿಲ್ ಕುಮಾರ್ ಸಾಹ್ನಿ
ಅಕ್ರಮ ಪ್ರಕರಣವೊಂದರಲ್ಲಿ ದೋಷಿ ಎಂದು ಸಾಬೀತಾದ ಬಳಿಕ ಆರ್‌ಜೆಡಿಯ ಅನಿಲ್ ಕುಮಾರ್ ಸಾಹ್ನಿ ಅವರು 2022ರ ಅಕ್ಟೋಬರ್‌ನಲ್ಲಿ ಬಿಹಾರ ವಿಧಾನಸಭೆ ಸದಸ್ಯತ್ವದಿಂದ ಅನರ್ಹರಾಗಿದ್ದರು. ಅವರು ಕುರ್ಹಾನಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

ವಿಕ್ರಂ ಸಿಂಗ್ ಸೈನಿ
ಬಿಜೆಪಿ ಶಾಸಕ ವಿಕ್ರಂ ಸಿಂಗ್ ಸೈನಿ ಅವರು ಉತ್ತರ ಪ್ರದೇಶ ವಿಧಾನಸಭೆ ಸದಸ್ಯತ್ವದಿಂದ 2022ರ ಅಕ್ಟೋಬರ್‌ನಿಂದ ಅನರ್ಹರಾಗಿದ್ದಾರೆ. 2013ರಲ್ಲಿ ನಡೆದ ಮುಜಾಫರ್‌ನಗರ ಗಲಭೆ ಪ್ರಕರಣದ ದೋಷಿಯಾಗಿರುವ ಅವರಿಗೆ 2 ವರ್ಷ ಜೈಲು ಶಿಕ್ಷ ವಿಧಿಸಲಾಗಿದೆ. ಅವರು ಮುಜಾಫರ್‌ನಗರದ ಖತೌಲಿ ಶಾಸಕರಾಗಿದ್ದರು.

ಪ್ರದೀಪ್ ಚೌಧರಿ
ಹಲ್ಲೆ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಚೌಧರಿ ಅವರು 2021ರ ಜನವರಿಯಲ್ಲಿ ಹರಿಯಾಣ ವಿಧಾನಸಭೆ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. ಕಲ್ಕಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಚೌಧರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕುಲದೀಪ್ ಸಿಂಗ್ ಸೆಂಗಾರ್
ಅತ್ಯಾಚಾರ ಪ್ರಕರಣದ ದೋಷಿ ಕುಲದೀಪ್ ಸಿಂಗ್ ಸೆಂಗಾರ್ ಅವರು ಉತ್ತರ ಪ್ರದೇಶ ವಿಧಾನಸಭೆಯಿಂದ 2020ರ ಫೆಬ್ರುವರಿಯಲ್ಲಿ ಅನರ್ಹರಾಗಿದ್ದಾರೆ. ಉನ್ನಾವೊ ಜಿಲ್ಲೆಯ ಬಂಗಾರ್ಮೌ ಕ್ಷೇತ್ರದ ಶಾಸಕರಾಗಿದ್ದ ಸೆಂಗಾರ್ ಅವರನ್ನು, ದೋಷಿ ಎಂದು ತೀರ್ಪು ಬರುವುದಕ್ಕೂ ಮೊದಲೇ ಬಿಜೆಪಿ ಉಚ್ಚಾಟಿಸಿತ್ತು.

ಅಬ್ದುಲ್ಲಾ ಆಜಂ ಖಾನ್
15 ವರ್ಷ ಹಳೇ ಪ್ರಕರಣವೊಂದರಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಮಾಜವಾದಿ ಪಕ್ಷದ ಶಾಸಕ ಅಬ್ದುಲ್ಲಾ ಆಜಂ ಖಾನ್, ಉತ್ತರ ಪ್ರದೇಶ ವಿಧಾನಸಭೆ ಸದಸ್ಯತ್ವದಿಂದ 2023ರ ಫೆಬ್ರುವರಿಯಲ್ಲಿ ಅನರ್ಹರಾಗಿದ್ದಾರೆ. ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ ಮಗನಾಗಿರುವ ಅಬ್ದುಲ್ಲಾ, ರಾಂಪುರ ಜಿಲ್ಲೆಯ ಸೌರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.

2007ರ ಡಿಸೆಂಬರ್‌ನಲ್ಲಿ ಸಿಆರ್‌ಪಿಎಫ್ ಶಿಬಿರದ ದಾಳಿ ನಡೆದಿತ್ತು. ಆ ವೇಳೆ ತಮ್ಮ ವಾಹನ ತಡೆದು ತಪಾಸಣೆ ನಡೆಸಿದ್ದನ್ನು ಖಂಡಿಸಿ, ಅಬ್ದುಲ್ಲಾ ಹೆದ್ದಾರಿಯಲ್ಲಿ ಧರಣಿ ನಡೆಸಿದ್ದರು.

ಅನಂತ್ ಸಿಂಗ್
ತಮ್ಮ ನಿವಾಸದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ದೋಷಿಯಾಗಿರುವ ಆರ್‌ಜೆಡಿ ಶಾಸಕ ಅನಂತ್ ಸಿಂಗ್, 2022ರ ಜುಲೈನಲ್ಲಿ ಬಿಹಾರ ವಿಧಾನಸಭೆಯ ಸದಸ್ಯತ್ವ ಕಳೆದುಕೊಂಡಿದ್ದಾರೆ. ಅವರು ಪಟ್ನಾ ಜಿಲ್ಲೆಯ ಮೊಕಾಂ ಶಾಸಕರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.