ಮೊಹಾಲಿ: ಮುಂದಿನ ತಿಂಗಳು ನಡೆಯಲಿರುವ ಪಂಜಾಬ್ ಚುನಾವಣೆಯ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ವತಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.

ಪಕ್ಷದ ಪಂಜಾಬ್ ಘಟಕದ ಮುಖಂಡ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ದೆಹಲಿ ಸಿಎಂ ಹಾಗೂ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮೊಹಾಲಿಯಲ್ಲಿ ನಡೆದ ಮಾಧ್ಯಮಗೊಷ್ಠಿಯಲ್ಲಿ ಘೋಷಣೆ ಮಾಡಿದರು.

ಜನವರಿ 13 ರಂದು ಮೊಬೈಲ್ ಆ್ಯಪ್ ಮೂಲಕ ಮೂರು ಕೋಟಿ ಜನಸಂಖ್ಯೆ ಇರುವ ಪಂಜಾಬ್ ಜನ ಈ ಬಾರಿಯ ಚುನಾವಣೆಯಲ್ಲಿ ತಮಗೆ ಯಾರು ಮುಂದಿನ ಸಿಎಂ ಆಗಬೇಕು ಎಂದು ನಿರ್ಧರಿಸಿ ಮತ ಚಲಾಯಿಸಿದ್ದರು. ಈ ಮತಗಳನ್ನು ಪರಿಗಣಿಸಿ ಎಎಪಿ ತನ್ನ ನಿರ್ಧಾರ ಕೈಗೊಂಡಿದೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ಭಗವಂತ್ ಮಾನ್ ಅವರು ಸಿಎಂ ಅಭ್ಯರ್ಥಿ ಎಂದು ಘೋಷಣೆಯಾದ ತಕ್ಷಣ ಅವರ ಹುಟ್ಟೂರಾದ ಸಂಗ್ರೂರ್ ಜಿಲ್ಲೆಯ ಸಾತೋಜ್ ಹಳ್ಳಿಯಲ್ಲಿ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ.

ಪ್ರಸ್ತುತ 48 ವರ್ಷ ವಯಸ್ಸಿನಭಗವಂತ್ ಮಾನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರದ ಎಎಪಿ ಸಂಸದರಾಗಿದ್ದಾರೆ. ಪಂಜಾಬ್ ವಿವಿಯ ಸ್ನಾತಕೋತ್ತರ ಪದವೀಧರರಾಗಿರಾರುವ ಅವರು ಕಳೆದ 10 ವರ್ಷದಿಂದ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ.

ಇನ್ನು ಬರುವ ಫೆಬ್ರುವರಿಯಲ್ಲಿ ಪಂಜಾಬ್ ವಿಧಾನಸಭೆಯ 117 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಪಂಜಾಬ್ ಚುನಾವಣೆ: ಸಿಎಂ ಚೆನ್ನಿ ಅಳಿಯನ ಮನೆ ಮೇಲೆ ದಾಳಿ ಮಾಡಿದ ಇ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.