ನವದೆಹಲಿ: ಪಕ್ಷದ ಅಧ್ಯಕ್ಷರ ಆಯ್ಕೆ ಚುನಾವಣೆಯ ವೇಳಾಪಟ್ಟಿಯನ್ನು ಕಾಂಗ್ರೆಸ್ ಗುರುವಾರ ಬಿಡುಗಡೆ ಮಾಡಿದೆ.

ವೇಳಾಪಟ್ಟಿ ಇಂತಿದೆ...

– ಚುನಾವಣೆ ಅಧಿಸೂಚನೆ ಇಂದಿನಿಂದಲೇ (ಸೆ.22) ಜಾರಿಯಾಗಲಿದೆ.

– ಸೆ. 24 ರಿಂದ 30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ.

– ಅ.1ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಲಿದೆ. ಕ್ರಮ ಬದ್ಧವಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅಂದು ಘೋಷಿಸಲಾಗುತ್ತದೆ.

– ನಾಮಪತ್ರ ಹಿಂಪಡೆಯಲು ಅ. 8 ಕೊನೆ ದಿನ. ಕಣದಲ್ಲಿ ಉಳಿಯಲಿರುವ ಅಭ್ಯರ್ಥಿಗಳ ಪಟ್ಟಿ ಅದೇ ದಿನ ಬಿಡುಗಡೆ.

– ಅಗತ್ಯವಿದ್ದಲ್ಲಿ ಅ. 17ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 4ರ ವರೆಗೆ ಮತದಾನ ನಡೆಯಲಿದೆ.

– ಅ. 19ರಂದು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

ನಾಮಪತ್ರ ಅರ್ಜಿಗಳು ಎಐಸಿಸಿ ಕೇಂದ್ರ ಕಚೇರಿಯಲ್ಲಿ ದೊರೆಯಲಿದೆ ಎಂದು ಕಾಂಗ್ರೆಸ್ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

ಕಾಂಗ್ರೆಸ್ ಮುಖಂಡ ಮಧುಸೂದನ ಮಿಸ್ತ್ರಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ಹಿಸುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷರ ಆಯ್ಕೆ ಚುನಾವಣೆ ದೇಶದಲ್ಲಿ ಸದ್ದು ಮಾಡುತ್ತಿದೆ. ರಾಹುಲ್ ಗಾಂಧಿಯರವೇ ಅಧ್ಯಕ್ಷರಾಗಲಿ ಎಂದು ಹಲವು ಪಿಸಿಸಿಗಳು (ರಾಜ್ಯ ಕಾಂಗ್ರೆಸ್ ಘಟಕಗಳು) ನಿರ್ಣಯ ಕೈಗೊಂಡಿವೆ. ಹಲವು ನಾಯಕರು ರಾಹುಲ್ ಮೇಲೆ ಒತ್ತಡವನ್ನೂ ಹೇರಿದ್ದಾರೆ. ಈ ಮಧ್ಯೆ ಸಂಸದ ಶಶಿ ತರೂರ್ ಅವರು ಸ್ಪರ್ಧೆಗೆ ಮುಂದಾಗಿದ್ದು, ಅವರ ವಿರುದ್ಧ ಗಾಂಧಿ ನಿಷ್ಠ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.

ಇವುಗಳನ್ನೂ ಓದಿ

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಸೂಚಿಸದ ಸೋನಿಯಾ ಗಾಂಧಿ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ರಾಹುಲ್ ಮನವೊಲಿಕೆಗೆ ಕಸರತ್ತು

ಗೆಹಲೋತ್, ತರೂರ್ ಇಬ್ಬರೂ ರಾಹುಲ್ ಕೈಗೊಂಬೆಗಳು: ಬಿಜೆಪಿ ಲೇವಡಿ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಮಧುಸೂದನ್ ಮಿಸ್ತ್ರಿ ಭೇಟಿಯಾದ ತರೂರ್

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸೋನಿಯಾ ಸಮ್ಮತಿ ಅಗತ್ಯವಿಲ್ಲ: ರಮೇಶ್

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲ: ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.