ನವದೆಹಲಿ: ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭಾನುವಾರ ತೀವ್ರ ಬಿಸಿಗಾಳಿ ಕಂಡುಬಂದಿದ್ದು, ದೆಹಲಿ ಮತ್ತು ಉತ್ತರ ಪ್ರದೇಶದ ಕೆಲವು ಸ್ಥಳಗಳಲ್ಲಿ 49 ಡಿಗ್ರಿ ಸೆಲ್ಸಿಯಸ್ ಮತ್ತು ಕೆಲವೆಡೆ ಅದಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ ಎನ್‌ಡಿಟಿವಿ ವರದಿ ಮಾಡಿದೆ. ಮಧ್ಯಾಹ್ನದ ಸಮಯ ಮನೆ ಬಿಟ್ಟು ಹೊರಬರದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.

ದೆಹಲಿಯ ಸಫ್ದರ್‌ಜಂಗ್‌ನ ಪ್ರಮುಖ ಹವಾಮಾನ ಕೇಂದ್ರದಲ್ಲಿ 45.6 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ವಾಯುವ್ಯ ದೆಹಲಿಯ ಮುಂಗೇಶ್‌ಪುರ ಮತ್ತು ನೈಋತ್ಯ ದೆಹಲಿಯ ನಜಾಫ್‌ಗಡದಲ್ಲಿ ಕ್ರಮವಾಗಿ 49.2 ಮತ್ತು 49.1 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.

ಉತ್ತರ ಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಬಂದಾ ಜಿಲ್ಲೆಯಲ್ಲಿ ದಿನದ ಗರಿಷ್ಠ ತಾಪಮಾನ 49 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ರಾಜ್ಯದ ಅತಿ ಹೆಚ್ಚು.ತಾಪಮಾನವಾಗಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ, ಇದು ಮೇ ತಿಂಗಳಲ್ಲಿ ಬಂದಾ ಪ್ರದೇಶದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಮೇ 31, 1994 ರಂದು 48.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು.

ರಾಜಸ್ಥಾನದ ಚುರು ಮತ್ತು ಪಿಲಾನಿಯಲ್ಲಿ ಕ್ರಮವಾಗಿ 47.9 ಮತ್ತು 47.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ವರದಿಯಾಗಿದೆ, ನಂತರ ಶ್ರೀ ಗಂಗಾನಗರ ಮತ್ತು ಝಾನ್ಸಿ (47.6), ನರ್ನಾಲ್ (47.5), ಖಜುರಾಹೊ ಮತ್ತು ನೌಗಾಂಗ್ (47.4) ಮತ್ತು ಹಿಸ್ಸಾರ್ (47.2) ಎಂದು ಐಎಂಡಿ ತಿಳಿಸಿದೆ.

ಹಿಮಾಚಲ ಪ್ರದೇಶ, ಹರಿಯಾಣ, ದೆಹಲಿ, ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಉತ್ತರಾಖಂಡ್, ಪಂಜಾಬ್ ಮತ್ತು ಬಿಹಾರದ ಹಲವಾರು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ (5.1 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು) ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ಪಶ್ಚಿಮ ಉತ್ತರ ಪ್ರದೇಶ, ಪೂರ್ವ ಉತ್ತರ ಪ್ರದೇಶ, ಪೂರ್ವ ಮಧ್ಯಪ್ರದೇಶದ ಹಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚು (3.1ಡಿಗ್ರಿ ಸೆಲ್ಸಿಯಸ್‌ನಿಂದ 5.0 ಡಿಗ್ರಿ ಸೆಲ್ಸಿಯಸ್) ಇತ್ತು ಎಂದು ಐಎಂಡಿ ಹೇಳಿದೆ.

ರಾಜಸ್ಥಾನದ ಚುರು ಮತ್ತು ಪಿಲಾನಿಯಲ್ಲಿ ಕ್ರಮವಾಗಿ 47.9 ಮತ್ತು 47.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ವರದಿಯಾಗಿದೆ. ಶ್ರೀ ಗಂಗಾನಗರ ಮತ್ತು ಝಾನ್ಸಿ (47.6), ನರ್ನಾಲ್ (47.5), ಖಜುರಾಹೊ ಮತ್ತು ನೌಗಾಂಗ್ (47.4) ಮತ್ತು ಹಿಸ್ಸಾರ್‌ನಲ್ಲಿ (47.2) ತಾಪಮಾನ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.

ಕೇರಳದಲ್ಲಿ ಭಾರೀ ಮಳೆ

ಉತ್ತರ ಭಾರತವು ಹೆಚ್ಚಿನ ತಾಪಮಾನವನ್ನು ಎದುರಿಸಿದರೆ, ದಕ್ಷಿಣದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೇರಳ ಮತ್ತು ಲಕ್ಷದ್ವೀಪದಲ್ಲಿ ಭಾನುವಾರ ಕ್ರಮವಾಗಿ 52.2 ಮಿಮೀ ಮತ್ತು 57.7 ಮಿಮೀ ಭಾರೀ ಮಳೆಯಾಗಿದೆ.

ಕೇರಳದಾದ್ಯಂತ ಭಾರೀ ಮಳೆ ಎಚ್ಚರಿಕೆಯನ್ನು ಐಎಂಡಿ ನೀಡಿದೆ. ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ -

ಹವಾಮಾನ ಕಚೇರಿಯ ಪ್ರಕಾರ, ಎರ್ನಾಕುಲಂ ಭಾನುವಾರ 122.2 ಮಿಮೀ ಮಳೆಯಾಗಿದೆ, ಇದು ದಿನದ ಸಾಮಾನ್ಯ ಮಳೆ ಪ್ರಮಾಣ 8.3 ಮಿಮೀಗಿಂತ 13 ಪಟ್ಟು ಹೆಚ್ಚಾಗಿದೆ. ಕೊಲ್ಲಂನಲ್ಲಿ 113.6 ಮಿಮೀ ಮಳೆಯಾಗಿದೆ, ತಿರುವನಂತಪುರಂನಲ್ಲಿ (109.1 ಮಿಮೀ), ಆಲಪ್ಪುಳ (97.4 ಮಿಮೀ), ಪತ್ತನಮಿತಾ (85.1 ಮಿಮೀ), ತ್ರಿಶೂರ್ (81.6 ಮಿಮೀ) ಮತ್ತು ಕೊಟ್ಟಾಯಂ (74.3 ಮಿಮೀ) ಮಳೆಯಾಗಿದೆ.

ಇದನ್ನೂ ಓದಿ..ಕಾಂಗ್ರೆಸ್ ಪಕ್ಷದ ಚಿಂತನ ಶಿಬಿರ ಸಮಾರೋಪ: ಭಾರತ ಜೋಡೋ ಯಾತ್ರೆಗೆ ‘ಕೈ’ ಸಜ್ಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.