ರಾಯಪುರ: ನಕ್ಸಲ್‌ರೊಂದಿಗಿನ ಹೋರಾಟದಲ್ಲಿ ಹುತಾತ್ಮರಾಗುವ ಪೊಲೀಸ್ ಕುಟುಂಬಗಳಿಗೆ ಕೃಷಿ ಭೂಮಿ ಖರೀದಿಸಲು ₹20 ಲಕ್ಷ ಹೆಚ್ಚುವರಿ ನೆರವು, ನಕ್ಸಲ್ ಹಿಂಸಾಚಾರದಲ್ಲಿ ಬಲಿಯಾದ ನಾಗರಿಕರ ಸಂಬಂಧಿಕರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ, ಮಾಹಿತಿ ನೀಡುವವರಿಗೆ ₹ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಬಹುಮಾನ ಹೊಂದಿದ್ದ ನಕ್ಸಲರು ಶರಣಾದರೆ, ಅವರಿಗೆ ₹10 ಲಕ್ಷ ಹೆಚ್ಚುವರಿ ನೆರವು ನೀಡುವ ಸಮಗ್ರ ನಕ್ಸಲ್ ನಿರ್ಮೂಲನಾ ನೀತಿಯನ್ನು ಛತ್ತೀಸ್‌ಗಢ ಸರ್ಕಾರ ಅಂಗೀಕರಿಸಿದೆ.

ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಛತ್ತೀಸ್‌ಗಢ ಸಚಿವ ಸಂಪುಟ ಶುಕ್ರವಾರ ಈ ನಿರ್ಣಯ ಅಂಗೀಕರಿಸಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

‘ಅಭಿವೃದ್ಧಿ, ನಂಬಿಕೆ ಮತ್ತು ಭದ್ರತೆ’ ಎಂಬ ರಾಜ್ಯದ ತ್ರಿಮುಖ ಕಾರ್ಯತಂತ್ರ ಆಧರಿಸಿ, ಹೊಸ ನೀತಿಯು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಡಿ ಕಾರ್ಯ ನಿರ್ವಹಿಸಲಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಈ ನೀತಿ ಮಂಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ. ಇದು ಎರಡು ತಿಂಗಳಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.